ಬುಲಂದ್ ಶಹರ್ ಪ್ರಕರಣ: ಉನ್ನತ ಪೊಲೀಸ್ ಅಧಿಕಾರಿ ವರ್ಗಾವಣೆ
ಲಕ್ನೋ, ಡಿಸೆಂಬರ್ 08: ಉತ್ತರ ಪ್ರದೇಶದ ಬುಲಂದ್ ಶಹರ್ ಹಿಂಸಾಚಾರದ ಆರು ದಿನಗಳ ನಂತರ ಇಲ್ಲಿನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ.
ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಆರಂಭವಾದ ಪ್ರತಿಭಟನೆ ಗಲಭೆಯಾಗಿ ಬದಲಾಗಿ, ಸುಬೋಧ್ ಕುಮಾರ್ ಸಿಂಗ್ ಎಂಬುವವರ ಹತ್ಯೆಯಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸರಿಯಾಗಿ ನಿಭಾಯಿಸಲು ಅಸಮರ್ಥರಾದ ಕಾರಣ ನೀಡಿ ಹಿರಿಯ ಸೂಪರಿಂಟೆಂಡೆಂಟ್ ಪೊಲೀಸ್ ಕೃಷ್ಣ ಬಹದ್ದೂರ್ ಸಿಂಗ್ ಅವರನ್ನು ಲಕ್ನೋದ ಪೊಲೀಸ್ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಅವರ ಜಾಗಕ್ಕೆ ಸೀತಾಪುರದ ಪ್ರಭಾಕರ್ ಚೌಧರಿ ಎಮಬ ಅಧಿಕಾರಿಯನ್ನು ನೇಮಿಸಲಾಗಿದೆ.

ಅಷ್ಟೇ ಅಲ್ಲ, ಘಟನೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಪೊಲೀಸ್ ಅಧಿಕಾರಿ ಸುಬೋಧ್ ಅವರ ಹತ್ಯೆಗೆ ಸಂಬಂಧಿಸಿದಂತೆ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಜೀತು ಫೌಜಿ ಎಂಬುವವರನ್ನು ಬಂಧಿಸಲಾಗಿದ್ದು, ಅವರೇ ಸುಬೋಧ್ ಅವರನ್ನು ಕೊಂದಿರಬಹುದೆಂದು ಶಂಕಿಸಲಾಗಿದೆ. ಗಲಭೆಯ ಸಂದರ್ಭದ ಕೆಲವು ವಿಡಿಯೋ ತುಣುಕುಗಳು ಕೂಡ ಈ ಶಂಕೆಗೆ ಪುಷ್ಠಿ ನೀಡಿವೆ.












Click it and Unblock the Notifications