• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಯಕಿಯ ಅತ್ಯಾಚಾರ: ಶಾಸಕ ಮತ್ತು ಮಗನ ವಿರುದ್ಧ ಪ್ರಕರಣ

|

ಲಕ್ನೋ, ಅಕ್ಟೋಬರ್ 19: ಉತ್ತರ ಪ್ರದೇಶ ಪೊಲೀಸರು 25 ವರ್ಷದ ಗಾಯಕಿಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪದಲ್ಲಿ ನಿಶಾದ್ ಪಕ್ಷದ ಶಾಸಕ ವಿಜಯ್ ಮಿಶ್ರಾ ಮತ್ತು ಅವರ ಮಗ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಳ್ (ನಿಶಾದ್) ಪಕ್ಷವು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಮಿತ್ರ ಪಕ್ಷವಾಗಿದೆ.

ಹತ್ರಾಸ್ ಅತ್ಯಾಚಾರ ಕೇಸ್: ಆರೋಪಿ ಮನೆಯಲ್ಲಿ ಸಿಬಿಐಗೆ ಸಿಕ್ಕ ರಕ್ತಸಿಕ್ತ ಅಂಗಿ!

2014ರಲ್ಲಿ ಕಾರ್ಯಕ್ರಮವೊಂದಕ್ಕಾಗಿ ಮಿಶ್ರಾ ಅವರು ತಮ್ಮನ್ನು ಮನಗೆ ಕರೆದಿದ್ದರು. ಅಲ್ಲಿ ಅವರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಗಾಯಕಿ ಆರೋಪಿಸಿದ್ದರು.

2015ರಲ್ಲಿ ವಾರಣಾಸಿಯ ಹೋಟೆಲ್‌ನಲ್ಲಿ ಕೂಡ ತಮ್ಮ ಮೇಲೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರದ ಬಳಿಕ ತಮ್ಮನ್ನು ಮನೆಗೆ ಬಿಡುವಂತೆ ಮಗ ಹಾಗೂ ಸೋದರಳಿಯನಿಗೆ ಮಿಶ್ರಾ ಸೂಚಿಸಿದ್ದರು. ಆದರೆ ಮನೆಗೆ ವಾಒಸ್ ಬಿಡುವ ಮುನ್ನ ಅವರಿಬ್ಬರೂ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪ ಮಾಡಿದ್ದರು.

ಅಕ್ರಮ ಭೂ ಒತ್ತುವರಿ ಪ್ರಕರಣದಲ್ಲಿ ವಿಜಯ್ ಮಿಶ್ರಾ ಅವರನ್ನು ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಅವರನ್ನು ಆಗ್ರಾ ಜೈಲಿನಲ್ಲಿ ಇರಿಸಲಾಗಿದೆ.

ಗುಜರಾತ್ ನಲ್ಲಿ ಅತ್ಯಾಚಾರ ಎಸಗಿ 12ರ ಬಾಲಕಿ ಶಿರಚ್ಛೇದಿಸಿದ ಸಂಬಂಧಿ

ಮಿಶ್ರಾ ಜೈಲಿನಲ್ಲಿ ಇದ್ದಾರೆ ಎಂಬ ಮಾಹಿತಿ ಗೊತ್ತಾದ ಬಳಿಕ ಗೋಪಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಧೈರ್ಯ ಮಾಡಿದ್ದಾಗಿ ಗಾಯಕಿ ತಿಳಿಸಿದ್ದಾರೆ. 'ವಿಜಯ್ ಮಿಶ್ರಾ ಬಳಿ ನನ್ನ ಅತ್ಯಾಚಾರದ ವಿಡಿಯೋ ದೃಶ್ಯಗಳಿವೆ. ಮಿಗಿಲಾಗಿ ಆತ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಹಳ ಪ್ರಭಾವಶಾಲಿ. ಹೀಗಾಗಿ ಇದಕ್ಕೂ ಮುನ್ನ ದೂರು ನೀಡಲು ಹೆದರಿದ್ದೆ' ಎಂದಿದ್ದಾರೆ.

English summary
Uttar Pradesh police has booked MLA Vijay Mishra of NISHAD Party, his son and nephew for allegedly raping a 25 year old singer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X