ವಾಯು ಮಾಲಿನ್ಯ ಹೊಗಲಾಡಿಸಲು ಹೋಮ ಮಾಡಿ ಎಂದ ಬಿಜೆಪಿ ಮುಖಂಡ

ಲಕ್ನೋ. ನವೆಂಬರ್ 04: ಉತ್ತರಪ್ರದೇಶದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಖಂಡ ಸುನಿಲ್ ಭರಲಾ ಅವರು ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಕೃಷಿ ತ್ಯಾಜ್ಯ ಸುಡುವುದರಿಂದ ಹೊಗೆ, ಮಾಲಿನ್ಯ ಉಂಟಾಗುತ್ತದೆ ಎಂದು ಪರ ರಾಜ್ಯಗಳು ದೂಷಿಸುವುದು ಸರಿಯಲ್ಲ ಇದರ ಬದಲು ನಾವು ಮಳೆ ದೇವರನ್ನು ಪೂಜಿಸಿ ಒಲಿಸಿಕೊಳ್ಳಬೇಕು ಎಂದಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಮಳೆ ದೇವತೆ ಇಂದ್ರನನ್ನು ಪೂಜಿಸಿದರೆ ದೆಹಲಿ ಸೇರಿದಂತೆ ಅತಿಯಾದ ಮಾಲಿನ್ಯದಿಂದ ಬಳಲುತ್ತಿರುವ ರಾಜ್ಯಗಳಲ್ಲಿ ಏನಾದರೂ ಒಳ್ಳೆ ಗಾಳಿ ಬೀಸಲು ಸಾಧ್ಯ ಎಂದಿದ್ದಾರೆ.

Watch: This UP Mantri suggests to perform special Yagna to tackle air pollution

ರೈತರು ಕಬ್ಬು ಬೆಳೆಯುವುದೇ ಕಷ್ಟಕರವಾಗಿದೆ. ತ್ಯಾಜ್ಯಗಳನ್ನು ಅದಷ್ಟು ಒಳ್ಳೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ತ್ಯಾಜ್ಯವನ್ನು ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ ಎಂಬುದರದಲ್ಲಿ ಅರ್ಥವಿಲ್ಲ ಎಂದು ಶ್ರಮಿಕ ಕಲ್ಯಾಣ ಮಂಡಳಿ ಮುಖ್ಯಸ್ಥರಾಗಿರುವ ಭರಾಲಾ ಹೇಳಿದ್ದಾರೆ.

ಲಕ್ನೋದ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 400 ಅಂಕ ದಾಟಿದ್ದು, ಅಪಾಯದ ಮಟ್ಟ ಮೀರುತ್ತಿದೆ. ರೈತರು ಕಳೆ ಕಿತ್ತು ಬೆಂಕಿಗೆ ಹಾಕುವುದು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಪಂಜಾಬಿನಲ್ಲಿ ಸುಮಾರು 22,000 ಪ್ರಕರಣ ಪಂಜಾಬ್ ರಾಜ್ಯದಲ್ಲೇ ದಾಖಲಾಗಿದೆ. ಮಿಕ್ಕಂತೆ ಹರ್ಯಾಣದಲ್ಲಿ 4,200 ಕಳೆಗೆ ಬೆಂಕಿ ಹಾಕಿದ ಪ್ರಕರಣ ದಾಖಲಿದ್ದು, ದೆಹಲಿಗೆ ಇದರಿಂದ ಮಾಲಿನ್ಯ ಸಮಸ್ಯೆ ಹೆಚ್ಚಾಗಿದೆ ಎಂಬ ವಾದವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+