• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆ ಮೇಲೆ ಬಂತು ದೆವ್ವಾ; ಹಿಂಗಾದ್ರೆ ಮಂದಿ ಮಲಗೋದ್ ಹೆಂಗವ್ವಾ!?

|
Google Oneindia Kannada News

ಅದು ಕಗ್ಗತ್ತಲ ರಾತ್ರಿ. ಜನ ಊಟ ಮಾಡಿ ಗಾಢ ನಿದ್ದಗೆ ಜಾರಿದ್ರು. ಕನಸುಗಳು ಕಾಣುವ ಸಮಯ ಅದು. ಆದರೆ ಆ ಜನರು ಮಧ್ಯರಾತ್ರಿ ಕಂಡಿದ್ದು ಕನಸ್ಸು ಅಲ್ಲ. ಬದಲಿಗೆ ಭಯಾನಕ ದೃಶ್ಯ. ಮೇಲ್ಛಾವಣಿ ಮೇಲೆ ದೆವ್ವ ನಡೆದಾಡುವ ದೃಶ್ಯ. ಇದನ್ನ ಕಂಡು ಜನ ಭಯದಲ್ಲೇ ರಾತ್ರಿ ಕಳೆದಿದ್ರು. ಕೈಯಲ್ಲಿ ಟಾರ್ಚ್‌, ಮೊಬೈಲ್ ಇಟ್ಟುಕೊಂಡು ಜೊತೆಗೆ ಮನೆ ಮಂದಿಯಲ್ಲ ಕಣ್ಣುಬಿಟ್ಟುಕೊಂಡು ಬೆಳಗಾಗಿಸಿದ್ರು. ಅಷ್ಟಕ್ಕೂ ದೆವ್ವ ಇದಿಯಾ? ದೆವ್ವಾ ಇಲ್ಲ ಅಂತಾದರೆ ಜನ ರಾತ್ರಿ ಕಂಡಿದ್ದೇನು? ಒಂದು ಏರಿಯಾದ ಜನರ ನಿದ್ದೆ ಕದ್ದ ಆ ದೆವ್ವ ಕಂಡಿದ್ದು ಎಲ್ಲಿ? ಏನಿದು ಕಥೆ ಇಲ್ಲಿದೆ ನೋಡಿ ಒಂದು ದೆವ್ವದ ಕಥೆ.

ದೆವ್ವಗಳ ಅಸ್ತಿತ್ವದ ಕುರಿತಾದ ಚರ್ಚೆಗೆ ಈವೆರೆಗೂ ಉತ್ತರ ಸಿಕ್ಕಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಲಕ್ಷಣ ವಿಡಿಯೊ ಮತ್ತೆ ಈ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ವಿಡಿಯೋ ವಾರಣಾಸಿಯಲ್ಲಿನ ಛಾವಣಿಯ ಮೇಲೆ ಬಿಳಿ ಉಡುಗೆಯನ್ನು ಧರಿಸಿರುವ ಭಯಾನಕ ಆಕೃತಿಯನ್ನು ತೋರಿಸುತ್ತದೆ. ಭಯಾನಕವಾಗಿ ಧ್ವನಿಸುತ್ತದೆ. ಅಲ್ಲದೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.

ನಿದ್ದೆಯಿಲ್ಲದೆ ರಾತ್ರಿ ಕಳೆದ ಜನ

ನಿದ್ದೆಯಿಲ್ಲದೆ ರಾತ್ರಿ ಕಳೆದ ಜನ

ಈ ಘೋರ ಅಪರಿಚಿತ ವ್ಯಕ್ತಿಯ ಚಿತ್ರಗಳು ಮತ್ತು ವಿಡಿಯೊಗಳು ವೈರಲ್ ಆದ ನಂತರ, ಭೇಲುಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ (ವಿಡಿಎ) ಕಾಲೋನಿಯಲ್ಲಿರುವ ಉದ್ಯಾನವನದ ಸುತ್ತಮುತ್ತ ವಾಸಿಸುವ ಜನರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದು ಕಿಡಿಗೇಡಿ ಕೃತ್ಯವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದರ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ನಿವಾಸಿಗಳಿಗೆ ತಿಳಿಸಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ವಿಡಿಯೊವನ್ನು ಕಳುಹಿಸಲಾಗಿದೆ.

ಸಂಜೆ ನಂತರ ಮನೆಯಿಂದ ಹೊರಬಾರದ ಜನ

ಸಂಜೆ ನಂತರ ಮನೆಯಿಂದ ಹೊರಬಾರದ ಜನ

ಬಿಳಿ ಬಟ್ಟೆಯನ್ನು ಧರಿಸಿರುವ ಆಕೃತಿಯು ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ನಡೆಯುವುದನ್ನು ವಿಡಿಯೊ ತೋರಿಸುತ್ತದೆ. ಈ ವಿಡಿಯೋ ಕಾಲೋನಿ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. ಕಾಲೋನಿ ಮತ್ತು ಸುತ್ತಮುತ್ತಲಿನ ಜನರು ಸೂರ್ಯಾಸ್ತದ ನಂತರ ಮನೆಯಿಂದ ಹೊರಬರುವುದನ್ನು ತಪ್ಪಿಸಲು ಪ್ರಾರಂಭಿಸಿದ್ದಾರೆ. ವಿಡಿಎ ಕಾಲೋನಿಯ ಸಮೀಪ ವಾಸಿಸುವ ಜನರು ಕೂಡ ಕತ್ತಲಾದ ನಂತರ ಆ ಪ್ರದೇಶಕ್ಕೆ ಹೋಗಲು ಭಯಪಡುತ್ತಿದ್ದಾರೆ.

ವಿಡಿಯೋ ಕಂಡು ಬೆಚ್ಚಿಬಿದ್ದ ಜನ

ವಿಡಿಯೋ ಕಂಡು ಬೆಚ್ಚಿಬಿದ್ದ ಜನ

ವಾರಣಾಸಿಯ ವಿಡಿಎ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕಾಲೋನಿಯ ಜನ ವಿಡಿಯೋ ವೈರಲ್ ಆದ ಬಳಿಕ ಭಯಭೀತರಾಗಿದ್ದಾರೆ. ರಾತ್ರಿ ಮನೆ ಮಂದಿಯೆಲ್ಲ ಒಟ್ಟಿಗೆ ಮಲಗುವುದು ಮತ್ತು ಜೊತೆಗೆ ಓಡಾಡಲು ಪ್ರಾರಂಭಿಸಿದ್ದಾರೆ. ಸೂರ್ಯಸ್ತದ ಬಳಿಕ ಬಹುತೇಕರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದು ಕಿಡಿಗೇಡಿತನದಿಂದ ಹೊರಬಂದ ವಿಡಿಯೋ ಎಂದು ಪೊಲೀಸರು ಹೇಳಿದ ಬಳಿಕ ಕೊಂಚ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ದೂರು ದಾಖಲು

ಕಾಲೋನಿಯ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಲ್ಲಿನ ನಿವಾಸಿಗಳಾದ ಕೆಲ ಹುಡುಗರು ಮೊದಲು ವಿಡಿಯೋ ಹಾಕಿದ್ದರು. ವಿವರಣೆ ವೇಳೆ ಹುಡುಗರು ತೃಪ್ತಿಕರ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಭೇಲುಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ಸಂಪೂರ್ಣ ಕಿಡಿಗೇಡಿತನವಾಗಿದೆ ಎಂದು ವಾರಣಾಸಿ ಪೊಲೀಸ್ ಕಮಿಷನರೇಟ್‌ನ ಡಿಸಿಪಿ ಕಾಶಿ ಆರ್‌ಎಸ್ ಗೌತಮ್ ಆಜ್ ತಕ್‌ಗೆ ತಿಳಿಸಿದ್ದಾರೆ. ಈ ಸಂಬಂಧ ಕೆಲವು ಬಾಲಕರನ್ನು ಗುರುತಿಸಲಾಗಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.

English summary
A scene of a ghost walking on the roof of a house in Varanasi has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X