ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಾದ್ಯಂತ 3ಸಾವಿರಕ್ಕೂ ಅಧಿಕ ಸಂತ್ರಸ್ತರ ರಕ್ಷಣೆ

By ಬಿಎಂ ಲವಕುಮಾರ್‌
|
Google Oneindia Kannada News

ಮಡಿಕೇರಿ, ಆಗಸ್ಟ್ 18: ವೈದ್ಯಕೀಯ ಸೌಲಭ್ಯ, ಹಾಸಿಗೆ ಮತ್ತು ಹೊದಿಕೆ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹಾಗೆ ಒಮ್ಮೆ ಇಣುಕು ನೋಟ ಬೀರಿದ್ದೇ ಆದರೆ ಮಡಿಕೇರಿ ತಾಲೂಕಿನ ಕೊಟ್ಟಮುಡಿ, ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ, ಐಕೊಳ, ಮಡಿಕೇರಿ ನಗರ-2 ಮೊದಲಾದ ಕಡೆ ಗಂಜಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿ 550 ಸಂತ್ರಸ್ಥರಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಸೋಮವಾರಪೇಟೆ ತಾಲೂಕಿನ ಮಾದಾಪುರ, ಕಾಂಡನಕೊಲ್ಲಿ, ಮಂಜುನಾಥ ಕಲ್ಯಾಣ, ಮದರಸಾ, ಸೇಂಟ್ ಮೇರೀಸ್ ಸ್ಕೂಲ್, ರಾಮಮಂದಿರ, ಪನ್ಯ ಎಸ್ಟೇಟ್ ಸುಂಟಿಕೊಪ್ಪ, ಬೆಟ್ಟದಕಾಡು, ಗುಡ್ಡೆಹೊಸೂರು, ಮದಲಾಪುರ, ಹಾರಂಗಿ, ದಂಡಿನಪೇಟೆ, ಕೊಡವ ಸಮಾಜ, ಗಂಧದಕೋಟೆ, ಶಾಂತಳ್ಳಿ, ಸೋಮವಾರಪೇಟೆ ಗಂಜಿ ಕೇಂದ್ರದಲ್ಲಿ 2233, ವಿರಾಜಪೇಟೆ ತಾಲೂಕಿನ ಕರಡಿಗೋಡು-3, ಅಮ್ಮತ್ತಿ-1, ವಿರಾಜಪೇಟೆ-1, ಪುನರ್ವಸತಿ ಕೇಂದ್ರದಲ್ಲಿ 376 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ. ಜಿಲ್ಲೆಯ ಒಟ್ಟು 31 ಗಂಜಿ ಕೇಂದ್ರದಲ್ಲಿ ಸದ್ಯ 3159 ಮಂದಿಗೆ ಆಶ್ರಯ ನೀಡಲಾಗಿದೆ.

ಪ್ರವಾಹಪೀಡಿತ ಕೊಡಗಿಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ ಪ್ರವಾಹಪೀಡಿತ ಕೊಡಗಿಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ

ಇದೀಗ ಜಿಲ್ಲೆಯಲ್ಲಿ ರಕ್ಷಣಾ ಪರಿಹಾರ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್), ನಾಗರಿಕ ರಕ್ಷಣಾ ಪಡೆ (ಸಿವಿಲ್ ಡಿಫೆನ್ಸ್ ಫೋರ್ಸ್-ಕ್ಯೂ.ಆರ್.ಟಿ), ಭಾರತೀಯ ಸೇನೆಯ ಒಂದು ತುಕಡಿಯ 167 ಜನರು ತಲಾ 10 ಸದಸ್ಯರಂತೆ 16 ತಂಡಗಳಾಗಿ ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ತುರ್ತು ಪರಿಸ್ಥಿತಿ ಇರುವ ಪ್ರದೇಶಗಳಾದ ಕಾಟಕೇರಿ, ಜೋಡುಪಾಲ, ಕಾಲೂರು, ಮುಕ್ಕೋಡ್ಲು, ಮಕ್ಕಂದೂರು, ಹೆಮ್ಮೆತ್ತಾಳು, ಮೇಘತ್ತಾಳು, ದೇವಸ್ತೂರು, ದೇವಮಾನಿ, ಹಟ್ಟಿಹೊಳೆ ಪ್ರದೇಶಗಳಲ್ಲಿ ಸಂತ್ರಸ್ಥರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ.

3159 people rescued by army personnel in kodagu district

ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿಯ ಜೋಡುಪಾಲ ಗ್ರಾಮದಲ್ಲಿ ಅಪಾಯದ ಪರಿಸ್ಥಿತಿಗೆ ಸಿಲುಕಿದ್ದ 140 ಸಂತ್ರಸ್ಥರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಾಯದಿಂದ ರಕ್ಷಿಸಿ, ಸುರಕ್ಷಿತ ಸ್ಥಳವಾದ ಸಂಪಾಜೆಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ಸುಂಟಿಕೊಪ್ಪ ಹೋಬಳಿಯ ನಂದಿಮೊಟ್ಟೆಯಲ್ಲಿ ಅಪಾಯದ ಪರಿಸ್ಥಿತಿಗೆ ಸಿಲುಕಿದ್ದ ಇಬ್ಬರು ಗರ್ಭಿಣಿಯರನ್ನು ಒಳಗೊಂಡ ಒಟ್ಟು 30 ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಇವರಲ್ಲಿ 4 ಮಂದಿ ಗಾಯಾಳುಗಳಾಗಿದ್ದಾರೆ ಎನ್ನಲಾಗುತ್ತಿದೆ.

ಕೊಡಗು ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಹೊರಟ ಎಚ್ಡಿಕೆಕೊಡಗು ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಹೊರಟ ಎಚ್ಡಿಕೆ

ಹಟ್ಟಿಹೊಳೆಯಿಂದ 10 ಕಿ.ಮೀ ಅಂತರದಲ್ಲಿರುವ ಸೂರ್ಯಕಿರಣ ಎಸ್ಟೇಟ್‍ನಲ್ಲಿ ಸಿಲುಕಿದ್ದ 12 ಮಹಿಳೆಯರು ಮತ್ತು 3 ಮಕ್ಕಳನ್ನು ಒಳಗೊಂಡಂತೆ ಒಟ್ಟು 37 ಮಂದಿಯನ್ನು ಭಾರತೀಯ ಸೇನೆ ಹಾಗೂ ತುರ್ತು ರಕ್ಷಣಾ ತಂಡದ ಸಹಾಯದಿಂದ ರಕ್ಷಿಸಲಾಗಿದೆ.

ಹೆಮ್ಮತ್ತಾಳು ಮತ್ತು ಮಕ್ಕಂದೂರು ಗ್ರಾಮದಲ್ಲಿ 130, ಕಾಲೂರು ಮತ್ತು ಗಾಳಿಬೀಡುವಿನಲ್ಲಿ 200, ಕಟ್ಟೆಮಾಡು ಮತ್ತು ಪರಂಬು ಪೈಸಾರಿ (ಮರಗೋಡು) ಯಲ್ಲಿ 60 ಕುಟುಂಬಗಳು, 2ನೇ ಮೊಣ್ಣಂಗೇರಿ-20, ಜೋಡುಪಾಲದಲ್ಲಿ 130 ಸಂತ್ರಸ್ಥರನ್ನು ಭಾರತೀಯ ಸೇನೆ, ಎಸ್.ಡಿ.ಆರ್.ಎಫ್ ಮತ್ತು ನಾಗರೀಕ ರಕ್ಷಣಾ ಪಡೆಗಳ ಜಂಟಿ ಕಾರ್ಯಾಚರಣೆಯಿಂದ ಈಗಾಗಲೇ ರಕ್ಷಿಸಿದ್ದು ರಕ್ಷಣಾ ಕಾರ್ಯವನ್ನು ಮುಂದುವರೆಸಲಾಗಿದೆ.

ಜೋಡುಪಾಲ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಯು.ಟಿ ಖಾದರ್ ಜೋಡುಪಾಲ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಯು.ಟಿ ಖಾದರ್

ಇದುವರೆಗೆ ವಿದ್ಯುತ್ ಸ್ಪರ್ಶ, ಭೂ ಕುಸಿತಕ್ಕೆ ಸಿಲುಕಿ ಸುಮಾರು ಎಂಟು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಗಳಿದ್ದು ಕಾರ್ಯಾಚರಣೆ ಬಳಿಕವಷ್ಟೆ ನಿಜಾಂಶ ಹೊರಬರಬೇಕಾಗಿದೆ.

English summary
Army personnel have rescued more than three thousand in last 24 hours who stranded in flood and landslide in kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X