ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ ಜಾನಪದ ದಸರಾ ಸಂಭ್ರಮ; ಅಪರೂಪದ ವಸ್ತು ಪ್ರದರ್ಶನ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಅಕ್ಟೋಬರ್ 17: ಕೊರೊನಾ ಭೀತಿಯ ನಡುವೆ ಮನಸ್ಸಿಗೆ ಒಂದಿಷ್ಟು ಹಿತ ನೀಡಲು ಮಡಿಕೇರಿಯ ಗಾಂಧಿ ಮೈದಾನದ ಪಕ್ಕದಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿರುವ ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಜಾನಪದ ವಸ್ತುಗಳ ಪ್ರದರ್ಶನ ಆರಂಭವಾಗಿದೆ.

ರೋಟರಿ ಮಿಸ್ಟಿ ಹಿಲ್ಸ್ ನ ಸದಸ್ಯರೂ ಆಗಿರುವ ಪೊನ್ನಚ್ಚನ ಮಧು ಮತ್ತು ಪ್ರೀತು ದಂಪತಿ ಕಳೆದ 3 ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಸಂಚರಿಸಿ ಸಂಗ್ರಹಿಸಿದ ಕೊಡಗಿನ ಹಳೇ ಕಾಲದ ವಸ್ತುಗಳು ಮತ್ತು ದೇಶದ ಹಲವೆಡೆಗಳ ಅಮೂಲ್ಯವಾದ ಜಾನಪದ ವಸ್ತುಗಳನ್ನು ಇಲ್ಲಿಟ್ಟಿದ್ದಾರೆ.

 ಮಂಜಿನ ನಗರಿಯ ದಸರಾ ಕರಗ ಉತ್ಸವ ಈ ಬಾರಿ 2 ದಿನಕ್ಕೆ ಸೀಮಿತ ಮಂಜಿನ ನಗರಿಯ ದಸರಾ ಕರಗ ಉತ್ಸವ ಈ ಬಾರಿ 2 ದಿನಕ್ಕೆ ಸೀಮಿತ

ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಅ.16ರಿಂದ ಅಕ್ಟೋಬರ್ 26 ರವರೆಗೆ ಜಾನಪದ ದಸರಾ ಅಂಗವಾಗಿ ಇಲ್ಲಿ ಜಾನಪದದ ಅಪರೂಪದ ವಸ್ತುಗಳು ಪ್ರದರ್ಶನಕ್ಕಿಡಲಾಗಿದೆ. ಈ ಜಾನಪದ ದಸರಾವನ್ನು ನ್ಯಾಯಾಧೀಶೆ ನೂರುನ್ನೀಸಾ ಅ.16ರ ಶುಕ್ರವಾರ ಉದ್ಘಾಟಿಸಿದರು. ಹಿರಿಯರನ್ನು ನಿರ್ಲಕ್ಷಿಸುತ್ತಿರುವಂತೆಯೇ ಹಳೇ ಕಾಲದ ವಸ್ತುಗಳನ್ನೂ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಇಂಥ ಜಾನಪದ ಪರಿಕರಗಳ ಪ್ರದರ್ಶನದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

Madikeri: Janapada Exhibition Started Onbehalf Of Dasara

ಜಾನಪದ ವಸ್ತುಗಳ ಸಂಗ್ರಾಹಕ ಪೊನ್ನಚ್ಚನ ಮಧು ಮಾತನಾಡಿ, ತಾನು ಹಳೇ ವಸ್ತುಗಳ ಗುಜರಿಗೆ ಹೋದಾಗ ಅಲ್ಲಿದ್ದ ಅರಿಫಾ ಮುನಾವರ್ ಎಂಬ ಅಜ್ಜಿಯೊಬ್ಬರು ಅಪರೂಪದ ಗಡಿಯಾರ ನೀಡಿ ಇದನ್ನು ನಿನ್ನಲ್ಲಿಟ್ಟುಕೋ, ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭಿಸು ಎಂದದ್ದೇ ತನ್ನ ಸಂಗ್ರಹ ಇಷ್ಟೊಂದು ಬೃಹತ್ತಾಗಿ ಬೆಳೆಯಲು ಕಾರಣ ಎಂದು ಸ್ಮರಿಸಿದರು.

ಹಳೇ ಕಾಲದ ಅನೇಕ ವಸ್ತುಗಳು ಜಾನಪದ ದಸರಾದಲ್ಲಿ ಕಂಗೊಳಿಸುತ್ತಿದ್ದು, ಅಕ್ಟೋಬರ್ 26ರವರೆಗೆ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

Madikeri: Janapada Exhibition Started Onbehalf Of Dasara

Recommended Video

Political Popcorn with Lavanya : Dr BL Shankar, ನನ್ ಜೀವನದಲ್ಲಿ ನಾನು ಮಾಡಿದ ಎರಡು ತಪ್ಪು ಯಾವುದು ಗೊತ್ತಾ??

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಸ್ಯಾನಿಟೈಸರ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ.ಮನವಿ ಮಾಡಿದ್ದಾರೆ. ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಸ್ವಾದಿಷ್ಟ ಕಾಫಿ ಕೂಡ ದೊರಕುತ್ತದೆ. ಕಾಫಿ ಹೀರಲು ಮರೆಯದಿರಿ...

English summary
Janapada exhibition started at madikeri on behalf of dasara. The exhibition is at sparrow coffee shop near Madikeri's Gandhi Ground till october 26,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X