ಪ್ರಿಯಕರನನ್ನು ಭೇಟಿಯಾಗಲು ನಿರಾಕರಿಸಿದ್ದಕ್ಕೆ ಅತ್ಯಾಚಾರ, ಕೊಲೆ

ಲಕ್ನೋ, ಅಕ್ಟೋಬರ್ 21: ಹತ್ರಾಸ್ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ.

ಪ್ರಿಯಕರನನ್ನು ಭೇಟಿಯಾಗಲುನಿರಾಕರಿಸಿದ್ದಕ್ಕೆ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಇದಾಗಿದೆ.

ಬಾಲಕಿ ಮೇಲೆ ಆಕೆಯ ಪ್ರಿಯಕರ ಮತ್ತವನ ಸ್ನೇಹಿತರು ಸೇರಿ ಅತ್ಯಾಚಾರವೆಸಗಿದ್ದಾರೆ. ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದಲ್ಲಿದಲ್ಲಿ ನಡೆದಿದೆ ಇದು ಲಕ್ನೋನಿಂದ 30 ಕಿ.ಮೀ ದೂರದಲ್ಲಿದೆ.

UP Minor Gang Raped, Murdered For Refusing To Meet Boyfriend

ಆಕೆಯ ಮನೆಯಲ್ಲಿ ಇವರಿಬ್ಬರ ಸಂಬಂಧ ಇಷ್ಟವಿರಲಿಲ್ಲ. ಬಾಲಕಿಯು ಕೆಲ ದಿನದಿಂದ ನಾಪತ್ತೆಯಾಗಿದ್ದಳು. ಆಕೆ ಮತ್ತವನ ಸಂಬಂಧದ ಬಗ್ಗೆ ತಿಳಿದಾಗ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ನಾಲೆಗೆ ಶವವನ್ನು ಬಿಸಾಡಿದ್ದರು. ಪೊಲೀಸರು ನಾಲೆ ಬಳಿ ತೆರಳಿದಾಗ ಅಲ್ಲಿ ಶವವಿತ್ತು. ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ ಯುಪಿಹ ಹರಪುರದಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಆಕೆ ಗರ್ಭಿಣಿಯಾಗಿದ್ದಳು, ಆಕೆಗೂ ಏನೂ ತಿಳಿದಿರಲಿಲ್ಲ, ಆಕೆಗೆ ಪದೇ ಪದೇ ಹೊಟ್ಟೆನೋವು ಬರುತ್ತಿತ್ತು ಎಂದು ಆಸ್ಪತ್ರೆಗೆ ಕೊಂಡೊಯ್ದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ ತಾಯಿ ಜೊತೆ ಹುಲ್ಲು ತರಲು ತೆರಳಿದ್ದ ವೇಳೆ 19 ವರ್ಷದ ಯುವತಿಯ ಮೇಲೆ ನಾಲ್ವರು ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+