ಶನಿವಾರಸಂತೆಯಲ್ಲಿ ಏರ್ಪಟ್ಟ ಮದುವೆಯೋ-ಮಸಣವೋ ಎಂಬ ಸಂದಿಗ್ಧ
ಶನಿವಾರಸಂತೆ, ಜೂನ್ 2: ಸಂದಿಗ್ಧಗಳು ಯಾವ ರೀತಿ ಎದುರಾಗುತ್ತವೆ ಅನ್ನೋದಕ್ಕೆ ಈ ವರದಿ ಒಂದು ನಿದರ್ಶನ. ಮದುವೆ ದಿನವೇ ವಧುವಿನ ಅಜ್ಜ ತೀರಿಕೊಂಡುಬಿಟ್ಟರು. ಮುಹೂರ್ತಕ್ಕೆ ಇನ್ನು ಎರಡು ಗಂಟೆ ಸಮಯ ಇದೆ. ಅಭ್ಯಾಗತರೆಲ್ಲ ಕಲ್ಯಾಣ ಮಂಟಪದಲ್ಲಿದ್ದಾರೆ. ಅಲ್ಲಿನ ಸಂಭ್ರಮ, ನಿರೀಕ್ಷೆಗಳು ಕ್ಷಣಕ್ಷಣಕ್ಕೂ ಕಳೆ ಕಟ್ಟುತ್ತಿರುವಾಗಲೇ ಸಾವಿನ ಸುದ್ದಿ ಎರಗಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾದೇವಿ ಹಾಗೂ ಬಸವರಾಜ್ ದಂಪತಿಯ ಮಗಳ ಮದುವೆ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ ಹತ್ತು ಮೂವತ್ತಕ್ಕೆ ಎಂದು ಮುಹೂರ್ತ ನಿಗದಿಯಾಗಿತ್ತು. ಬಸವರಾಜ್ ಅವರ ತಂದೆ ಅಂದರೆ ವಧುವಿನ ಅಜ್ಜ ಶಕುನಮರಿ ಶೆಟ್ಟಿ ಅವರು ಬೆಳಗ್ಗೆ ಮದುವೆಗೂ ಮೊದಲೇ ಹೃದಯಾಘಾತದಿಂದ ತೀರಿಕೊಂಡರು.[ಮಕ್ಕಳ ಶಿಕ್ಷಣದ ಸಲುವಾಗಿ ಕಿಡ್ನಿ ಮಾರಲು ಮುಂದಾದ ಮಹಾತಾಯಿ]

ಇಷ್ಟೆಲ್ಲ ತಯಾರಿ ಆಗಿದ್ದು, ಒಂದೆರಡು ಗಂಟೆಯಲ್ಲೇ ಮುಗಿಯುವ ಮದುವೆ ನಡೆಸುವುದೋ ಅಥವಾ ನಿಲ್ಲಿಸಿ, ಅಂತ್ಯಕ್ರಿಯೆಗೆ ತೆರಳುವುದೋ ಎಂಬ ಗೊಂದಲ ಕೆಲ ಹೊತ್ತು ಮುಂದುವರಿದು, ಕೊನೆಗೆ ಮಗಳನ್ನು ಧಾರೆ ಎರೆದುಕೊಟ್ಟು ಮುಂದಿನ ಕೆಲಸ ಮಾಡಲು ನಿರ್ಧರಿಸಲಾಯಿತು.[ಮೃತಪಟ್ಟ ಕರುವಿನ ಮುಂದೆ ನಿಂತು ಆ ಆಕಳು ಮಾಡಿದ್ದೇನು?]
ಮದುವೆಗೆ ಬಂದ ಅಭ್ಯಾಗತರು ನವ ದಂಪತಿಯನ್ನು ಹರಸಿ, ಊಟ ಮಾಡಿ ತೆರಳಿದರು. ಆ ನಂತರ ಶಕುನಮರಿ ಶೆಟ್ಟಿ ಅವರ ಅಂತ್ಯಸಂಸ್ಕಾರ ಮುಕ್ತಿಧಾಮದಲ್ಲಿ ನಡೆಯಿತು.












Click it and Unblock the Notifications