ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಸರ್ ಬದಲು ಗಂಗಾಜಲ ಬಳಕೆ!
ಲಕ್ನೋ, ಮಾರ್ಚ್ 30: ಕೋವಿಡ್-19 ನಿಯಂತ್ರಣಕ್ಕೆ ಬಹುತೇಕ ಕಟ್ಟಡಗಳು, ಮನೆಗಳು, ಅಂಗಡಿಗಳು ಮುಂತಾದ ಕಡೆ ಸ್ಯಾನಿಟೈಸರ್ ಇರಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಮೀರತ್ನಲ್ಲಿರುವ ನೌಚಂಡಿ ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಸರ್ ಬದಲಿಗೆ ನಿಮಗೆ ಕಾಣಿಸುವುದು ಗಂಗಾಜಲ!
ಹೌದು. ಈ ಪೊಲೀಸ್ ಠಾಣೆಯ ಒಳಗೆ ಬರುವವರ ಕೈಗೆ ಗಂಗಾಜಲ ಚಿಮುಕಿಸಲಾಗುತ್ತದೆ. ಜತೆಗೆ ಚಂದನದ ತಿಲಕವನ್ನು ನೀಡಲಾಗುತ್ತದೆ. ನೌಚಂಡಿ ಪೊಲೀಸ್ ಠಾಣೆಯ ಅಧಿಕಾರಿ ಪ್ರೇಮ್ ಚಂದ್ ಶರ್ಮಾ ಅವರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಸಾಂಕ್ರಾಮಿಕ ಮತ್ತು ಅಪರಾಧ ತಡೆಗೆ ಈ ಕ್ರಮ ತೆಗೆದುಕೊಂಡಿದ್ದಾರಂತೆ.

ಪೊಲೀಸರ ಪ್ರಕಾರ, ಗಂಗಾಜಲವು ಪ್ರಾಚೀನ ಭಾರತದ ಸ್ಯಾನಿಟೈಸರ್. ಇದು ನಮ್ಮ ಪಾಪಗಳನ್ನು ನಾಶಪಡಿಸುವಂತೆ ವೈರಸ್ಗಳನ್ನು ಸಾಯಿಸುತ್ತದೆ. ಹಾಗೆಯೇ ಇಲ್ಲಿಗೆ ಭೇಟಿ ನೀಡುವವರ ಹಣೆಗೆ ಚಂದನದ ತಿಲಕ ಇರಿಸಲಾಗುತ್ತದೆ. ಇದು ಅವರು ಶಾಂತಗೊಳ್ಳಲು ಮತ್ತು ಅವರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಸಾಧ್ಯವಾಗಲಿದೆ.
SHO Prem Chand Sharma in UP's Meerut has been “purifying” visitors with Gangajal while chanting a "sanitization mantra". He has been giving a bottle of Gangajal as a gift to visitors at Nauchandi police station ahead of Holi. pic.twitter.com/J3atuaeCgr
— Piyush Rai (@Benarasiyaa) March 28, 2021
Recommended Video
ಟ್ವಿಟ್ಟರ್ ಬಳಕೆದಾರ ಪಿಯೂಷ್ ರೈ ಎಂಬುವವರು ಎಸ್ಎಚ್ಒ ಪ್ರೇಮ್ ಚಂದ್ ಅವರು ಗಂಗಾಜಲ ಬಾಟಲಿಯೊಂದಿಗೆ ಪೊಲೀಸ್ ಠಾಣೆಗೆ ಬರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಕೊಠಡಿಯ ಮೇಜಿನ ಮೇಲೆ ಗಂಗಾಜಲದ ಹಲವು ಬಾಟಲಿಗಳಿದ್ದು, ಅವರು 'ಸ್ಯಾನಿಟೈಸಿಂಗ್ ಮಂತ್ರ' ಪಠಿಸಿ ತಮ್ಮ ಕೊಠಡಿಯ ಒಳಗೆ ಗಂಗಾಜಲವನ್ನು ಚಿಮುಕಿಸುವುದು ವಿಡಿಯೋದಲ್ಲಿ ದಾಖಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications