ಅತ್ಯಾಚಾರದ ಬೆದರಿಕೆ: ಧಾರ್ಮಿಕ ಮುಖಂಡ ಭಜರಂಗ ಮುನಿ ವಿರುದ್ಧ ಕ್ರಮಕ್ಕೆ NCW ಒತ್ತಾಯ
ಲಕ್ನೋ ಏಪ್ರಿಲ್ 8: ರಾಷ್ಟ್ರೀಯ ಮಹಿಳಾ ಆಯೋಗ (NCW) ಶುಕ್ರವಾರ ಉತ್ತರ ಪ್ರದೇಶದ ಕೇಸರಿ ವಸ್ತ್ರದಾರಿ ಸಮುದಾಯವೊಂದರ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆಗಳನ್ನು ನೀಡಿದ ಆರೋಪದ ಮೇಲೆ ಬಂಧಿಸಲು ಕೋರಿದೆ. ಈ ವಿಚಾರದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಲು ಸಾಧ್ಯವಿಲ್ಲ. ಅದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಛೀಮಾರಿ ಹಾಕಿವೆ. ಕೇಸರಿ ವಸ್ತ್ರಧಾರಿ ಭಜರಂಗದಾಸ್ ಮುನಿ ಅವರು ದ್ವೇಷದ ಭಾಷಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕೇಸರಿ ವಸ್ತ್ರಧಾರಿಯೊಬ್ಬರು ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡುತ್ತಾ ಅತ್ಯಾಚಾರ ಬೆದರಿಕೆಯನ್ನು ಹಾಕಿದ್ದಾರೆ ಎಂದು ಹೇಳಲಾದ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಪೊಲೀಸರಿಗೆ ಮನವಿ ಮಾಡಲಾಗಿದೆ. ಏಪ್ರಿಲ್ 2 ರಂದು ಖೈರಾಬಾದ್ ಪಟ್ಟಣದ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸಿನ್ ಆಶ್ರಮದ ಭಜರಂಗ ಮುನಿ ದಾಸ್ ಅವರು ಹಿಂದೂಗಳ ಹೊಸ ವರ್ಷ ಯುಗಾದಿಯ ಸಂದರ್ಭದಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ದ್ವೇಷದ ಭಾಷಣವನ್ನು ಮಾಡಿದ್ದಾರೆ.
ಯಾವುದೇ ಹಿಂದೂ ಹುಡುಗಿಯನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿ ಚುಡಾಯಿಸಿದರೆ, ಆ ಸಮುದಾಯದ ಮಹಿಳೆಯ ಮೇಲೆ ತಾನೂ ಅತ್ಯಾಚಾರ ಮಾಡುತ್ತಾನೆ ಎಂದು ಬಜರಂಗದಾಸ್ ಮುನಿ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು. ಈ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಅವರು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಬಜರಂಗದಾಸ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಮಹಿಳಾ ಹಕ್ಕುಗಳ ಸಮಿತಿ ಕೂಡ ಆತನನ್ನು ಶೀಘ್ರವೇ ಬಂಧಿಸುವಂತೆ ಕೋರಿದೆ.
TRIGGER WARNING!
— Mohammed Zubair (@zoo_bear) April 7, 2022
A Mahant in front of a Masjid in the presence of Police personals warns that He would K!dnap Muslim Women and ₹@pe them in Open.
According to the locals near Sheshe wali Masjid, Khairabad, Sitapur. This happened on 2nd Apr 2022, 2 PM. @sitapurpolice @Uppolice pic.twitter.com/wkBNLnqUW0
ಅವರ ಮೆರವಣಿಗೆ ಮಸೀದಿಯ ಬಳಿ ತಲುಪಿದಾಗ, ಕೇಸರಿ ವಸ್ತ್ರಧಾರಿ ಬಜರಂಗ ಮುನಿ ಅವರು ಧ್ವನಿವರ್ಧಕದಲ್ಲಿ ದ್ವೇಷದ ಭಾಷಣವನ್ನು ಮಾಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ವಿಡಿಯೋದಲ್ಲಿ "ಖೈರಾಬಾದ್‌ನಲ್ಲಿ ಒಬ್ಬ ಹಿಂದೂ ಹುಡುಗಿಯನ್ನು ನೀವು ಚುಡಾಯಿಸಿದರೆ, ನಾನು ನಿಮ್ಮ ಮಗಳು ಮತ್ತು ಸೊಸೆಯನ್ನು ನಿಮ್ಮ ಮನೆಯಿಂದ ಬಹಿರಂಗವಾಗಿ ಕರೆತಂದು ಅತ್ಯಾಚಾರ ಮಾಡುತ್ತೇನೆ ಎಂದು ನಾನು ನಿಮಗೆ ತುಂಬಾ ಪ್ರೀತಿಯಿಂದ ಹೇಳುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

ವೀಡಿಯೊದಲ್ಲಿ, ಕೇಸರಿ ವಸ್ತ್ರಧಾರಿ ವಾಹನದ ಒಳಗಿನಿಂದ ಮೈಕ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು ಖೈರಾಬಾದ್ ಎಂಬ ಪಟ್ಟಣದಲ್ಲಿ ಧಾರ್ಮಿಕ ಮುಖಂಡರಾಗಿದ್ದಾರೆಂದು ತಿಳಿದುಬಂದಿದೆ. ವಿಡಿಯೋದಲ್ಲಿ ಅವನು ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದು, "ಒಂದು ಪ್ರದೇಶದಲ್ಲಿ ಯಾವುದೇ ಹುಡುಗಿಗೆ ಪುರುಷ ಕಿರುಕುಳ ನೀಡಿದರೆ, ನಾನು ನಿಮ್ಮ ಹೆಣ್ಣುಮಕ್ಕಳನ್ನು ನಿಮ್ಮ ಮನೆಯಿಂದ ಎತ್ತಿಕೊಂಡು ಅತ್ಯಾಚಾರ ಮಾಡುತ್ತೇನೆ" ಎಂದಿದ್ದಾರೆ. ಅವರ ಈ ಹೇಳಿಕೆಗೆ ನೆರೆದವರಿಂದ ಹರ್ಷೋದ್ಘಾರ ವ್ಯಕ್ತವಾಯಿತು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ, ಉತ್ತರಪ್ರದೇಶ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದೀಕ್ಷಿತ್ ನೇತೃತ್ವದಲ್ಲಿ ಸೀತಾಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಹೊರಬೀಳುವ ಸತ್ಯ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications