ಅಲಹಾಬಾದ್ ಅಲ್ಲ ಪ್ರಯಾಗ್‌ರಾಜ್: ಹೆಸರು ಬದಲಿಸಲು ಯೋಗಿ ಚಿಂತನೆ
ಲಕ್ನೋ, ಅಕ್ಟೋಬರ್ 15: ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಒಂದಾದ ಅಲಹಾಬಾದ್‌ಗೆ 'ಪ್ರಯಾಗರಾಜ್' ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ದೇಶಿಸಿದ್ದಾರೆ.
'ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಿಸುವುದು ಹೆಚ್ಚಿನ ಜನ ಆಶಯವಾಗಿದೆ. ಇದು ಒಳ್ಳೆಯ ಸಂದೇಶ ಸಹ ನೀಡುತ್ತದೆ. ಎಲ್ಲರೂ ಒಪ್ಪುವುದಾದರೆ ಈ ನಗರವನ್ನು ಪ್ರಯಾಗರಾಜ್ ಆಗಿ ಬದಲಿಸಬಹುದು ಮತ್ತು ಇದು ಉತ್ತಮ ಆರಂಭವಾಗಲಿದೆ' ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದೊಂದಿಗೆ ಆಳವಾದ ನಂಟು ಹೊಂದಿರುವ ಐತಿಹಾಸಿಕ ನಗರಿ ಅಲಹಾಬಾದ್, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದ ಸ್ಥಳವೂ ಹೌದು. ಹೀಗಾಗಿ ಐತಿಹಾಸಿಕ ಮತ್ತು ಪೌರಾಣಿಕವಾಗಿ ಈ ನಗರ ಬಹಳ ಮಹತ್ವ ಪಡೆದಿದೆ.
ಆದರೆ, ಯೋಗಿ ಆದಿತ್ಯನಾಥ್ ಸರ್ಕಾರದ ಈ ಮರುನಾಮಕರಣದ ಯೋಜನೆಗೆ ವಿರೋಧವೂ ವ್ಯಕ್ತವಾಗಿದೆ. ವಿರೋಧಪಕ್ಷಗಳು ಸೇರಿದಂತೆ ಅನೇಕರು ಹೆಸರು ಬದಲಿಸುವುದರ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

ಕುಂಭಮೇಳಕ್ಕೂ ಮುನ್ನ...
ಮುಂದಿನ ವರ್ಷದ ಜನವರಿ 15 ರಿಂದ ಮಾರ್ಚ್ 4ರ ಅವಧಿಯಲ್ಲಿ ಕುಂಭಮೇಳ ನಡೆಯಲಿದ್ದು, ಅದಕ್ಕೂ ಮುನ್ನ ಅಲಹಾಬಾದ್‌ಗೆ ಪ್ರಯಾಗರಾಜ್ ಹೆಸರಿನ ನಾಮಕರಣ ಮಾಡಲು ಯೋಗಿ ಬಯಸಿದ್ದಾರೆ ಎಂದು ವರದಿಗಳು ತಿಳಿಸಿವೆ.
| Array |
ಮರು ನಾಮಕರಣವಲ್ಲ
ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅಲಹಬಾದ್ ಬೇಗನೇ ಪ್ರಯಾಗರಾಜ್ ಆಗಲಿ. ಪ್ರಯಾಗರಾಜ್, ಅಲಹಾಬಾದ್‌ನ ಪುರಾತನ ಹೆಸರು. ಅದನ್ನು 1575ರಲ್ಲಿ ಬದಲಿಸಲಾಯಿತು. ಹೀಗಾಗಿ ಇದು ಮರ ಸ್ಥಾಪನೆಯೇ ಹೊರತು ಮರು ನಾಮಕರಣವಲ್ಲ. ಮೂರು ನದಿಗಳ ಒಂದುಗೂಡಿವಿಕೆಯ ತ್ರಿವೇಣಿ ಸಂಗಮಕ್ಕೆ ಕೂಡ ಪ್ರಯಾಗರಾಜ್ ಹೆಸರುವಾಸಿ ಎಂದು ಸಾಧ್ವಿ ಖೋಸ್ಲಾ ಹೇಳಿದ್ದಾರೆ.
|
ಬೇಡಿಕೆ ಇಟ್ಟಿರಲಿಲ್ಲ
ಪ್ರಯಾಗರಾಜ್ ತನ್ನ ಹೆಸರನ್ನು ಅಲಹಾಬಾದ್ ಎಂದು ಬದಲಿಸಿಕೊಂಡ ಬಳಿಕವೂ ಅಸ್ತಿತ್ವ ಉಳಿಸಿಕೊಂಡಿತ್ತು. ಇಲ್ಲಿನ ಜನರು ಧೈರ್ಯಶಾಲಿಗಳು ಮತ್ತು ವಿಧೇಯರು. ಹಳೆಯ ಪ್ರಸಿದ್ಧ ಹೆಸರನ್ನು ಮತ್ತೆ ಇರಿಸುವಂತೆ ಎಂದಿಗೂ ಬೇಡಿಕೆ ಇರಿಸಿರಲಿಲ್ಲ ಎಂದು ಅಶೋಕ್ ಕರೇಕರ್ ಎಂಬುವವರು ಹೇಳಿದ್ದಾರೆ.
|
ಆಗ ಏಕೆ ಇರಲಿಲ್ಲ?
ಬಾಂಬೆಯ ಹೆಸರು ಮುಂಬೈ ಎಂದು ಬದಲಾದಾಗ, ಮದ್ರಾಸ್ ಹೆಸರು ಚೆನ್ನೈ ಎಂದು ಮರುನಾಮಕರಣವಾದಾಗ, ಕಲ್ಕತ್ತಾ ಹೆಸರು ಕೋಲ್ಕತ್ತಾ ಎಂದು ಬದಲಿಸಿದಾಗ ಯಾವ ಪ್ರಗತಿಪರರ ಆಕ್ರೋಶವೂ ಇರಲಿಲ್ಲ. ಆದರೆ, ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸುವಾಗ ಅಲ್ಲಿ ಆಕ್ರೋಶ ಇದೆ- ಏಕೆ? ಎಂದು ಅವಿನಾಶ್ ಎಂಬುವವರು ಪ್ರಶ್ನಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications