• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Unlock 4.0: ತಾಜ್ ಮಹಲ್ ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ

|
Google Oneindia Kannada News

ಆಗ್ರಾ, ಸಪ್ಟೆಂಬರ್.21: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ರಾಜ್ಯಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಮುಂದುವರಿಯುತ್ತಿದೆ. ಉತ್ತರ ಪ್ರದೇಶದಲ್ಲಿ ಸೋಮವಾರದಿಂದ ಅನ್ ಲಾಕ್ 4.0 ಜಾರಿಗೆ ಬರಲಿದೆ.

ಆಗ್ರಾದಲ್ಲಿ ಇರುವ ಪ್ರೇಮಸೌಧ ತಾಜ್ ಮಹಲ್ ಪ್ರವೇಶಕ್ಕೆ ಸರ್ಕಾರವು ಅನುಮತಿ ನೀಡಿದೆ. ಕೊವಿಡ್-19 ಹರಡುವಿಕೆ ಭೀತಿಯಲ್ಲಿ ಮುಚ್ಚಲಾಗಿದ್ದ ತಾಜ್ ಮಹಲ್ ನ್ನು ಮತ್ತೊಮ್ಮೆ ತೆರೆಯಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

ದೇಶಾದ್ಯಂತ 820 ಪಾರಂಪರಿಕ ತಾಣಗಳು ಇಂದಿನಿಂದ ಓಪನ್ದೇಶಾದ್ಯಂತ 820 ಪಾರಂಪರಿಕ ತಾಣಗಳು ಇಂದಿನಿಂದ ಓಪನ್

ಪ್ರೇಮಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ಮಾರ್ಗಸೂಚಿ ಅನುಸರಿಸುವಂತೆ ಸೂಚನೆಯನ್ನು ನೀಡಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸುವುದು, ಪ್ರವಾಸಿಗರಿಗೆ ಕೊವಿಡ್-19 ತಪಾಸಣೆ ನಡೆಸುವುದು ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸ್ಥಿತಿಗತಿ:

   White Houseಗೆ ವಿಷದ ಅಂಚೆ ರವಾನೆ | Oneindia Kannada

   ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 5 ಸಾವಿರದ ಗಡಿ ದಾಟುತ್ತಿದೆ. ಕಳೆದ 24 ಗಂಟೆಗಳಲ್ಲಿ 5758 ಜನರಿಗೆ ಕೊವಿಡ್-19 ಸೋಂಕು ತಗುಲಿದ್ದು, ಮಹಾಮಾರಿಗೆ 94 ಜನರು ಪ್ರಾಣ ಬಿಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 354275ಕ್ಕೆ ಏರಿಕೆಯಾಗಿದ್ದು, 283274 ಸೋಂಕಿತರು ಗುಣಮುಖರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 65954 ಸಕ್ರಿಯ ಪ್ರಕರಣಗಳಿದ್ದು, 5047 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

   English summary
   Uttar Pradesh: Taj Mahal Reopens For Public From Today As Part Of Unlock 4.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X