ಕೊಡಗಿಗೆ ಭೂಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್?

ಮಡಿಕೇರಿ, ಜುಲೈ 31: ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಕೊಡಗಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.ಆದರೆ, ಇನ್ನೂ ಪ್ರವಾಸ ಕಾರ್ಯಕ್ರಮದ ವಿವರಗಳು ಲಭ್ಯವಾಗಿಲ್ಲ.

ಮೂಲಗಳ ಪ್ರಕಾರ ಜಿಲ್ಲೆಗೆ ಆಗಮಿಸುವ ಅವರು ಆಗಸ್ಟ್ 5ರಿಂದ 7ರ ತನಕ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ಭಾರತೀಯ ಸೇನೆಯ ಎಂಇಜಿ ವಿಭಾಗದ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿವೃತ್ತ ಯೋಧರ Rally ಕಾರ್ಯಕ್ರಮ ಆ.6ರಂದು ನಡೆಯಲಿದ್ದು ಆ Rallyಯಲ್ಲಿ ಸೇನಾ ಮುಖ್ಯಸ್ಥರು ಭಾಗವಹಿಸುವ ಸಾಧ್ಯತೆ ಎನ್ನಲಾಗಿದೆ. [ಭೂಸೇನಾ ಮುಖ್ಯಸ್ಥ ದಲ್ ಬೀರ್ ಸಿಂಗ್ ಸುಹಾಗ್ ವ್ಯಕ್ತಿಚಿತ್ರ]

Army Chief Gen Dalbir Singh Suhag to visit Kodagu, Karnataka

ಭಾರತದ ಸೇನಾಪಡೆಗೆ ಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ವೀರ ಸೇನಾನಿ ಜನರಲ್ ತಿಮ್ಮಯ್ಯ ಸೇರಿದಂತೆ ಹಲವು ಮಹಾನ್ ವೀರಯೋಧರನ್ನು ನೀಡಿದ ಕೊಡಗಿಗೆ ಸೇನಾ ಮುಖ್ಯಸ್ಥರಾದ ಜನರಲ್ ದಲ್ಬೀರ್ ಸಿಂಗ್ ಅವರು ಆಗಮಿಸುತ್ತಿರುವುದು ಜಿಲ್ಲೆಯ ಯೋಧರಿಗೆ ಸಂತಸ ತಂದಿದೆ.

ಸೇನಾ ಮುಖ್ಯಸ್ಥರೊಂದಿಗೆ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆಯಿದೆ. ಅಧಿಕಾರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+