ಕೊಡಗು ಬೆಳೆಗಾರರಿಗೆ ಕಹಿಯಾದ ಅರೇಬಿಕಾ ಕಾಫಿ!

Posted By: Prithviraj
Subscribe to Oneindia Kannada

ಮಡಿಕೇರಿ ಅಕ್ಟೋಬರ್, 15 : ಮಳೆ ಕೊರತೆಯಾಗಿ ಕಾಫಿ ಇಳುವರಿಯೂ ಖೋತಾ ಆಗಿರುವ ಬೆನ್ನಲ್ಲೇ ಜಿಲ್ಲೆಯ ಕೆಲವೆಡೆ ಅರೇಬಿಕಾ ಕಾಫಿ ಅವಧಿಗೆ ಮುನ್ನವೇ ಹಣ್ಣಾಗಲು ಆರಂಭಿಸಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಫೆಬ್ರವರಿ, ಮಾರ್ಚ್‍ನಲ್ಲಿ ಮಳೆ ಬಾರದ ಕಾರಣ ಕೆಲವರು ಕೃತಕ ನೀರು ಹಾಯಿಸಿ ಕಾಫಿ ಹೂವು ಅರಳಿಸಿದ್ದರು. ಅದಾದ ನಂತರ ಮೇ ತಿಂಗಳಲ್ಲಿ ಒಂದಷ್ಟು ಮಳೆ ಸುರಿದಿತ್ತು. ಬಳಿಕ ಹೆಚ್ಚಿನ ಮಳೆ ಬರಲಿಲ್ಲ. ಹೀಗಾಗಿ ಹವಾಮಾನ ವೈಪರೀತ್ಯ ಕಾಫಿ ಮೇಲೆ ಪರಿಣಾಮ ಬೀರಿತ್ತು.

ಕೆಲವು ರೋಬಸ್ಟಾ ಕಾಫಿ ತೋಟಗಳಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಅರಳಬೇಕಾದ ಹೂವು ಮೇ ತಿಂಗಳಲ್ಲಿ ಅರಳಿತ್ತು. ಅರೇಬಿಕಾ ಕಾಫಿ ರೋಬಸ್ಟಾಕ್ಕಿಂತ ವಿಭಿನ್ನವಾಗಿದ್ದು, ರೋಬಸ್ಟಾಕ್ಕಿಂತ ಬೇಗ ಹಣ್ಣಾಗುತ್ತವೆ.[ಕೊಡಗು: ನ.15ರೊಳಗೆ ಹೋಂ ಸ್ಟೇ ನೋಂದಣಿ ಕಡ್ಡಾಯ]

ಬೆಳೆಗಾರನಿಗೆ ಕಹಿಯಾದ ಅರೇಬಿಕಾ ಕಾಫಿ!

ಸಾಮಾನ್ಯವಾಗಿ ಡಿಸೆಂಬರ್ ವೇಳೆಗೆ ಹಣ್ಣಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲೇ ಹಣ್ಣು ಕಾಣಿಸಿಕೊಳ್ಳುತ್ತಿದೆ. ಕಾಫಿ ಗಿಡಗಳಲ್ಲಿ ಕಾಯಿ ಒಮ್ಮೆಲೆ ಹಣ್ಣಾಗುವುದು ಸಾಮಾನ್ಯ.

ಆದರೆ ಈ ಬಾರಿ ವಾತಾವರಣದ ವೈಪರೀತ್ಯವೋ ಏನೋ ಗಿಡಗಳಲ್ಲಿ ಗೊಂಚಲು ಗೊಂಚಲಾಗಿರುವ ಕಾಯಿಗಳಲ್ಲಿ ಕೆಲವು ಹಣ್ಣಾಗಿದ್ದರೆ ಇನ್ನು ಕೆಲವು ಕಾಯಿಯಾಗಿಯೇ ಉಳಿದಿದೆ.

ಇದರಿಂದ ಮೊದಲು ಆದ ಹಣ್ಣುಗಳನ್ನು ಪಕ್ಷಿ ಸೇರಿದಂತೆ ಅಳಿಲು, ಮಂಗ, ಇತರೆ ಪ್ರಾಣಿಗಳು ತಿಂದು ಹಾಕುತ್ತಿವೆ. ಅಷ್ಟೇ ಅಲ್ಲದೆ ಮಳೆಗೆ ಉದುರಿ ಕಾಡು ಪಾಲಾಗುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಕಾಫಿಯನ್ನು ಕೊಯ್ಲು ಮಾಡಿ ಒಣಗಿಸುವ ಸ್ಥಿತಿಯಲ್ಲಿಯೂ ಬೆಳೆಗಾರನಿಲ್ಲ. ಕಾರಣ ಆಗಾಗ್ಗೆ ಬರುವ ಮಳೆ ಮತ್ತು ಮಳೆಮೋಡದಿಂದಾಗಿ ಕಾಫಿ ಒಣಗುತ್ತಿಲ್ಲ. ಒಟ್ಟಾರೆ ರೋಬಸ್ಟಾ ಬೆಳೆಗಾರನಿಗೆ ಈ ಬಾರಿ ಸಂಕಷ್ಟ ಮಾತ್ರ ತಪ್ಪಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The coffee growers in the taluk are fearing the extinction of arabica coffee as the problem posed by lack of rain
Please Wait while comments are loading...