ಭೂಕುಸಿತದ ಕಾರಣ ಪತ್ತೆಗಾಗಿ ಕೊಡಗಿಗೆ ಭೇಟಿ ನೀಡಿದ ಇಸ್ರೋ ವಿಜ್ಞಾನಿಗಳು
ಕೊಡಗು, ಆಗಸ್ಟ್ 22: ಕೊಡಗಿನ ಪ್ರವಾಹದಿಂದ ಉಂಟಾಗಿರುವ ಭಾರಿ ಭೂಕುಸಿತ ಸೋಜಿಗ ಹುಟ್ಟಿಸಿದ್ದು, ಇದರ ಅಧ್ಯಯನಕ್ಕೆಂದು ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಕೊಡಗಿಗೆ ಭೇಟಿ ನೀಡಿದ್ದರು.
ಕೊಡಗಿನ ಜೋಡುಪಾಲ, ಅರೇಕಲ್ಲಿಗೆ ಸೇರಿ ಇನ್ನೂ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ಇಸ್ರೋ ತಂಡದ ಜಿಯೋಲಾಜಿಕಲ್ ಸರ್ವೆ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ನಮೂನೆಗಳನ್ನು ಅಧ್ಯಯನಕ್ಕೆ ಪಡೆದುಕೊಂಡರು, ಜೊತೆಗೆ ಹಲವು ಚಿತ್ರಗಳನ್ನೂ ತೆಗೆದುಕೊಂಡರು.
ಗುಡ್ಡ ಪ್ರದೇಶಗಳಲ್ಲಿ ನೀರು ಇಂಗಿ ಸ್ಫೋಟಗೊಂಡು ಹೊರಬಂದಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಪಶ್ಚಿಮ ಘಟ್ಟಗಳಲ್ಲಿ ಮಾನವ ಅತಿಕ್ರಮಣವೂ ಗುಡ್ಡಗಳು ಕುಸಿಯಲು ಕಾರಣ ಇರಬಹುದೆಂಬ ಶಂಕೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದರು.

ಮದೆನಾಡು, ಜೋಡುಪಾಲ, ಅರೆಕಲ್ ಪ್ರದೇಶಗಳು ಮಾನವ ವಾಸಕ್ಕೆ ಯೋಗ್ಯವಾಗಿಲ್ಲ, ಈ ಪ್ರದೇಶಗಳಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದರು.

ಪ್ರಸ್ತುತ ಪ್ರಾಥಮಿಕ ವರದಿ ನೀಡುತ್ತೇವೆ, ಪೂರ್ಣ ವರದಿಯನ್ನು ಪರಿಶೀಲನೆ ಮುಕ್ತಾಯವಾಗಿ ತನಿಖೆ ನಡೆಸಿದ ಮೇಲೆ ನೀಡುತ್ತೇವೆ ಇದಕ್ಕೆಲ್ಲಾ ಎರಡು ತಿಂಗಳ ಸಮಯ ಹಿಡಿಯಬಹುದು ಎಂದರು.












Click it and Unblock the Notifications