ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ: ಚಂದನ್ ಶೆಟ್ಟಿ ಮನವಿ

ಬೆಂಗಳೂರು ಆಗಸ್ಟ್ 19: ಪ್ರವಾಹದಿಂದ ತೊಂದರೆಗೀಡಾಡಿರುವ ಕೊಡಗು ಹಾಗೂ ಇನ್ನಿತರ ಜಿಲ್ಲೆಯ ಜನರ ನೆರವಿಗೆ ಧಾವಿಸುವಂತೆ ಕನ್ನಡದ ಖ್ಯಾತ rapper ಚಂದನ್ ಶೆಟ್ಟಿ ಅವರು ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡಗು ಹಾಗೂ ಇನ್ನಿತರ ಜಿಲ್ಲೆಗಳು ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿಗೆ ತಲುಪಿದೆ. ಈ ಸಮಯದಲ್ಲಿ ಅವರ ನೆರವಿಗೆ ನಾವು ನಿಲ್ಲಬೇಕು. ನಿಮ್ಮ ಕೈಲಾದ ಸಹಾಯವನ್ನು ಜನರು ಮಾಡಬೇಕು ಎಂದು ಕರೆ ನೀಡಿದರು.

ಇದೇ ವೇಳೆ ತಾವೂ ಕೂಡಾ ತಮ್ಮ ಕಡೆಯಿಂದ ಆಗುವ ಸಹಾಯವನ್ನು ಮಾಡುವುದಾಗಿ ತಿಳಿಸಿದ ಅವರು ಈ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

Kannada rapper Chandan Shetty and tv artist appeal to donate to Kodagu

ಈ ನಡುವೆ ಕಿರುತೆರೆ ತಾರೆಗಳಾದ ದೀಪಿಕಾ ದಾಸ್, ಅನುಪಮಾ ಗೌಡ, ಆಶೀತಾ ಚಂದ್ರಪ್ಪ, ಶ್ವೇತಾ ಚೆಂಗಪ್ಪ, ರಂಜನಿ ರಾಘವನ್, ಕಿರಿಕ್ ಕೀರ್ತಿ, ಶ್ವೇತಾ ಆರ್ ಪ್ರಸಾದ್, ಸೃಜನ್ ಲೋಕೇಶ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊಡಗು ಜನತೆಯ ನೆರವಿಗೆ ನಿಂತ 'ಡಿ-ಬಾಸ್' ಮತ್ತು 'ಕಿಚ್ಚ ಸುದೀಪ್'

ಕೊಡಗು ಪ್ರವಾಹಪೀಡಿತ ಜನರಿಗೆ ಅಕ್ಕಿ, ಗೋಧಿ, ರೆಡಿ ಟು ಈಟ್ ಫುಡ್, ಟೂತ್​ ಪೇಸ್ಟ್​, ಸೋಪು, ಟಾರ್ಚ್​, ಮ್ಯಾಚ್​ ಬಾಕ್ಸ್​, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್, ಬ್ಲಾಂಕೇಟ್​​ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ ಎಂದು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+