ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಬೆಂಗಾವಲು ಪಡೆಯನ್ನು ನಿಲ್ಲಿಸಿದ ಯೋಗಿ

|
Google Oneindia Kannada News

ಲಕ್ನೋ ಏಪ್ರಿಲ್ 1: ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರು ಪ್ರಶಂಸಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಯವರ ಬೆಂಗಾವಲು ಪಡೆ ಹಜರತ್‌ಗಂಜ್‌ನಿಂದ ಬಂದರಿಯಾಬಾಗ್‌ಗೆ ಹೋಗುತ್ತಿದ್ದಾಗ ರಾಜಭವನದ ಬಳಿ ಗುರುವಾರ ಈ ಘಟನೆ ನಡೆದಿದೆ ಎಂದು ಟ್ರಾಫಿಕ್ ಡಿಸಿಪಿ ಸುಭಾಷ್ ಚಂದ್ರ ಶಾಕ್ಯ ಶುಕ್ರವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು ಎಂದು ಸುಭಾಷ್ ಚಂದ್ರ ಅವರು ಶುಕ್ರವಾರ ತಿಳಿಸಿದ್ದಾರೆ. ತಾವು ಹೊರಡುವ ಹಾದಿಯಲ್ಲಿ ಬೆಂಗಾವಲು ಪಡೆಯಿಂದಾಗಿ ಅಂಬುಲೆನ್ಸ್ ನಿಲ್ಲಿಸಬೇಕಾಯಿತು. ಇದನ್ನು ಗಮನಿಸಿದ ಸಿಎಂ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಅಂಬುಲೆನ್ಸ್ ಮುಂದೆ ಸಾಗಲು ಅವಕಾಶ ಮಾಡಿಕೊಟ್ಟಿದ್ದಾರೆಂದು ತಿಳಿದು ಬಂದಿದೆ.

Yogi Adityanath Stops Convoy To Make Way For Ambulance

"ಆದಿತ್ಯನಾಥ್ ಅವರು ತಮ್ಮ ಬೆಂಗಾವಲು ಚಲನೆಗೆ ಅನುಕೂಲವಾಗುವಂತೆ ಆಂಬ್ಯುಲೆನ್ಸ್ ನಿಲ್ಲಿಸಿರುವುದನ್ನು ನೋಡಿದ ತಕ್ಷಣ, ಅವರು ತಮ್ಮ ಭದ್ರತಾ ಸಿಬ್ಬಂದಿಯನ್ನು ರಸ್ತೆಬದಿಯಲ್ಲಿ ನಿಲ್ಲಿಸಲು ಮತ್ತು ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಡುವಂತೆ ಹೇಳಿದರು" ಎಂದು ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಸವಾರರೊಬ್ಬರು ಹೇಳಿಕೊಂಡಿದ್ದಾರೆ.

Yogi Adityanath Stops Convoy To Make Way For Ambulance

ದ್ವಿಚಕ್ರವಾಹನವನ್ನು ಅಲ್ಲಿಯೇ ನಿಲ್ಲಿಸಿದ ಲಕ್ನೋದ ಮಡಿಯನ್ ಪ್ರದೇಶದ ನಿವಾಸಿ ಭಾಸ್ಕರ್ ಸಿಂಗ್ ಮಾತನಾಡಿ, "ಮುಖ್ಯಮಂತ್ರಿ ಯೋಗಿಯವರಿಂದ ಇದು ಉತ್ತಮ ಮಾನವೀಯ ಸೂಚಕವಾಗಿದೆ. ಅವರ ಬೆಂಗಾವಲು ಪಡೆಯನ್ನು ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಯೋಗಿ ಆದಿತ್ಯನಾಥ್ ಅವರನ್ನು ರಸ್ತೆಯಲ್ಲಿ ಕಾಯುತ್ತಿದ್ದ ಜನರೆಲ್ಲರೂ ಹೊಗಳುತ್ತಿರುವುದು ಕಂಡುಬಂದಿದೆ" ಎಂದರು.

English summary
The cavalcade of Uttar Pradesh Chief Minister Yogi Adityanath stopped and made way for an ambulance here, an official said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X