ಕಾರ್ಯಪ್ಪ ಅವರಿಗೆ ಭಾರತರತ್ನ ಸಿಗಬೇಕು: ಸೇನಾ ಮುಖ್ಯಸ್ಥ ಬಿಪಿನ್
ಮಡಿಕೇರಿ, ನವೆಂಬರ್ 04: ಭಾರತದ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರಿಗೆ ಭಾರತದ ಅತ್ಯುನ್ನತ ನಾಗರೀಕ ಗೌರವ ಭಾರತರತ್ನ ಸಂದಾಯವಾಗಬೇಕಿದೆ ಎಂದು ಭಾರತದ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದರು.
ಗೋಣಿಕೊಪ್ಪಲಿನ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿರುವ ಬಿಪಿನ್ ರಾವತ್ ಅವರು ಮಾತನಾಡಿ,ಭಾರತ ರತ್ನ ಬೇರೆಯವರಿಗೆ ಸಿಕ್ಕಿದೆಯೆಂದರೆ, ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರಿಗೆ ಯಾಕೆ ಸಿಗಬಾರದು? ಅವರಿಗೆ ಭಾರತ ರತ್ನ ಪಡೆಯುವ ಎಲ್ಲಾ ಅರ್ಹತೆ ಇದೆ ಎಂದರು.

ಭಾರತದ ಭೂ ಸೇನೆಯ ಪ್ರಪ್ರಥಮ ಕಮ್ಯಾಂಡರ್ ಇನ್ ಚೀಫ್ ಆಗಿದ್ದ ಕಾರ್ಯಪ್ಪ ಅವರು 1947ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದರು. ಫೈವ್ ಸ್ಟಾರ್ ಶ್ರೇಯಾಂಕ ಪಡೆದು ಫೀಲ್ಡ್ ಮಾರ್ಷಲ್ ಎನಿಸಿಕೊಂಡ ಸೇನಾಧಿಕಾರಿಗಳ ಪೈಕಿ ಮಾನೇಕ್ ಶಾ ಹೊರತುಪಡೆಸಿದರೆ ಕಾರ್ಯಪ್ಪ ಅವರು ಪ್ರಮುಖರು.












Click it and Unblock the Notifications