ಹತ್ರಾಸ್ ಅತ್ಯಾಚಾರ ಪ್ರಕರಣ; 3ನೇ ಹಂತದ ಮತದಾನದಲ್ಲಿ ಬಿಜೆಪಿಗೆ ಪರೀಕ್ಷೆ
ಲಕ್ನೋ ಫೆಬ್ರವರಿ 17: ಉತ್ತರಪ್ರದೇಶದ ಏಳು ಹಂತದ ವಿಧಾನಸಭಾ ಚುನಾವಣೆಯಲ್ಲಿ ಎರಡು ಹಂತದ ಮತದಾನ ಪೂರ್ಣಗೊಂಡಿದ್ದು ಇನ್ನೂ ಐದು ಹಂತದದ ಮತದಾನ ಬಾಕಿ ಉಳಿದಿದೆ. ಮೂರನೇ ಹಂತದ ಮತದಾನ ಇದೇ ಭಾನುವಾರ (ಫೆಬ್ರವರಿ 20) ನಡೆಯಲಿದೆ. ಈ ನಡುವೆ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷಗಳ ನಡುವೆ ಪರಸ್ಪರ ವಾಗ್ದಾಳಿ ಜೋರಾಗಿದೆ. ಮೂರನೇ ಹಂತದ ಚುನಾವಣೆಗೆ ಬಿಜೆಪಿ ವಿರುದ್ಧ ದಾಳಿ ಮಾಡಲು ಹತ್ರಾಸ್ ಪ್ರಕರಣ ಮುನ್ನಲೆಗೆ ಬಂದಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ನಡುವಿನ ನಿರಂತರ ವಾಗ್ವಾದದ ನಡುವೆ, ಹತ್ರಾಸ್ ಘಟನೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದಲ್ಲಿ ಕೇಸರಿ ಪಕ್ಷಕ್ಕೆ ಮತ್ತೆ ಕಾಡಲು ಶುರುಮಾಡಿದೆ. ಸೆಪ್ಟೆಂಬರ್ 2020 ರಲ್ಲಿ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ರಾಜಕೀಯ ಅಸ್ತ್ರವನ್ನಾಗಿ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ.
ದೆಹಲಿಯಲ್ಲಿ 87 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ: ತನಿಖೆಗಾಗಿ ಎಸ್‌ಐಟಿ ರಚನೆ
ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ. ಹತ್ರಾಸ್ ಪ್ರಕರಣವನ್ನು ಪ್ರಸ್ತಾಪಿಸಿ ಯೋಗಿ ಆದಿತ್ಯನಾಥ್ ಆಡಳಿತ ವ್ಯವಸ್ಥೆಯ ವಿರುದ್ಧ ಅವರು ವಾಗ್ದಾಳಿ ಮಾಡಿದ್ದಾರೆ. ಹತ್ರಾಸ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಯಾದವ್, "ದುರದೃಷ್ಟಕರ ಹುಡುಗಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಮತ್ತು ಅವಳು ಸತ್ತಾಗ, ಆಕೆಯ ಕುಟುಂಬ ಸದಸ್ಯರು ಅವಳನ್ನು ಶವಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ. ಅವರಿಗೆ ಅವಮಾನಿಸಿದರು. ಮಹಿಳೆಯ ಶವವನ್ನು ರಾತ್ರಿಯಲ್ಲಿ ಪೊಲೀಸರು ಬಲವಂತವಾಗಿ ಸುಟ್ಟುಹಾಕಿದರು. ಕುಟುಂಬದ ಆಶಯಗಳಿಗೂ ಕಡಿವಾಣ ಹಾಕಲಾಯಿತು" ಎಂದು ಯೋಗಿ ಆಡಳಿತದ ವಿರುದ್ಧ ಅಖಿಲೇಶ್ ಕಿಡಿ ಕಾರಿದ್ದಾರೆ.

"ಆಲೂಗಡ್ಡೆ ಬೆಲ್ಟ್" ಎಂದೂ ಕರೆಯಲ್ಪಡುವ ಯಾದವ ನಾಡಿನಲ್ಲಿ ಮೂರನೇ ಸುತ್ತಿನ ಚುನಾವಣೆ ಪ್ರವೇಶಿಸುವುದರೊಂದಿಗೆ ಬಿಜೆಪಿ ಮತ್ತು ಎಸ್ಪಿ ನಡುವೆ ಮಾತಿನ ಸಮರ ತೀವ್ರಗೊಂಡಿದೆ. ಈ ಪ್ರದೇಶ ಹೆಚ್ಚಿನ ಪ್ರಮಾಣದ ಅಪರಾಧಕ್ಕಾಗಿ ಕುಖ್ಯಾತವಾಗಿದೆ. ಐದು ಜಿಲ್ಲೆಗಳು - ಝಾನ್ಸಿ, ಲಲಿತ್‌ಪುರ್, ಜಲೌನ್, ಹಮೀರ್‌ಪುರ್ ಮತ್ತು ಮಹೋಬಾದಲ್ಲಿ ಮೂರನೇ ಹಂತದಲ್ಲಿ ಫೆಬ್ರವರಿ 20 ರಂದು 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಫೆಬ್ರವರಿ 20 ರಂದು ಉತ್ತರ ಪ್ರದೇಶದ "ಆಲೂಗಡ್ಡೆ ಬೆಲ್ಟ್"(ಯಾದವರ ನಾಡು) ನ 59 ಕ್ಷೇತ್ರಗಳಲ್ಲಿ ಮೂರನೇ ಸುತ್ತಿನ ಮತದಾನದಲ್ಲಿ ಬಿಜೆಪಿ ಮತ್ತು ಎಸ್ಪಿ ನಡುವೆ ಕಠಿಣ ಹೋರಾಟ ನಡೆಸುತ್ತಿವೆ. ಮೊದಲ ಎರಡು ಸುತ್ತುಗಳಿಗಿಂತಲೂ ಇದು ಬಿಜೆಪಿಗೆ ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಗಣನೀಯ ಯಾದವ ಸಮುದಾಯದ ಬೆಂಬಲವನ್ನು ಹೊಂದಿರುವ ಎಸ್‌ಪಿ, ಯಾದವೇತರ ಒಬಿಸಿಗಳ ನಡುವೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಚುನಾವಣೆ ನಡೆಯಲಿರುವ 16 ಜಿಲ್ಲೆಗಳ ಪೈಕಿ ಒಂಬತ್ತರಲ್ಲಿ ಯಾದವ ಸಮುದಾಯ ಚೆನ್ನಾಗಿ ಬೇರೂರಿದ್ದರೆ, ಫಿರೋಜಾಬಾದ್, ಫರೂಕಾಬಾದ್, ಕನ್ನೌಜ್ ಮತ್ತು ಕಾನ್ಪುರ ನಗರದಲ್ಲಿ ಮುಸ್ಲಿಂ ಪಾಕೆಟ್ಸ್ ಕಡಿಮೆ ಇದ್ದಾರೆ.
2017 ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಒಬಿಸಿ, ಮೇಲ್ಜಾತಿಗಳು ಮತ್ತು ಜಾತವ್ ಅಲ್ಲದ ದಲಿತರೊಂದಿಗಿನ ಮೈತ್ರಿಯೊಂದಿಗೆ ಬಿಜೆಪಿ ಯಶಸ್ವಿಯಾಗಿತ್ತು. ಆದಾಗ್ಯೂ, ಕಳೆದ ಐದು ವರ್ಷಗಳಲ್ಲಿ ಬಡ ಜನರಲ್ಲಿ "ಫಲಾನುಭವಿ ಗುಂಪು" (ಸರಕಾರದ ವಿವಿಧ ಯೋಜನೆಗಳಿಂದ ಪ್ರಯೋಜನ ಪಡೆದ ಜನರು) ಹೊರಹೊಮ್ಮುವಿಕೆಯು ಬಿಜೆಪಿಯ ಬೆಂಬಲದ ನೆಲೆಯನ್ನು ಮತ್ತಷ್ಟು ಬಲಪಡಿಸಿದೆ. ಬಿಜೆಪಿಗೆ ಈ ಗುಂಪಿನ ಮೌನ ಬೆಂಬಲವಿದೆ ಎಂದು ರಾಜಕೀಯ ವಿಶ್ಲೇಷಕ ಬ್ರಿಜೇಶ್ ಶುಕ್ಲಾ ಹೇಳಿದ್ದಾರೆ. ಹತ್ರಾಸ್, ಫಿರೋಜಾಬಾದ್, ಕಾಸ್ಗಂಜ್, ಇಟಾಹ್, ಮೈನ್‌ಪುರಿ, ಫರೂಕಾಬಾದ್, ಕನ್ನೌಜ್, ಇಟಾವಾ, ಔರಯ್ಯ, ಕಾನ್ಪುರ್ ದೇಹತ್, ಕಾನ್ಪುರ್, ಜಲೌನ್, ಝಾನ್ಸಿ, ಲಲಿತ್‌ಪುರ್, ಹಮೀರ್‌ಪುರ್ ಮತ್ತು ಮಹೋಬಾದಲ್ಲಿ ಮತದಾನ ನಡೆಯಲಿದೆ.












Click it and Unblock the Notifications