ವಿಡಿಯೋ: ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಫೋಟೋ
ಮಥುರಾ ಜುಲೈ 18: ಉತ್ತರ ಪ್ರದೇಶದ ಮಥುರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋಗಳಿಗೆ ಅವಮಾನಿಸಲಾಗಿದೆ. ಕಸಕ್ಕೆ ಎಸೆದ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಫೋಟೋಗಳನ್ನು ಜನ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ.
ಕಸದ ಬಂಡಿಯಲ್ಲಿ ಕಸಗುಡಿಸುವವರೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪಾಲಿಕೆ ಅಧಿಕಾರಿಗಳ ನಡುವೆ ಜಗಳಗಳು ನಡೆದಿದ್ದು ಕಸಗುಡಿಸುವವನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸ್ವೀಪರ್ ವಿರುದ್ಧ ಕ್ರಮ ಜರುಗಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಮಥುರಾ-ವೃಂದಾವನ ಮುನ್ಸಿಪಲ್ ಕಾರ್ಪೊರೇಶನ್ ಕಚೇರಿಯ ಬಳಿಯೇ ಈ ಘಟನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ಕಸದಲ್ಲಿ ಎಸೆಯಲಾಗಿದೆ. ಮಾಹಿತಿ ಪ್ರಕಾರ ಗುತ್ತಿಗೆ ಸ್ವೀಪರ್ ಬಾಬಿ ಕಸ ಸಂಗ್ರಹಿಸುತ್ತಿದ್ದರು.

ಕಸದ ರಾಶಿಯಲ್ಲಿ ಯಾರೋ ಪ್ರಧಾನಿ ಮತ್ತು ಮುಖ್ಯಮಂತ್ರಿ ಯೋಗಿ ಅವರ ಫೋಟೋಗಳನ್ನು ಹಾಕಿದ್ದರು. ಇವರೂ ಕೂಡ ಅದನ್ನು ಕಸದ ತಳ್ಳೋ ಬಂಡಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಕಸದಲ್ಲಿ ಹಾಕಿರುವ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಫೋಟೋಗಳ ವಿಡಿಯೋ ವೈರಲ್ ಆಗಿದೆ. ಕಸ ಸಾಗಿಸುವಾತ ಫೋಟೋಗಳನ್ನು ಕಸದೊಂದಿಗೆ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್; ಈ ವೇಳೆ ಇಲ್ಲಿ ಹಾದು ಹೋಗುತ್ತಿದ್ದ ಕೆಲವರು ಪ್ರಧಾನಿ ಮತ್ತು ಸಿಎಂ ಅವರ ಚಿತ್ರಗಳ ಮೇಲೆ ಕಣ್ಣಿಟ್ಟರು. ಕಸ ಗುಡಿಸುವವರನ್ನು ಅಡ್ಡಿಪಡಿಸಿದಾಗ ಅವರು ಜಗಳವಾಡಿದರು. ಜನರು ಅದನ್ನು ವಿಡಿಯೋ ಕೂಡ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರ ಕಸದಲ್ಲಿ ಪ್ರಧಾನಿ ಮತ್ತು ಸಿಎಂ ಅವರ ಫೋಟೋ ವಿಡಿಯೋ ವೈರಲ್ ಆಗಿದ್ದು, ಪಾಲಿಕೆ ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ.

ಕೆಲಸ ಕಳೆದುಕೊಂಡ ಗುತ್ತಿಗೆದಾರ; ಪ್ರಕರಣದ ವಿಡಿಯೋ ವೈರಲ್ ಆದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ವಿಷಯ ಪರಿಶೀಲಿಸಿದ ಬಳಿಕ ಗುತ್ತಿಗೆ ಸ್ವೀಪರ್ ಸೇವೆಯನ್ನು ವಜಾಗೊಳಿಸಲಾಗಿದೆ. ಈ ವೇಳೆ ಹೆಚ್ಚುವರಿ ಪೌರಾಯುಕ್ತ ಸತೇಂದ್ರ ತಿವಾರಿ ಮಾತನಾಡಿ, ಗುತ್ತಿಗೆ ಸ್ವೀಪರ್ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರ ಸೇವೆಯನ್ನು ವಜಾಗೊಳಿಸಲಾಗಿದೆ.
A contractual worker at UP's Mathura Nagar Nigam was terminated after he was found carrying pictures of PM Narendra Modi and CM Yogi Adityanath among other dignitaries in his hand held garbage cart. pic.twitter.com/Jg2x3LW3Mk
— Piyush Rai (@Benarasiyaa) July 17, 2022
Recommended Video
ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ. ಇಲ್ಲಿ ಕಸ ಸಾಗಿಸುವಾತನ ತಪ್ಪು ಮಾತ್ರ ಇಲ್ಲ. ಈ ರೀತಿ ಕಸದಲ್ಲಿ ಫೋಟೋ ಹಾಕುವುದು ಕೂಡ ತಪ್ಪೇ. ಮೊದಲು ಕಸಕ್ಕೆ ಫೋಟೋ ಹಾಕಿದವರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ರೀತಿ ನಡೆದುಕೊಳ್ಳುವುದು ನಮ್ಮ ದೇಶದ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ತೋರಿಸುವ ಗೌರವವಲ್ಲ ಎಂದು ಚರ್ಚೆ ನಡೆಯುತ್ತಿದೆ.












Click it and Unblock the Notifications