ಮಂಜಿನ ನಗರಿ ಮಡಿಕೇರಿಯಲ್ಲಿ ಮನಸೂರೆಗೊಂಡ ಧ್ವನಿ ಬೆಳಕು

Written By: Ramesh
Subscribe to Oneindia Kannada

ಮಡಿಕೇರಿ, ಫೆಬ್ರವರಿ. 07 : ವಾತಾ೯ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು-ಸಾಧನೆಗಳನ್ನು ಬಿಂಬಿಸುವ 6ನೇ ದಿನದ ಭಾರತ ಭಾಗ್ಯ ವಿಧಾತ: ಧ್ವನಿ ಬೆಳಕು ಕಾರ್ಯಕ್ರಮ ಸೋಮವಾರ ಮಡಿಕೇರಿಯಲ್ಲಿ ಜನಮನ ಸೂರೆಗೊಂಡಿತು.

ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದ ಭಾರತ ಭಾಗ್ಯ ವಿಧಾತ:ಧ್ವನಿ ಬೆಳಕು ರಂಗ ಪ್ರದರ್ಶನಕ್ಕೆ ಕೊರೆಯುವ ಛಳಿಯಲ್ಲೂ ಕಳೆ ಗಟ್ಟಿದ ಪ್ರದರ್ಶನಕ್ಕೆ ಛಳಿಯನ್ನು ಲೆಕ್ಕಿಸದೇ ಭಾರಿ ಸಂಖ್ಯೆಯಲ್ಲಿ ಜನ ಸಾಗರ ಹರಿದು ಬಂದಿತ್ತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು-ಸಾಧನೆಗಳನ್ನು ಬಿಂಬಿಸುವ ಭಾರತ ಭಾಗ್ಯ ವಿಧಾತ: ಧ್ವನಿ ಬೆಳಕು ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಚಾಲನೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ

ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ

ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಭಾರತ ಭಾಗ್ಯ ವಿಧಾತ:ಧ್ವನಿ ಬೆಳಕು ಕಾರ್ಯಕ್ರಮವೆಂದು ಶೀರ್ಷಿಕೆ ನೀಡಿ ಜಿಲ್ಲೆ-ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಎಳೆ-ಎಳೆಯಾಗಿ ಬಿಚ್ಚಿಟ್ಟ ಕಲಾವಿದರು

ಎಳೆ-ಎಳೆಯಾಗಿ ಬಿಚ್ಚಿಟ್ಟ ಕಲಾವಿದರು

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಗಾಥೆಯನ್ನು ಕಟ್ಟಿ ಕೊಡುವ ಧ್ವನಿ-ಬೆಳಕು ಕಾರ್ಯಕ್ರಮ ಜನಮನ ಸೂರೆಗೊಂಡಿತು. ಅಂಬೇಡ್ಕರ್ ಬಾಲ್ಯ, ವಿದ್ಯಾಭ್ಯಾಸ, ದಲಿತ ವಿರೋಧಿ ನೀತಿ ಹಾಗೂ ಅಸ್ಪೃಶ್ಯತೆಯ ಆಚರಣೆಗಳಿಂದ ಜೀವನದ ಮೇಲಾದ ದುಷ್ಪರಿಣಾಮ ಮತ್ತು ಅದರಿಂದಾದ ಬದಲಾವಣೆಯನ್ನು ರಂಗದ ಮೇಲೆ ಕಲಾವಿದರು ಎಳೆ-ಎಳೆಯಾಗಿ ಬಿಚ್ಚಿಟ್ಟು ಸೈ ಎನಿಸಿದರು.

6ನೇ ದಿನದ ಭಾರತ ಭಾಗ್ಯ ವಿಧಾತ

6ನೇ ದಿನದ ಭಾರತ ಭಾಗ್ಯ ವಿಧಾತ

ಮಡಿಕೇರಿಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ 6ನೇ ದಿನದ ಭಾರತ ಭಾಗ್ಯ ವಿಧಾತ: ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿದರು.

 ಈ ವರೆಗೆ ನಡೆದ ಧ್ವನಿ ಬೆಳಕು ಕಾರ್ಯಕ್ರಮ

ಈ ವರೆಗೆ ನಡೆದ ಧ್ವನಿ ಬೆಳಕು ಕಾರ್ಯಕ್ರಮ

ಬೆಂಗಳೂರು,ಚಾಮರಾಜನಗರ, ಮೈಸೂರು, ಮಂಡ್ಯ,ಮಡಿಕೇರಿಯಲ್ಲಿ ಈಗಾಗಲೇ ಈ ಧ್ವನಿ ಬೆಳಕು ಕಾರ್ಯಕ್ರಮ ನಡೆದಿದ್ದು ಮುಂದೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ.

ಮಡಿಕೇರಿಯ ಬೆಳಕು ಕಾರ್ಯಕ್ರಮದ ಸಿದ್ದತೆಗಳು

ಮಡಿಕೇರಿಯ ಬೆಳಕು ಕಾರ್ಯಕ್ರಮದ ಸಿದ್ದತೆಗಳು

ಮಂಜಿನ ನಗರಿ ಮಡಿಕೇರಿಯಲ್ಲಿ ಧ್ವನಿ ಬೆಳಕು ಪ್ರದರ್ಶನ ಮುನ್ನ ದಿನ ರಂಗ ಸಿದ್ದತೆಗಳು ಭರ್ಜರಿಯಾಗಿ ತುಯಾರು ಮಾಡಲಾಗಿತ್ತು.

ಹಾಸನದಲ್ಲಿ 7ನೇ ಧ್ವನಿಬೆಳಕು

ಹಾಸನದಲ್ಲಿ 7ನೇ ಧ್ವನಿಬೆಳಕು

ಮಡಿಕೇರಿಯಲ್ಲಿ 6ನೇ ಭಾರತ ಭಾಗ್ಯ ವಿಧಾತ: ಧ್ವನಿ ಬೆಳಕು ಕಾರ್ಯಕ್ರಮ ಯಶಸ್ವಿಯಾಗಿ ಪ್ರದರ್ಶ ಕಂಡಿದ್ದು ಹಾಸನದ ಸರ್ಕಾರಿ ಕ್ರೀಡಾಂಗಣದಲ್ಲಿ ವಾರ್ತಾ ಇಲಾಖೆ ಪ್ರಸ್ತುತಿ ಪಡಿಸುವ ಭಾರತ ಭಾಗ್ಯ ವಿಧಾತ:ಧ್ವನಿ ಬೆಳಕು 7ನೇ ದಿನದ ಪ್ರದರ್ಶನ ಆಯೋಜನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Audience had appreciated Sound and light show ‘Bharatha Bagya Vidhatha’ a narration of Dr. B R Ambedkar’s life story in Madikeri.
Please Wait while comments are loading...