ಪುಲ್ವಾಮಾ ದಾಳಿ ನಡೆಯಬೇಕಾಗಿದ್ದೇ ಎಂದ ಸಮಾಜವಾದಿ ಪಕ್ಷ ನಾಯಕ!
ಲಕ್ನೋ, ಫೆಬ್ರವರಿ 16: ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯಿಂದ ಸೈನಿಕರು ಬಲಿಯಾಗಿದ್ದರೆ, ದೇಶದ ಅನೇಕ ರಾಜಕಾರಣಿಗಳು ಈ ದುಃಖದ ಸನ್ನಿವೇಶದಲ್ಲಿಯೂ ರಾಜಕೀಯ ಹುಡುಕುತ್ತಿದ್ದಾರೆ.
ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ದೂಷಿಸುವುದು ತಪ್ಪು ಎಂದು ಹೇಳುವ ಮೂಲಕ ನವಜೋತ್ ಸಿಂಗ್ ಸಿಧು ಜನರ ಭಾವನೆಗಳನ್ನು ಕೆರಳಿಸಿದ್ದರು.
ಅಸೂಕ್ಷ್ಮದ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿ ಮಾಡುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಕೂಡ ಪುಲ್ವಾಮಾ ಘಟನೆಯಲ್ಲಿ ರಾಜಕೀಯ ಲಾಭ ಮಾಡುವ ಪ್ರಯತ್ನ ನಡೆಸಿದ್ದಾರೆ.
ಪುಲ್ವಾಮಾ ಘಟನೆ ನಡೆಯಬೇಕಾಗಿದ್ದೇ ಎಂದು ಅಜಂ ಖಾನ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ನಮ್ಮ ಗುಪ್ತಚರ ಸೇವೆಗಳು ಸೇರಿದಂತೆ ಎಲ್ಲ ಸಂಸ್ಥೆಗಳನ್ನೂ ರಾಜಕೀಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ಸಂಸ್ಥೆಗಳು ಮಮತಾ ಬ್ಯಾನರ್ಜಿ, ರಾಬ್ರಟ್ ವಾದ್ರಾ ಸಾಬ್, ಅಖಿಲೇಶ್ ಜಿ ಅವರ ವಿರುದ್ಧದ ತನಿಖೆಯಲ್ಲಿ ಬ್ಯುಸಿಯಾಗಿವೆ.
ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಜೀವನ ಪರ್ಯಂತ ನೀಡಿದ ಕೊಡುಗೆಗಳನ್ನು ಮರೆಸುವಂತೆ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವ ರೀತಿ ಆಗಿದ್ದನ್ನು ನೀವೇ ನೋಡಿದ್ದೀರಿ.
ಈ ಸಂಸ್ಥೆಗಳನ್ನು ತಮ್ಮ ಕೆಲಸವನ್ನು ಕಿತ್ತುಕೊಂಡು ರಾಜಕೀಯ ಕೆಲಸಗಳಿಗೆ ಹಚ್ಚಿದರೆ ಕೆಟ್ಟ ಘಟನೆಗಳು ನಡೆಯುತ್ತವೆ ಎಂದು ಅಜಂ ಖಾನ್ ಹೇಳಿದ್ದಾರೆ.
ಯಾರೋ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು (ಪಾಕಿಸ್ತಾನ) ದೂಷಿಸುವುದು ತಪ್ಪು. ಇದಕ್ಕೆ ಸಂಬಂಧಪಟ್ಟ ಸಂಘಟನೆಯನ್ನೋ ಅಥವಾ ವ್ಯಕ್ತಿಯನ್ನು ದೂಷಿಸಬೇಕು ಎಂದು, ಉಗ್ರರ ಕೃತ್ಯದಲ್ಲಿ ಪಾಕ್ ಕೈವಾಡವಿಲ್ಲ ಎಂದು ಪರೋಕ್ಷವಾಗಿ ಸಿದ್ದು ಹೇಳಿಕೆ ನೀಡಿದ್ದರು.












Click it and Unblock the Notifications