ಅಖಿಲೇಶ್ ಯಾದವ್ ಪಕ್ಷಕ್ಕೆ 300ಕ್ಕೂ ಹೆಚ್ಚು ಸ್ಥಾನ: ಮಮತಾ ಬ್ಯಾನರ್ಜಿ
ಲಕ್ನೋ ಫೆಬ್ರವರಿ 8: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಪ್ರಚಾರ ಮಾಡಲು ಆಗಮಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ವೇದಿಕೆಯ ಮೇಲೆ ನಿಂತಿದ್ದ ಮಮತಾ, ಕೆಳಗೆ ನಿಂತಿದ್ದ ಎಸ್‌ಪಿ ಕಾರ್ಯಕರ್ತರ ಕಡೆಗೆ ಫುಟ್‌ಬಾಲ್ ಎಸೆದರು. ಯುಪಿಯಲ್ಲಿ ಅಖಿಲೇಶ್ ಯಾದವ್ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಭಾರತಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, "ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಮತ್ತು ಬಿಜೆಪಿಯನ್ನು ಸೋಲಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಬಿಜೆಪಿಯವರು ನೀಡುವ ಸುಳ್ಳು ಭರವಸೆಗಳಿಗೆ ಬಲಿಯಾಗಬೇಡಿ. ನಾನು ಕೂಡ ಮಾರ್ಚ್ 3 ರಂದು ವಾರಣಾಸಿಗೆ ಹೋಗುತ್ತೇನೆ. ಬಿಜೆಪಿಯನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ'' ಎಂದು ಹರಿಹಾಯ್ದಿದ್ದಾರೆ.
#WATCH | Lucknow: West Bengal CM and TMC chief Mamata Banerjee throws a football to the public as she holds a press conference with SP chief Akhilesh Yadav, in support to the party for #UttarPradeshElections pic.twitter.com/aDu0pDjIOr
— ANI UP/Uttarakhand (@ANINewsUP) February 8, 2022
ಉತ್ತರ ಪ್ರದೇಶದ ಜನರಲ್ಲಿ ಯೋಗಿ ಕ್ಷಮೆ ಕೇಳಬೇಕು: ಮಮತಾ
ಮಮತಾ ಬ್ಯಾನರ್ಜಿ ಅವರು ಯೋಗಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ರೈತರು ಸಾವನ್ನಪ್ಪುವಾಗ ಯೋಗಿ ಜೀ ನೀವು ಎಲ್ಲಿದ್ದೀರಿ? ಯೋಗಿ ಉತ್ತರ ಪ್ರದೇಶದ ಜನರ ಕ್ಷಮೆ ಕೇಳಬೇಕು ಎಂದರು. ಈ ವೇಳೆ ಅಖಿಲೇಶ್ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಸಂಪೂರ್ಣ ಬಲವನ್ನು ಹಾಕಿದೆ. ಆದರೆ ಮಮತಾ ದೀದಿಯನ್ನು ಸೋಲಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಬಿಜ್ನೋರ್ ಪ್ರವಾಸ ರದ್ದತಿಗೂ ಅಖಿಲೇಶ್ ಕೆಣಕಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದಿಂದ ಲಕ್ನೋಗೆ ಬಂದಿದ್ದಾರೆ, ಆದರೆ ಹವಾಮಾನ ವೈಪರೀತ್ಯದಿಂದಾಗಿ ಬಿಜೆಪಿಯವರು ದೆಹಲಿಯಿಂದ ಯುಪಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಈ ಬಾರಿ ಬಿಜೆಪಿಯ ಸುಳ್ಳಿನ ಹಡಗು ಉತ್ತರ ಪ್ರದೇಶದಲ್ಲಿ ಇಳಿಯಲು ಸಾಧ್ಯವಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.


ಹಾಗೇ, ಅಖಿಲೇಶ್ ಯಾದವ್ ಕೂಡ 2011 ಮತ್ತು 2016ರ ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ದೀದಿ ಪರ ಪ್ರಚಾರ ನಡೆಸಿದ್ದರು. 2021ರಲ್ಲಿ ತಾವು ಹೋಗದೆ ಇದ್ದರೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪ-ಅಧ್ಯಕ್ಷ ಕಿರಣ್ಮಯ್ ನಂದಾ ಮತ್ತು ರಾಜ್ಯ ಸಭಾ ಸದಸ್ಯೆ ಜಯ ಬಚ್ಚನ್ರನ್ನು ಕಳಿಸಿದ್ದರು.












Click it and Unblock the Notifications