7 ತಿಂಗಳಲ್ಲಿ 7 ಬಾರಿ ಕಚ್ಚಿದ ಸರ್ಪ: ಇದರ ಸೇಡಿಗೆ ಕಾರಣವೇನು ಗೊತ್ತಾ?
ರಾಂಪುರ ಏಪ್ರಿಲ್ 17: 'ಹಾವಿನ ದ್ವೇಷ ಹನ್ನೆರಡು ವರ್ಷ' ಎನ್ನುವ ಮಾತನ್ನು ನೀವು ಕೇಳಿರಬಹುದು. ಈ ಬಗ್ಗೆ ಹಾಡು ಇರುವುದು ನಿಮಗೆ ಗೊತ್ತಿದೆ. ಇದಕ್ಕೆ ಪೂರಕವಾದ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಕಪ್ಪು ಹಾವೊಂದು ವ್ಯಕ್ತಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಬಾರಿ ಕಚ್ಚಿದೆಯಂತೆ. ಇದನ್ನು ಕೇಳುತ್ತಿದ್ದಂತೆ ಜನ ಬೆಚ್ಚಿ ಬಿದ್ದಿದ್ದಾರೆ.
ಉತ್ತರಪ್ರದೇಶದ ರಾಂಪುರದಲ್ಲಿ ವ್ಯಕ್ತಿಯೊಬ್ಬ ಕಪ್ಪು ಸರ್ಪದ ಭಯದಲ್ಲಿ ಜೀವನ ನಡೆಸುತ್ತಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ ಕಪ್ಪು ಸರ್ಪ ಅವನಿಗೆ ಏಳು ಬಾರಿ ಕಚ್ಚಿದೆ. ಆದರೆ ಇಲ್ಲಿಯವರೆಗೆ ಅವರು ಬದುಕುಳಿದಿದ್ದಾರೆ. ಆದರೆ ಸರ್ಪವು ಯಾವುದೇ ಸಮಯದಲ್ಲಿ ತನ್ನನ್ನು ಕೊಲ್ಲಬಹುದು ಎಂದು ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಸರ್ಪದ ಕೋಪಕ್ಕೆ ಒಳಗಾದ ಈ ವ್ಯಕ್ತಿಯನ್ನು ನೋಡಲು ಗ್ರಾಮಸ್ಥರು ಅವರ ಮನೆಗೆ ಬರುತ್ತಿದ್ದಾರೆ. ಅಷ್ಟಕ್ಕೂ ವ್ಯಕ್ತಿಯ ಮೇಲೆ ಸರ್ಪವೇಕೆ ಸೇಡು ತೀರಿಸಿಕೊಳ್ಳಲು ಬಯಸುತ್ತದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಇದಕ್ಕೆ ಕಾರಣವೇನು ತಿಳಿಯೋಣ.
ಹಾವನ್ನು ಕೋಲಿನಿಂದ ಹೊಡೆದು ಸಾಯಿಸಿದ್ದ ಬಬ್ಲು
ರಾಂಪುರದ ಸ್ವರ್ ತಹಸಿಲ್ ಪ್ರದೇಶದ ಮಿರ್ಜಾಪುರ ಗ್ರಾಮದ ನಿವಾಸಿ ಎಹ್ಸಾನ್ ಅಲಿಯಾಸ್ ಬಬ್ಲು ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಬ್ಲು ಪ್ರಕಾರ ಏಳು ತಿಂಗಳ ಹಿಂದೆ ಜಮೀನಿನಲ್ಲಿ ಭಯ ಹುಟ್ಟಿಸಿದ್ದ ಜೋಡಿ ಹಾವಲ್ಲಿ ಒಂದನ್ನು ಕೋಲಿನಿಂದ ಹೊಡೆದು ಕೊಲ್ಲಲಾಗಿತ್ತು. ಆದರೆ ಇನ್ನೊಂದು ಸರ್ಪ ಸ್ಥಳದಿಂದ ತಪ್ಪಿಸಿಕೊಂಡಿತ್ತು. ಆದರೆ ಸರ್ಪವು ತನ್ನ ಸತ್ತ ಹಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದೆ. ಬಬ್ಲುವಿನ ಜೀವನ ಮತ್ತು ಹಾವಿನ ಸೇಡಿನ ಈ ಬೆರಗುಗೊಳಿಸುವ ಕಥೆಯು ಎಲ್ಲೆಡೆ ಹರಡಿತು.

ಏಳು ತಿಂಗಳಲ್ಲಿ ಏಳು ಬಾರಿ ಕಚ್ಚಿದ ಸರ್ಪ
ಬಬ್ಲು ಕಪ್ಪು ಸರ್ಪದ ಭಯದ ನೆರಳಿನಲ್ಲಿ ವಾಸಿಸುತ್ತಿದ್ದಾರೆ. 7 ತಿಂಗಳ ಹಿಂದೆ ಎರಡು ಹಾವುಗಳು ನನ್ನ ಮೇಲೆ ದಾಳಿ ಮಾಡಿದ್ದವು ಎಂದು ಬಬ್ಲು ಹೇಳಿದ್ದಾರೆ. ಈ ಹಾವುಗಳಲ್ಲಿ ಒಂದನ್ನು ಕೊಂದು ಹೂತಿಟ್ಟಿದ್ದೆ, ಆದರೆ ಒಂದು ಹಾವು ತಪ್ಪಿಸಿಕೊಂಡು ಪರಾರಿಯಾಗಿದೆ. ಈ ಹಾವು 7 ತಿಂಗಳಿಂದ ನನ್ನ ಹಿಂದೆ ಬಿದ್ದಿದೆ. ನನಗೆ 7 ಬಾರಿ ಕಚ್ಚಿದೆ. ಈ ಸರ್ಪವು ಬಬ್ಲುವಿನ ಕೋಲಿನ ಹೊಡೆತದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂದು ಬಬ್ಲು ಹೇಳಿದ್ದಾರೆ.

'ಯಾವಾಗಲೂ ಭಯದ ನೆರಳಿನಲ್ಲಿ'
ನನಗೆ ನಾಲ್ಕು ಚಿಕ್ಕ ಮಕ್ಕಳಿದ್ದು, ಈಗ ಸದಾ ಭಯದ ನೆರಳಿನಲ್ಲಿ ಇರುತ್ತೇನೆ ಎಂದು ಬಬ್ಲು ಹೇಳಿದರು. ನನಗೆ ಏನಾದರೂ ಸಂಭವಿಸಿದರೆ ನನ್ನ ಕುಟುಂಬಕ್ಕೆ ಏನಾಗುತ್ತದೆ? ಎನ್ನುವ ಭಯ ನನಗೆ ಎಂದು ಬಬ್ಲು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ತೋಟದ ಮಾಲೀಕ ಸತ್ಯೇಂದ್ರ, ಬಬ್ಲು 7 ತಿಂಗಳ ಹಿಂದೆ ಹಾವು ಕಚ್ಚಿ ತುಂಬಾ ತೊಂದರೆಗೆ ಸಿಲುಕಿದ್ದರು. ಒಂದು ಹಾವನ್ನು ಕೊಂದರು. ತಪ್ಪಿಸಿಕೊಂಡು ಇನ್ನೊಂದು ಹಾವು ಅವರಿಗೆ ಕಚ್ಚಿದೆ ಕಚ್ಚಿದಾಗಲೆಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ ಎಂದಿದ್ದಾರೆ. ಸದ್ಯ ಈ ಕಥೆ ಇಡೀ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ.












Click it and Unblock the Notifications