ನಟಿ ರಮ್ಯ ವಿರುದ್ಧದ ಪ್ರಕರಣ ವಜಾಗೊಳಿಸಿದ ಕೋರ್ಟ್

Subscribe to Oneindia Kannada

ಸೋಮವಾರಪೇಟೆ, ಏಪ್ರಿಲ್ 19: ನಟಿ ರಮ್ಯಾ ವಿರುದ್ಧ ದಾಖಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸೋಮವಾರ ಪೇಟೆ ಜೆಎಂಎಫ್ಸಿ ನ್ಯಾಯಾಲಯ ವಜಾಗೊಳಿಸಿದೆ.

2016 ಪಾಕಿಸ್ತಾನಕ್ಕೆ ಭೇಟಿ ನೀಡಿ ಭಾರತಕ್ಕೆ ಬಂದಿದ್ದ ರಮ್ಯಾ "ಪಾಕಿಸ್ತಾನ ನರಕವಲ್ಲ. ಅಲ್ಲೂ ಒಳ್ಳೆಯವರಿದ್ದಾರೆ," ಎಂದು ಹೇಳಿಕೆ ನೀಡಿದ್ದರು. ಈ ಸಂದರ್ಭ ಇಲ್ಲಿನ ವಕೀಲ ಕಾಟ್ನಮನೆ ವಿಠಲ ಗೌಡ, "ರಮ್ಯಾ ಪಾಕಿಸ್ತಾನ ಪರ ಹೇಳಿಕೆ ನೀಡಿ ರಾಷ್ಟ್ರದ್ರೋಹ ಎಸಗಿದ್ದಾರೆ," ಎಂದು ಆರೋಪಿಸಿ ಜೆಎಂಎಫ್ ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ಆಗಸ್ಟ್ 23ರಂದು ಪ್ರಕರಣ ದಾಖಲಿಸಿದ್ದರು.[ಕೊಡವ ಹಾಕಿ ಹಬ್ಬಕ್ಕೆ ಸಜ್ಜಾದ ನಾಪೋಕ್ಲು, ಏ. 17ರಿಂದ ಆರಂಭ]

Court dropped sedition charges against Actress Ramya

ರಮ್ಯಾ ವಿರುದ್ಧದ ಈ ಪ್ರಕರಣವನ್ನು ಕಿರಿಯ ಸಿವಿಲ್ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಮಾರ್ಚ್ 27ರಂದು ವಜಾಗೊಳಿಸಿದ್ದಾರೆ.

ರಮ್ಯಾ ವಿರುದ್ಧ ಸೆಕ್ಷನ್ 124-ಎ ಪ್ರಕಾರ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿತ್ತು. ಆದರೆ ರಾಷ್ಟ್ರ ದ್ರೋಹದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಮತ್ತು ಹೇಳಿಕೆ ರಾಷ್ಟ್ರದ್ರೋಹದ ವ್ಯಾಪ್ತಿಗೂ ಬರುವುದಿಲ್ಲ ಎಂದು ಹೇಳಿ ನ್ಯಾಯಾಲಯ ಪ್ರಕರಣವನ್ನು ಕೈಬಿಟ್ಟಿದೆ.[ಕಾಂಗ್ರೆಸ್ ಬಿಡ್ತೀರಾ ಅಂದಿದ್ದಕ್ಕೆ ಅಂಬರೀಷಣ್ಣ ಏನಂದ್ರು ಗೊತ್ತಾ?]

ಪ್ರಕರಣ ವಜಾಗೊಳಿಸುವ ವೇಳೆ, "ಪಾಕಿಸ್ತಾನವನ್ನು ಭಾರತ ಶತ್ರು ರಾಷ್ಟ್ರವೆಂದು ಘೋಷಿಸಿಲ್ಲ. ಪಾಕಿಸ್ತಾನದ ಸೈನಿಕರು ಉಗ್ರರು ನಮ್ಮ ಸೈನಿಕರನ್ನು ಕೊಂದಿರಬಹುದು. ಹಾಗೆಂದ ಮಾತ್ರಕ್ಕೆ ಅಲ್ಲಿನ ಜನರನ್ನು ತಪ್ಪಿತಸ್ಥರು ಎನ್ನಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ಻ಅಭಿಪ್ರಾಯಪಟ್ಟಿದೆ.

ಆದರೆ ನ್ಯಾಯಾಲಯದ ಆದೇಶವನ್ನು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕಾಟ್ನಮನೆ ವಿಠಲಗೌಡ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Somwarpet JMFC court dropped sedition charges against film actress Ramya. The complaint was filed against Ramya in Kodagu, under sections 124 -A of the Indian Penal Code on August 23, 2016.
Please Wait while comments are loading...