ಯುಪಿಯಲ್ಲಿ ಕೊರೊನಾ ಇಳಿಕೆ: ಈಜುಕೊಳ, ವಾಟರ್ ಪಾರ್ಕ್‌ಗಳಲ್ಲಿ ನಿರ್ಬಂಧಗಳು ರದ್ದು
ಲಕ್ನೋ ಮಾರ್ಚ್ 17: ಉತ್ತರ ಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು ಎಲ್ಲಾ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿಲಾಗಿದೆ. ಯುಪಿ ಆಡಳಿತ ನೀಡಿದ ನೋಟಿಸ್ ಪ್ರಕಾರ, ಸಾಮಾಜಿಕ ಸಭೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಈಜುಕೊಳಗಳು, ವಾಟರ್ ಪಾರ್ಕ್‌ಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಸಹ ತೆರೆಯಲಾಗುತ್ತದೆ. ಆದರೆ ಮನೆಯಿಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಹೊರಡಿಸಿರುವ ಈ ಆದೇಶದ ಪ್ರಕಾರ, ಮದುವೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಡಿಲಿಕೆ ಇರುತ್ತದೆ. ಈಗ ಮದುವೆಯಲ್ಲಿ ಗರಿಷ್ಠ ಮಿತಿ ಇರುವುದಿಲ್ಲ.
ಉತ್ತರಪ್ರದೇಶದಲ್ಲೂ ಕೊರೋನಾ ಮಹಾಮಾರಿಯಿಂದ ಮಕ್ಕಳನ್ನು ರಕ್ಷಿಸುವ ಕಸರತ್ತು ತೀವ್ರಗೊಂಡಿದೆ. ಮಾರ್ಚ್ 16 ರಂದು, 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ತಡೆಗಟ್ಟುವ ಡೋಸ್‌ಗಳನ್ನು ಪ್ರಾರಂಭಿಸಲಾಗಿದೆ. ಬುಧವಾರ ಯುಪಿಯ 300 ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 51 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 9 ಜಿಲ್ಲೆಗಳು ಸೋಂಕು ಮುಕ್ತವಾಗಿವೆ. ಈಗ ಕೊರೊನಾ ರೋಗಿಯಿಲ್ಲದ ಜಿಲ್ಲೆಗಳಲ್ಲಿ ಬದೌನ್, ಬಲರಾಮ್‌ಪುರ್, ಹಾಪುರ್, ಹತ್ರಾಸ್, ಕಾಸ್‌ಗಂಜ್, ಕೌಶಾಂಬಿ, ಮಹೋಬಾ, ರಾಂಪುರ ಮತ್ತು ಶ್ರಾವಸ್ತಿ ಸೇರಿವೆ. ಮತ್ತೊಂದೆಡೆ, ಇನ್ನೂ 150 ಕೊರೊನಾ ಸೋಂಕಿತ ರೋಗಿಗಳು ಆರೋಗ್ಯವಂತರಾಗಿದ್ದಾರೆ. ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 1059 ಕ್ಕೆ ಇಳಿದಿದೆ.

ಮತ್ತೊಂದೆಡೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬೆನ್ನಲ್ಲೇ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಯುಪಿಯಲ್ಲಿ 37 ವರ್ಷಗಳ ನಂತರ ಸತತ ಎರಡನೇ ಬಾರಿಗೆ ಪಕ್ಷವೊಂದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. ಇಂತಹ ಪರಿಸ್ಥಿತಿಯಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಯುಪಿ ಅಧಿಕಾರ ವಹಿಸಿಕೊಂಡು ಹೊಸ ದಾಖಲೆ ನಿರ್ಮಿಸಲಿದ್ದಾರೆ.
ಮಾರ್ಚ್ 21 ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಲು ಸಮಾರಂಭವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ಹಿರಿಯ ನಾಯಕರು ಸೇರಿದಂತೆ ಸುಮಾರು 70 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಜಯ ಸಾಧಿಸಲು ಕೊರೊನಾ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಒಂದು ಕಾರಣ ಎನ್ನಲಾಗುತ್ತಿದೆ.

2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ನಂತರ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 19 ರಂದು ರಾಜಧಾನಿಯ ರಮಾಬಾಯಿ ಅಂಬೇಡ್ಕರ್ ಸ್ಮೃತಿ ಉಪವಾನ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದೀಗ ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾರ್ಚ್ 21 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಲು ಉದ್ದೇಶಿಸಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಲಕ್ನೋದ ಶಹೀದ್ ಪಥ್‌ನ ಏಕಾನಾ ಸ್ಟೇಡಿಯಂನಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಈ ಬಾರಿ ಉತ್ತರಪ್ರದೇಶದಲ್ಲಿ 3 ಉಪ ಮುಖ್ಯಮಂತ್ರಿಗಳನ್ನು ಮಾಡಬಹುದು. ಅದೇ ಸಮಯದಲ್ಲಿ ನೂತನ ಸಚಿವರು ಪ್ರಮಾಣ ವಚನ ಬೋಧಿಸಬಹುದು. ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ವರ್ಚಸ್ಸು ಕೂಡ ಹೆಚ್ಚಾಗಬಹುದು. ಅಲ್ಲದೆ ಸುರೇಶ್ ಖನ್ನಾ ಅವರನ್ನು ವಿಧಾನಸಭೆಯ ಸ್ಪೀಕರ್ ಮಾಡಬಹುದು. ಈ ಬಾರಿ ಮೈತ್ರಿಕೂಟದ ಪಾಲುದಾರರಾದ ಆಶಿಶ್ ಪಟೇಲ್ (ಅಪ್ನಾ ದಳ) ಮತ್ತು ಸಂಜಯ್ ನಿಶಾದ್ (ನಿಶಾದ್ ಪಕ್ಷ) ಕೂಡ ಯೋಗಿ ಸಂಪುಟದಲ್ಲಿ ಸಚಿವರಾಗುವ ಸಾಧ್ಯತೆಯಿದೆ. ಬಿಜೆಪಿ ನಾಯಕತ್ವ ಈ ಬಾರಿ ಯೋಗಿ ಸಂಪುಟದಲ್ಲಿ ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುತ್ತಿದೆ. ಮೊಹ್ಸಿನ್ ರಜಾ, ತೇಜ್‌ಪಾಲ್ ನಗರ್, ವೀರೇಂದ್ರ ಸಿಂಗ್, ಲಕ್ಷ್ಮೀ ನಾರಾಯಣ ಚೌಧರಿ, ರಾಜೇಶ್ ಚೌಧರಿ, ಯೋಗೇಶ್ ಧಾಮ, ಜಿಎಸ್ ಧರ್ಮೇಶ್, ಅಜಿತ್ ಪಾಲ್ ತ್ಯಾಗಿ ಸಚಿವರಾಗುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಜೊತೆಗೆ ರಾಜ್ಯದಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಉತ್ತರ ಪ್ರದೇಶ ಕೋರ್ ಕಮಿಟಿ ಬುಧವಾರ ಆರು ಗಂಟೆಗಳ ಸುದೀರ್ಘ ಮಹತ್ವದ ಸಭೆ ನಡೆಸಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೆ ಹೊಸ ಸಚಿವ ಸಂಪುಟವನ್ನು ಅಂತಿಮಗೊಳಿಸಲು ಬುಧವಾರ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಬಿ
ಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್, ಯುಪಿ ಹಂಗಾಮಿ ಸಿಎಂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಯುಪಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಕೇಶವ್ ಪ್ರಸಾದ್ ಮೌರ್ಯ ಮತ್ತು ಉಪಮುಖ್ಯಮಂತ್ರಿಗಳಾಗಿದ್ದ ದಿನೇಶ್ ಶರ್ಮಾ ರಾಜ್ಯ ಸರ್ಕಾರ ಸಭೆಯಲ್ಲಿ ಭಾಗವಹಿಸಿದ್ದು, ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ 36 ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲಾಯಿತು.












Click it and Unblock the Notifications