Madikeri-Mangaluru National Highway: ₹3,00,00,000 ವೆಚ್ಚದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಬಿರುಕು
Madikeri-Mangaluru National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಕ್ರಾಂತಿಯಾಗುತ್ತಿದೆ. ಈ ನಡುವೆಯೇ ಕೆಲ ಸಮಸ್ಯಗಳು ಸಹ ಎದುರಾಗುತ್ತಿವೆ. ಇದೀಗ ದುಬಾರಿ ₹3,00,00,000 ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275 ತಡೆಗೋಡೆ ಬಿರುಕು ಬಿಟ್ಟ ಘಟನೆ ನಡೆದಿದೆ. ಹಾಗಾದ್ರೆ ಕಾರಣ ಏನು ಹಾಗೂ ಇದು ನಿರ್ಮಾಣ ಆಗಿದ್ದು ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತ್ತೀಚೆಗಷ್ಟೇ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ಗೆ ಗುಡ್ಡ ಮಣ್ಣು ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಆದ ಘಟನೆ ನಡೆದಿತ್ತು. ಮಳೆಗಾಲ ಬಂತೆಂದರೆ ಸಾಕು ಇಲ್ಲಿ ಈ ಗೋಳು ಇದ್ದಿದ್ದೇ ಎನ್ನುವಂತಾಗಿದೆ. ಹಾಗೆಯೇ ಇದೀಗ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275 ತಡೆಗೋಡೆ ಬಿರುಕು ಬಿಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನಗಳನ್ನು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಹಲವೆಡೆ ಅವಾಂತರಗಳು ದೊಡ್ಡ ದೊಡ್ಡ ಅವಾಂತರಗಳು ಸಂಭವಿಸಿವೆ. ಅದರಲ್ಲೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಂತೂ ರಸ್ತೆಗೆ ಮಣ್ಣು ಸುರಿದು ವಾಹನ ಸಂಚಾರ ಬಂದ್ ಆಗಿರುವ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ತಡೆಗೋಡೆ ಬಿರುಕು ಬಿಟ್ಟಿದೆ. ಇದು ಮಡಿಕೇರಿ ನಗರದಿಂದ ಅರ್ಧ ಕಿ.ಮೀ. ದೂರದಲ್ಲಿದೆ.
ಇದೇ ಹೆದ್ದಾರಿಯಲ್ಲಿ 2018ರಲ್ಲಿ ಭಾರೀ ಭೂಕುಸಿತದಿಂದ ವಾಹನಗಳ ಸಂಚಾರವೇ ಸ್ಥಗಿತ ಆಗಿತ್ತು. ನಂತರ ನಾಲ್ಕೈದು ವರ್ಷ ಕಾಮಗಾರಿ ಮಾಡಿ 3,00,00,000 ರೂಪಾಯಿ ವೆಚ್ಚದಲ್ಲಿ ಬೃಹತ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಈ ತಡೆಗೋಡೆ ನಿರ್ಮಾಣ ಆಗಿ ಒಂದು ಮಳೆಗಾಲ ಕಳೆಯುವುದರೊಳಗೆ ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ಕುಸಿಯುವಂತಹ ಭೀತಿ ಉಂಟಾಗಿದೆ.
ಸುಮಾರು 4 ಹಂತಗಳಲ್ಲಿ 80 ಮೀಟರ್ ಎತ್ತರದಲ್ಲಿ ಈ ತಡೆಗೋಡೆಯನ್ನ ನಿರ್ಮಾಣ ಮಾಡಲಾಗಿದೆ. ಆದರೂ, ಮಳೆ ನೀರು ಮತ್ತು ಮಣ್ಣಿನ ಅತೀಯಾದ ಒತ್ತಡದಿಂದ ಬಿರುಕು ಬಿಟ್ಟಿದೆ. ಸದ್ಯ ಇದೀಗ ಹೆದ್ದಾರಿಗೆ ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಯಾವುದೇ ತೊಂದರೆ ಆಗಬಾರದೆನ್ನುವ ನಿಟ್ಟಿನಲ್ಲಿ ತಡೆಗೋಡೆಯ ಕೆಳಗಿರುವ ಹಲವು ಮನೆಗಳಲ್ಲಿನ ನಿವಾಸಿಗಳನ್ನ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ತಡೆಗೋಡೆ ಬಿರುಕು ಬಿಟ್ಟ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ಗಳು ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಣ ಮಾಡಲಾಗಿದ್ದು, ಇದರಿಂದ ಸಂಚಾರಕ್ಕೆ ಅಡಚಣೆ ಆಗಿದೆ.
ಒಟ್ಟಿನಲ್ಲಿ ಹೇಳೊದಾದ್ರೆ ಒಂದು ಮಳೆ ಕಳೆಯುವುದರೊಳಗೆ ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಬಿರುಕು ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ ವಾಹನ ಸವಾರರು ಹಾಗೂ ತಡೆಗೋಡೆ ಅಕ್ಕಪಕ್ಕದ ನಿವಾಸಿಗಳು ಇದು ಯಾವಾಗ ಬೀಳುತ್ತದೆ ಎನ್ನುವ ಭೀತಿಯಲ್ಲಿದ್ದಾರೆ. ಮಳೆಗಾಲ ಬಂತೆಂದ್ರೆ ಸಾಕು ಈ ಭಾಗದ ಹೆದ್ದಾರಿಗಳಲ್ಲ ಒಂದಲ್ಲ ಒಂದು ಸಮಸ್ಯೆಗಳು ಉದ್ಭವ ಆಗುತ್ತಲೇ ಇದ್ದು, ಇದಕ್ಕೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆಯೂ ಇಲ್ಲಿನ ಸ್ಥಳೀಯರು ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ, ಪರಿಹಾರ ಕಂಡುಕೊಂಡರೂ ಮಳೆರಾಯನ ಆರ್ಭಟಕ್ಕೆ ಈ ಭಾಗದಲ್ಲಿ ಅವಾಂತರಗಳೇ ಸಂಭವಿಸುತ್ತಲೇ ಇವೆ.












Click it and Unblock the Notifications