ಕೋವಿಡ್ 19; ಉತ್ತರ ಪ್ರದೇಶದ ಸಚಿವೆ ಸಾವು
ಲಕ್ನೋ, ಆಗಸ್ಟ್ 02 : ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಇಲಾಖೆ ಸಚಿವೆ ಕಮಲ್ ರಾಣಿ ವರುಣ್ ವಿಧಿವಶರಾಗಿದ್ದಾರೆ. ಜುಲೈ 18ರಂದು ಕೋವಿಡ್ ಸೋಂಕು ತಗುಲಿದ ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಭಾನುವಾರ ಕಮಲ್ ರಾಣಿ ವರುಣ್ ಲಕ್ನೋದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 62 ವರ್ಷದ ಸಚಿವರು ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳದೆ ಕೊನೆಯುಸಿರೆಳೆದಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಅಯೋಧ್ಯೆಗೆ ಭೇಟಿ ನೀಡಬೇಕಿತ್ತು. ಆದರೆ, ಸಂಪುಟದ ಸಚಿವರು ಮೃತಪಟ್ಟ ಹಿನ್ನಲೆಯಲ್ಲಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

1958 ಮೇ 3ರಂದು ಜನಿಸಿದ್ದ ಕಮಲ್ ರಾಣಿ ವರುಣ್ ಉತ್ತರ ಪ್ರದೇಶ ವಿಧಾನಸಭೆಗೆ 11, 12 ಮತ್ತು 13ನೇ ಅವಧಿಯಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಸಚಿವರಾಗಿದ್ದರು.
1996 ರಿಂದ 1997ರ ತನಕ ಲೋಕಸಭಾ ಸದಸ್ಯರಾಗಿಯೂ ಕಮಲ್ ರಾಣಿ ವರುಣ್ ಕಾರ್ಯ ನಿರ್ವಹಣೆ ಮಾಡಿದ್ದರು. ಕಾರ್ಮಿಕ ಕಲ್ಯಾಣ ಮಂಡಳಿ, ಮಹಿಳಾ ಸಬಲೀಕರಣ ಮಂಡಳಿ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು.
ಸಚಿವರ ಸಾವಿಗೆ ಯೋಗಿ ಆದಿತ್ಯನಾಥ್ ಕಂಬನಿ
I express my deepest condolences to the family of Cabinet Minister Kamala Rani Varun. She was #COVID19 positive & was receiving treatment at SGPGI Hospital. She was a popular public leader & a social worker. She worked efficiently while being the part of the Cabinet:CM Adityanath pic.twitter.com/s4n5mnVRXq
— ANI UP (@ANINewsUP) August 2, 2020
ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 89,048. ಇದುವರೆಗೂ ರಾಜ್ಯದಲ್ಲಿ 1,677 ಜನರು ಮೃತಪಟ್ಟಿದ್ದಾರೆ.












Click it and Unblock the Notifications