ಉತ್ತರ ಪ್ರದೇಶ ಚುನಾವಣೆ: ಐದನೇ ಹಂತದ ಮತದಾನ ಮುಕ್ತಾಯ, 54.98% ಮತದಾನ

ಲಕ್ನೋ ಫೆಬ್ರವರಿ 28: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನ ಭಾನುವಾರ ಮುಕ್ತಾಯಗೊಂಡಿದ್ದು, ಸಂಜೆ 6 ಗಂಟೆಯವರೆಗೆ ರಾಜ್ಯದಲ್ಲಿ 54.98% ಮತದಾನವಾಗಿದೆ. ಐದನೇ ಹಂತದ ಯುಪಿ ಚುನಾವಣೆಯಲ್ಲಿ ಉತ್ತರ ಪ್ರದೇಶದ 12 ಜಿಲ್ಲೆಗಳ 61 ವಿಧಾನಸಭಾ ಸ್ಥಾನಗಳಿಗೆ ಒಟ್ಟು 692 ಅಭ್ಯರ್ಥಿಗಳು ಕಣದಲ್ಲಿದ್ದರು. ರಾಜ್ಯದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಿತು.

ಅಮೇಥಿ, ರಾಯ್‌ಬರೇಲಿ, ಅಯೋಧ್ಯೆ, ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಢ, ಕೌಶಂಬಿ, ಪ್ರಯಾಗ್‌ರಾಜ್, ಬಾರಾಬಂಕಿ, ಬಹ್ರೈಚ್, ಶ್ರಾವಸ್ತಿ ಮತ್ತು ಗೊಂಡಾ ಜಿಲ್ಲೆಗಳಲ್ಲಿ ಭಾನುವಾರ ಚುನಾವಣೆ ನಡೆಯಿತು. ಭಾರತೀಯ ಚುನಾವಣಾ ಆಯೋಗದ ಮತದಾರರ ಮತದಾನದ ಅಪ್ಲಿಕೇಶನ್ ಪ್ರಕಾರ, ಮತದಾನದ ಪ್ರಮಾಣವು ಸಂಜೆ 6 ಗಂಟೆಯವರೆಗೆ 54.98 ಆಗಿದೆ. ಇಂದು ಅಂತಿಮ ಮತದಾನದ ಅಂಕಿ ಅಂಶ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮತದಾನ?

ಎಲ್ಲೆಲ್ಲಿ ಎಷ್ಟು ಮತದಾನ?

ಐದನೇ ಹಂತದ ಮತದಾನ ಪೂರ್ಣಗೊಂಡಿದ್ದು, ಉತ್ತರ ಪ್ರದೇಶದಲ್ಲಿ ಒಟ್ಟು 403 ಸ್ಥಾನಗಳ ಪೈಕಿ 292 ಸ್ಥಾನಗಳಿಗೆ ಮತದಾನವಾಗಿದೆ. ಯುಪಿ ಅಸೆಂಬ್ಲಿ ಚುನಾವಣೆಯ ಆರು ಮತ್ತು ಏಳನೇ ಹಂತಗಳು ಕ್ರಮವಾಗಿ ಮಾರ್ಚ್ 3 ಮತ್ತು ಮಾರ್ಚ್ 7 ರಂದು ನಡೆಯಲಿವೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಭಾರತೀಯ ಚುನಾವಣಾ ಆಯೋಗದ ಮತದಾನದ ಆ್ಯಪ್ ಪ್ರಕಾರ, ಅಮೇಥಿಯಲ್ಲಿ ಶೇ 55.86, ಅಯೋಧ್ಯೆಯಲ್ಲಿ ಶೇ 58.01, ಬಹ್ರೈಚ್‌ನಲ್ಲಿ ಶೇ 54.60, ಬಾರಾಬಂಕಿಯಲ್ಲಿ ಶೇ 54.65, ಚಿತ್ರಕೂಟದಲ್ಲಿ ಶೇ 59.64 ಮತ್ತು ಗೊಂಡಾ ಶೇ 54.98ರಷ್ಟು ಮತದಾನವಾಗಿದೆ.

ಕೌಶಂಬಿಯಲ್ಲಿ ಶೇಕಡಾ 57.01, ಪ್ರತಾಪಗಢದಲ್ಲಿ ಶೇಕಡಾ 52.65, ಪ್ರಯಾಗರಾಜ್ ಶೇಕಡಾ 53.19, ರಾಯ್ಬರೇಲಿಯಲ್ಲಿ ಶೇಕಡಾ 56.60, ಶ್ರಾವಸ್ತಿಯಲ್ಲಿ ಶೇಕಡಾ 57.24 ಮತ್ತು ಸುಲ್ತಾನ್‌ಪುರದಲ್ಲಿ ಶೇಕಡಾ 55.38 ರಷ್ಟು ಮತದಾನವಾಗಿದೆ.

ಆಂಬ್ಯುಲೆನ್ಸ್‌ನಲ್ಲಿ ಮತದಾನ ಕೇಂದ್ರಕ್ಕೆ ಬಂದ ಅಜ್ಜಿ

ಆಂಬ್ಯುಲೆನ್ಸ್‌ನಲ್ಲಿ ಮತದಾನ ಕೇಂದ್ರಕ್ಕೆ ಬಂದ ಅಜ್ಜಿ

ಪ್ರಯಾಗ್‌ರಾಜ್‌ನ ಅಲ್ಲಾಪುರದಲ್ಲಿ, 78 ವರ್ಷದ ಭೂರಿ ಪಾಠಕ್ ಎಂಬ ವಯಸ್ಸಾದ ಮಹಿಳೆ ಸೊಂಟ ಮುರಿತದಿಂದ ಬಳಲುತ್ತಿದ್ದಾರೆ, ಅವರು ತಮ್ಮ ಹಕ್ಕು ಚಲಾಯಿಸಲು ಆಂಬ್ಯುಲೆನ್ಸ್‌ನಲ್ಲಿ ಮತದಾನ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ ಆಕೆಯ ಮಗ ಚುನಾವಣೆಯಲ್ಲಿ ಆವತ್ತೂ ಅವರು ಮತದಾನ ತಪ್ಪಿಸಿಲ್ಲ ಎಂದು ಹೇಳಿದರು. "ನನ್ನ ಬೆನ್ನಿನಲ್ಲಿ ಮೂಳೆ ಮುರಿತದ ಕಾರಣ ನಾನು ಈ ರೀತಿ ಬರಬೇಕಾಗಿದೆ, ಆದರೆ ನನ್ನ ಮತವನ್ನು ವ್ಯರ್ಥ ಮಾಡಲು ಬಿಡಲಾರೆ" ಎಂದು ಭೂರಿ ಪಾಠಕ್ ಅವರು ಸುದ್ದಿ ಸಂಸ್ಥೆ ANI ಗೆ ಉಲ್ಲೇಖಿಸಿದರು. ಇನ್ನೂ ಕೆಲವರು ವಯಸ್ಸಾದ ಮಹಿಳೆಯರು-ಪುರುಷರು ಮತಗಟ್ಟೆಗೆ ಸ್ಟ್ರೆಚರ್‌ನಲ್ಲಿ ಬರುವುದು ಕೂಡ ಕೆಲವೆಡೆ ಕಂಡು ಬಂದಿದೆ.

ಎಸ್ಪಿ ಅಭ್ಯರ್ಥಿಯ ಬೆಂಗಾವಲು ಮೇಲೆ ದಾಳಿ

ಎಸ್ಪಿ ಅಭ್ಯರ್ಥಿಯ ಬೆಂಗಾವಲು ಮೇಲೆ ದಾಳಿ

ಸಮಾಜವಾದಿ ಪಕ್ಷದ ಅಭ್ಯರ್ಥಿ ಗುಲ್ಶನ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಕೆಲವರು ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಪ್ರತಾಪ್‌ಗಢದ ಕುಂಡಾ ಕ್ಷೇತ್ರವನ್ನು ಹೊರತುಪಡಿಸಿ ಮತದಾನವು ಶಾಂತಿಯುತವಾಗಿತ್ತು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಲಿಖಿತ ದೂರು

ಚುನಾವಣಾ ಆಯೋಗಕ್ಕೆ ಲಿಖಿತ ದೂರು

ಘಟನೆಯಲ್ಲಿ ಗುಲ್ಶನ್ ಯಾದವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ಕೆಲವು ವಾಹನಗಳಿಗೆ ಹಾನಿಯಾಗಿದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ. ಘಟನೆಯ ಕುರಿತು ಸಮಾಜವಾದಿ ಪಕ್ಷದ ರಾಜ್ಯ ಮುಖ್ಯಸ್ಥ ನರೇಶ್ ಉತ್ತಮ್ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ ಚುನಾವಣಾ ಆಯೋಗಕ್ಕೆ ಲಿಖಿತ ದೂರನ್ನು ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+