ಉತ್ತರ ಪ್ರದೇಶ: ನಾಲ್ಕು ಪ್ರತಿಮೆಗಳ ಸ್ಥಾಪನೆಗೆ ಯೋಗಿ ನಿರ್ಧಾರ

ಲಕ್ನೋ, ಡಿಸೆಂಬರ್ 15: ಉತ್ತರ ಪ್ರದೇಶ ಸರ್ಕಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸ್ವಾಮಿ ವಿವೇಕಾನಂದ ಅವರನ್ನು ಒಳಗೊಂಡಂತೆ ನಾಲ್ಕು ಪ್ರತಿಮೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಲೋಕಭವನದಲ್ಲಿ 25 ಅಡಿ ಎತ್ತರದ ವಾಜಪೇಯಿ ಅವರ ಪ್ರತಿಮೆ ನಿರ್ಮಾಣವಾಗಲಿದೆ. ರಾಜಭವನದ ಆವರಣದಲ್ಲಿ ಇಷ್ಟೇ ಎತ್ತರದ ವಿವೇಕಾನಂದ ಪ್ರತಿಮೆ ಅನಾವರಣಗೊಳ್ಳಲಿದೆ.

ಇದರ ಜೊತೆಗೆ ಯೋಗಿ ಆದಿತ್ಯನಾಥ ಸರ್ಕಾರ, ಮಹಾಂತ ಅವೈದ್ಯನಾಥ್ ಮತ್ತು ಮಹಾಂತ ದಿಗ್ವಿಜಯನಾಥ್ ಅವರ 12.5 ಅಡಿ ಎತ್ತರದ ಪ್ರತಿಮೆಗಳನ್ನು ಗೋರಖ್‌ಪುರದಲ್ಲಿ ಸ್ಥಾಪಿಸಲು ನಿರ್ಧಾರ ಮಾಡಿದೆ.

uttar Pradesh Yogi adityanath decided to install 4 statues

ಈ ಎಲ್ಲ ಪ್ರತಿಮೆಗಳ ನಿರ್ಮಾಣಕ್ಕೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನುಮೋದನೆ ನೀಡಿದ್ದಾರೆ ಮತ್ತು ಕೆಲಸ ಕೂಡ ಆರಂಭವಾಗಿದೆ ಎಂದು ಸಂಸ್ಕೃತಿ ಇಲಾಖೆ ವಿಶೇಷ ಕಾರ್ಯದರ್ಶಿ ತಿಳಿಸಿದ್ದಾರೆ.

ಇದು ರಾಜ್ಯದ ವಿರೋಧ ಪಕ್ಷದ ಟೀಕೆಗೆ ಕಾರಣವಾಗಿದೆ. ಯೋಗಿ ಆದಿತ್ಯನಾಥ ಮೊದಲು ಕೆಲಸ ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+