ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸದಸ್ಯರಿಂದ ಕೊಡಗಿನಲ್ಲಿ ಸಿದ್ದರಾಮಯ್ಯನವರ ಕಾರಿಗೆ ಘೇರಾವ್

|
Google Oneindia Kannada News

ಮಡಿಕೇರಿ, ಆಗಸ್ಟ್ 18: ಕೊಡಗು ಜಿಲ್ಲೆಯಲ್ಲಿ ಪ್ರವಾಸ ನಿರತ ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಬಲಪಂಥೀಯ ಸದಸ್ಯರು, ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಲು ಪ್ರಯತ್ನಿಸಿದ ಘಟನೆ ನಡೆದಿದೆ. ವಿನಾಯಕ್ ದಾಮೋದರ ಸಾವರ್ಕರ್ ಅವರ ಫೋಟೋ ಹಿಡಿದು ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದಾಗ ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ಕಾರಿಗೆ ಸಾವರ್ಕರ್ ಫೋಟೋವನ್ನು ಎಸೆದಿರುವುದು ಕಂಡು ಬಂದಿದೆ. ಬಿಜೆಪಿ ಪಕ್ಷ ಕೊಡಗುವಿನಲ್ಲಿ "ಗೋ ಬ್ಯಾಕ್ ಸಿದ್ದರಾಮಯ್ಯ" ಎಂಬ ಟ್ರೆಂಡ್ ಅನ್ನು ಪ್ರಾರಂಭಿಸಿದೆ ಮತ್ತು ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನನ ವಿದ್ಯಾರ್ಥಿ ಎಂದು ಕರೆದಿದೆ.

ಅಭಿಯಾನದ ಪೋಸ್ಟರ್‌ನಲ್ಲಿ '' ಕೊಡಗಿಗೆ ಸಿದ್ಧುಖಾನ್ ಕೊಡಗಿಗೆ ಸೂತಕ. ಗೋಮಾತೆಯನ್ನು ಪೂಜಿಸುವ ಕೊಡವರನ್ನು ಗೋಮಾಂಸ ಭಕ್ಷಕರೆಂದು ಹೇಳಿದ ಕೊಡವ ವಿರೋಧಿ ಸಿದ್ಧೂಖಾನ್... # ಗೋಬ್ಯಾಕ್. ಬಿಜೆಪಿ ಯುವ ಮೋರ್ಚಾ, ಕೊಡಗು'' ಎಂದು ಬರೆಯಲಾಗಿದೆ.

Breaking; ಭಾರೀ ಮಳೆ, ಮಡಿಕೇರಿ-ಮಂಗಳೂರು ರಸ್ತೆ ಬಂದ್Breaking; ಭಾರೀ ಮಳೆ, ಮಡಿಕೇರಿ-ಮಂಗಳೂರು ರಸ್ತೆ ಬಂದ್

ಎರಡು ಗುಂಪುಗಳ ನಡುವೆ ಘರ್ಷಣೆ

ಎರಡು ಗುಂಪುಗಳ ನಡುವೆ ಘರ್ಷಣೆ

ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್‌ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದಾರೆ. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದಾರೆ. ಅಲ್ಲದೇ ಹಿಂದೂ ಸಂಘಟನೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪರಸ್ಪರ ಪರ-ವಿರೋಧದ ಘೋಷಣೆ ಕೂಗಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದರು

ಅಮೃತ ಮಹೋತ್ಸವ ಅಂಗವಾಗಿ ಮೊನ್ನೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಈ ಪ್ರದರ್ಶ ವೇಳೆ ವೀರ ಸಾವರ್ಕರ್ ಫೋಟೋವನ್ನು ಸಹ ಇಡಿಸಲಾಗಿತ್ತು. ಆದ್ರೆ, ಇದಕ್ಕೆ ಮುಸ್ಲಿಂ ಮುಖಂಡನೊಬ್ಬ ವಿರೋಧಿಸಿ ಸಾರ್ವಕರ್ ಫೋಟೋ ತೆಗೆಸಿದ್ದರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಆರೋಪ

ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಆರೋಪ

ಶಿವಮೊಗ್ಗದ ಶಿವಪ್ಪನಾಯಕ ಮಾಲ್‍ನಲ್ಲಿ ಗೊಂದಲ ಏರ್ಪಟ್ಟಿತ್ತು. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಭಗತ್ ಸಿಂಗ್, ಸರ್ದಾರ್ ವಲ್ಲಭಬಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಅಂಬೇಡ್ಕರ್, ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾಲ್‍ನಲ್ಲಿ ಛಾಯಾಚಿತ್ರ ಪ್ರದರ್ಶನ ಗಮನಿಸಿದ ಎಸ್‍ಡಿಪಿಐ ಕಾರ್ಯಕರ್ತರು ರೊಚ್ಚಿಗೆದ್ದು, ಫೋಟೋ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಹಾಕುವಂತೆ ಆಗ್ರಹಿಸಿದ್ದರು. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಎಸ್‍ಡಿಪಿಐ ಕಾರ್ಯಕರ್ತರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಎಸ್‍ಡಿಪಿಐ ಕಾರ್ಯಕರ್ತರು ಅವಮಾನ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಅಮೃತ ಮಹೋತ್ಸವದ ಸಂಭ್ರಮಕ್ಕೆ ಅಡ್ಡಿ

ಅಮೃತ ಮಹೋತ್ಸವದ ಸಂಭ್ರಮಕ್ಕೆ ಅಡ್ಡಿ

ಘಟನೆ ಬಳಿಕ ಎಚ್ಚೆತ್ತ ಮಾಲ್ ಸಿಬ್ಬಂದಿ ವೀರ ಸಾವರ್ಕರ್ ಭಾವಚಿತ್ರ ಮತ್ತೆ ಹಾಕುವುದರ ಜೊತೆಗೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಅಳವಡಿಸಿದರು. ಅಲ್ಲದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಕೆಲವು ಮುಸ್ಲಿಂ ಯುವಕರ ವಿರುದ್ದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಭಾವಚಿತ್ರದ ಗೊಂದಲ ಕೆಲಕಾಲ ಅಮೃತ ಮಹೋತ್ಸವದ ಸಂಭ್ರಮಕ್ಕೆ ಅಡ್ಡಿಯಾಗಿತ್ತು.

ಬಿಜೆಪಿಯವರೇ ಕಾರಣ ಎಂದ ಸಿದ್ದರಾಮಯ್ಯ

ಬಿಜೆಪಿಯವರೇ ಕಾರಣ ಎಂದ ಸಿದ್ದರಾಮಯ್ಯ

ಹಿಂಸಾಚಾರದ ನಂತರ, ಶಿವಮೊಗ್ಗದ ಗಾಂಧಿ ಬಜಾರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಅವರ ಪೋಸ್ಟರ್‌ಗಳ ಹಿಂಸಾಚಾರಕ್ಕೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ದೂಷಿಸಿಕೊಂಡಿವೆ.

ಘಟನೆಗೆ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಇದು ಬಿಜೆಪಿಯ ಯೋಜಿತ ಪ್ರಯತ್ನ ಎಂದಿದ್ದಾರೆ. ಸಾವರ್ಕರ್ ಫೋಟೋವನ್ನು ಎಲ್ಲಿ ಹಾಕಬೇಕೆಂದು ಯೋಚಿಸಿದರು. ವಿಶೇಷವಾಗಿ ಮುಸ್ಲಿಂ ಪ್ರದೇಶದಲ್ಲಿ ಇದನ್ನು ಹಾಕಿದರು. ಅವರು ಅದನ್ನು ನಿರಾಕರಿಸಿದರು. ಅಲ್ಲಿ ಟಿಪ್ಪು ಸುಲ್ತಾನ್‌ನ ಪೋಸ್ಟರ್ ಹಾಕಲು ಒತ್ತಾಯಿಸಿದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇನ್ನು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿ ನಮ್ಮ ಮೇಲೆ ಆರೋಪ ಹೊರಿಸಲು ಯತ್ನಿಸಿದ್ದಾರೆ ಎಂದಿದ್ದರು.

ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಮಾತ್ರವಲ್ಲದೆ ದಕ್ಷಿಣದಲ್ಲಿ ದೇಶದಾದ್ಯಂತ ಪಿಎಫ್‌ಐ, ಎಸ್‌ಡಿಪಿಐ ಮುಂತಾದ ದೇಶವಿರೋಧಿ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

English summary
In Karnataka's Kodagu district, BJP activists tried to gherao the car of Karnataka opposition leader Siddaramaiah, holding a photo of Vinayak Damodar Savarkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X