ಹಾರಂಗಿ ಜಲಾಶಯಕ್ಕೆ ಎದುರಾಗುತ್ತಿದೆಯೇ ಗಂಡಾಂತರ?

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜೂನ್ 20: ರಾಜ್ಯದಲ್ಲಿರುವ ಜಲಾಶಯಗಳನ್ನು ಕಣ್ಣಿಟ್ಟು ಕಾಯಲಾಗುತ್ತಿದೆ. ಜತೆಗೆ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ. ಆದರೆ ಕೊಡಗಿನಲ್ಲಿರುವ ಹಾರಂಗಿ ಜಲಾಶಯದ ಸುತ್ತ ನಡೆಯುತ್ತಿರುವ ಚಟುವಟಿಕೆಯನ್ನು ಗಮನಿಸಿದರೆ ಭದ್ರತೆಯ ಭಯ ಕಾಡುತ್ತಿರುವುದಂತೂ ಸತ್ಯ.

ಹಾಗೆ ನೋಡಿದರೆ ಹಾರಂಗಿ ಜಲಾಶಯ ಕೊಡಗಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಳೆದೊಂದು ದಶಕದಿಂದೀಚೆಗೆ ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದ್ದು, ಹೋಂ ಸ್ಟೇ, ರೆಸಾರ್ಟ್‍ ಗಳು ತಲೆ ಎತ್ತಿವೆ.

ಮಡಿಕೇರಿಯಲ್ಲಿ ಭತ್ತದ ಬೆಳೆ ಕುಂಠಿತವಾಗಿದ್ದು ಯಾಕೆ?

ಇಂತಹ ರೆಸಾರ್ಟ್‍ ಗಳು ಜಲಾಶಯದ ಹಿನ್ನೀರು ಪ್ರದೇಶ ಹಾಗೂ ಎದುರು ಮಾರ್ಗದಲ್ಲಿಯೂ ನಿರ್ಮಾಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ ಕಾನೂನು, ಕಾಯ್ದೆಯನ್ನು ಉಲ್ಲಂಘಿಸಿ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ಭಯಕ್ಕೆ ಕಾರಣವಾಗಿದೆ.

ಜಲಾಶಯ ವ್ಯಾಪ್ತಿಗೆ ಸೇರುವ ಸುಮಾರು 275 ಎಕರೆ ಜಾಗದಲ್ಲಿ ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಗೆ ನೀಡಲಾಗಿದ್ದರೆ, ಉಳಿದಂತೆ 133 ಎಕರೆ ಪ್ರದೇಶಗಳಲ್ಲಿ ಜನ ವಸತಿ ನಿರ್ಮಾಣವಾಗಿದೆ. ಇದರೊಂದಿಗೆ ಜಲಾಶಯದ ಮುಂಭಾಗದ ಪ್ರದೇಶಗಳಲ್ಲಿ ಪ್ರಾರ್ಥನಾ ಮಂದಿರಗಳು ಸೇರಿದಂತೆ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ.

ತಲೆ ಎತ್ತುತ್ತಿವೆ ರೆಸಾರ್ಟ್

ತಲೆ ಎತ್ತುತ್ತಿವೆ ರೆಸಾರ್ಟ್

ಜಲಾಶಯ ವ್ಯಾಪ್ತಿಯಲ್ಲಿ ಹತ್ತಾರು ರೆಸಾರ್ಟ್‍ ಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿನ ತ್ಯಾಜ್ಯಗಳು ಜಲಾಶಯ ಸೇರುವ ಆತಂಕವೂ ಎದುರಾಗಿದೆ. ಈ ರೆಸಾರ್ಟ್‍ ಗಳನ್ನು ಎತ್ತಗಂಡಿ ಮಾಡಿ ಎನ್ನುವ ದೂರನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ನೆನಪಿನ ಬುತ್ತಿ ಬಿಚ್ಚಿಡುವ ಕೊಡಗಿನ ಸುಂದರ ಮಳೆ

ಆಕ್ಷೇಪಿಸಿದರೆ ಕೇಳೋರಿಲ್ಲ!

ಆಕ್ಷೇಪಿಸಿದರೆ ಕೇಳೋರಿಲ್ಲ!

ಇನ್ನು ಜಲಾಶಯದ ಕೆಲಸಕ್ಕೆಂದು ಆಗಮಿಸಿದ ಕೂಲಿ ಕಾರ್ಮಿಕರು ಅವತ್ತು ಶೆಡ್ ನಿರ್ಮಾಣ ಮಾಡಿಕೊಂಡು ವಾಸ್ತವ್ಯ ಹೂಡಿದ್ದು, ಇದೀಗ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಇವರಿಗೆ ಕೂಡುಮಂಗಳೂರು ಗ್ರಾಪಂ ಮತದಾನದ ಹಕ್ಕು ಸೇರಿದಂತೆ ನೀರು, ವಿದ್ಯುತ್ ಸೇರಿದಂತೆ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಇದಕ್ಕೆ ಹಾರಂಗಿ ಯೋಜನೆಯ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ನಂಬುವುದು ಹೇಗೆ?

ನಂಬುವುದು ಹೇಗೆ?

ಈಗಾಗಲೇ ನಿರ್ಮಾಣವಾಗಿರುವ ರೆಸಾರ್ಟ್‍ ಗಳಿಗೆ ಪ್ರವಾಸಿಗರು ಆಗಮಿಸಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಹೀಗಿರುವಾಗ ರೆಸಾರ್ಟ್‍ ಗಳಿಗೆ ಆಗಮಿಸುವ ಜನರೆಲ್ಲರನ್ನು ನಂಬುವುದು ಹೇಗೆ? ಹೀಗಾಗಿ ಈ ರೆಸಾರ್ಟ್‍ ಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದರೊಂದಿಗೆ ಅಣೆಕಟ್ಟೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್ ಇಲಾಖೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮುದುಡಿದ 'ಕಮಲ' ಅರಳೋದ್ಯಾವಾಗ?

ಗಂಡಾಂತರ ತಪ್ಪಿಸಿ

ಗಂಡಾಂತರ ತಪ್ಪಿಸಿ

ಇನ್ನಾದರೂ ಹಾರಂಗಿ ಜಲಾಶಯದತ್ತ ಸಂಬಂಧಿಸಿದವರು ಗಮನಹರಿಸಬೇಕಾಗಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಗಂಡಾಂತರ ಎದುರಾಗುವುದರಲ್ಲಿ ಸಂಶಯವಿಲ್ಲ.

ತಲಕಾವೇರಿ ಕಡೆ ಹೊರಟಿದೀರಾ? ಒಂದೆರಡು ದಿನ ಪೋಸ್ಟ್ ಪೋನ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Illegal construction of resorts and buildings are affecting on natural beauty of Harangi dam.
Please Wait while comments are loading...