ಒಂದೇ ವ್ಯಕ್ತಿಗೆ 2 ಬಗೆಯ ಲಸಿಕೆ ಇದೇನಿದು ಯುಪಿ ಸರ್ಕಾರದ ಎಡವಟ್ಟು?

ಲಕ್ನೋ, ಮೇ 26: ಒಂದೇ ವ್ಯಕ್ತಿಗೆ ಎರಡು ಬಗೆಯ ಲಸಿಕೆ ನೀಡಿ ಉತ್ತರ ಪ್ರದೇಶ ಸರ್ಕಾರ ಜನರ ಕೆಂಗಣ್ಣಿಗೆ ಕಾರಣವಾಗಿದೆ.

ಕೊರೊನಾ ಲಸಿಕೆಯ ಎರಡು ಡೋಸ್ ತೆಗೆದುಕೊಳ್ಳಬೇಕು, ಆದರೆ ಒಬ್ಬ ವ್ಯಕ್ತಿ ಮೊದಲು ಯಾವ ಲಸಿಕೆಯನ್ನು ತೆಗೆದುಕೊಂಡಿದ್ದರೂ, ಎರಡನೇ ಬಾರಿಯೂ ಅದನ್ನೇ ನೀಡಿದಾಗ ಮಾತ್ರ ದೇಹದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಸೃಷ್ಟಿಯಾಗಲಿದೆ.

ಬೇರೆ ಬೇರೆ ಲಸಿಕೆಯನ್ನು ಒಂದೇ ದೇಹಕ್ಕೆ ನೀಡಿದಾಗ ಪ್ರಣಾಪಾಯ ಸಾಧ್ಯತೆಯೂ ಇದೆ. ಆದರೆ ಯುಪಿ ಸರ್ಕಾರ ಒಬ್ಬ ವ್ಯಕ್ತಿಗೆ ಬೇರೆ ಬೇರೆ ಲಸಿಕೆ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದೆ.

Villagers Get Mixed Vaccine Shots In UP Government Hospital

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಹುತೇಕ ಮಂದಿಗೆ ಎರಡು ಬಗೆಯ ಲಸಿಕೆ ನೀಡಲಾಗಿದೆ. ನೇಪಾಳ ಗಡಿಯಲ್ಲಿರುವ 20 ಹಳ್ಳಿಯ ಜನರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆಯನ್ನು ನೀಡಲಾಗಿದೆ.ಇದರಿಂದಾಗಿ ದೇಹದಲ್ಲಿ ವ್ಯತಿರಿಕ್ತ ಪರಿಣಾಮಗಳು ಗೋಚರವಾಗುತ್ತಿವೆ.

ಲಕ್ನೋನಿಂದ 270 ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ಸಂಭವಿಸಿದೆ.ಏಪ್ರಿಲ್ ಮೊದಲ ವಾರದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು, ಮೇ 14ರಂದು ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಎರಡೂ ಲಸಿಕೆಗಳನ್ನು ನೀಡುವಂತೆ ಯಾವ ನಿರ್ದೇಶನವೂ ಬಂದಿಲ್ಲ, ಪ್ರತಿಯೊಬ್ಬರ ಬಳಿಯೂ ಹೋಗಿ ಏನಾದರೂ ಅಡ್ಡ ಪರಿಣಾಮವಾಗಿದೆಯೇ ಎಂದು ವಿಚಾರಿಸಲಾಗಿದೆ ಎಂದು ವೈದ್ಯಾಧಿಕಾರಿ ಚೌಧರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+