ಯುಪಿ ಚುನಾವಣೆ 2022: ಸಮೀಕ್ಷೆ ಪ್ರಕಾರ ಬಿಜೆಪಿಗೆ ಗೆಲುವಾದರೂ ಸ್ಥಾನಗಳಲ್ಲಿ ಕುಸಿತ
ಲಕ್ನೋ ಜನವರಿ 12: ಉತ್ತರಪ್ರದೇಶ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ಕಸರತ್ತು ಮಾಡುತ್ತಿವೆ. ಈ ನಡುವೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಗಿಟ್ಟಿಸಿಕೊಳ್ಳಲಿದೆ ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ. ಇದಕ್ಕೆ ಹಲವಾರು ಸಮೀಕ್ಷೆಗಳು ನಡೆದಿವೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಬಿಜೆಪಿ 2017 ರ ಯುಪಿ ವಿಧಾನಸಭಾ ಚುನಾವಣೆಗಿಂತ 96 ಸ್ಥಾನಗಳು ಕಡಿಮೆಯಾಗಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆ 2022 ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು 229 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಅಂದರೆ 2017 ರ ಯುಪಿ ವಿಧಾನಸಭಾ ಚುನಾವಣೆಗಿಂತ 96 ಸ್ಥಾನಗಳು ಕಡಿಮೆಯಾಗಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ.
ಇದಕ್ಕೆ ಕಾರಣ ಸಮಾಜವಾದಿ ಪಕ್ಷ. ಸಮಾಜವಾದಿ ಪಕ್ಷವು ಬಿಜೆಪಿಗೆ ಕಠಿಣ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದ್ದು ಬಿಜೆಪಿ ಗೆಲ್ಲುವ ಸ್ಥಾನಗಳಲ್ಲಿ ತನ್ನ ಬಲಪ್ರದರ್ಶನ ನಡೆಸಿದೆ. ಇದು 152-160 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಈ ಎರಡೂ ಪಕ್ಷಗಳು ಅಧಿಕ ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇರುವುದರಿಂದ ಮಾಯಾವತಿಯವರ ಬಿಎಸ್‌ಪಿ ಮತ್ತು ಕಾಂಗ್ರೆಸ್‌ಗೆ ದೊಡ್ಡ ನಷ್ಟವಾಗಲಿದೆ. ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸಣ್ಣ ಸಣ್ಣ ಮಿತ್ರಪಕ್ಷಗಳೊಂದಿಗೆ ಗಮನಾರ್ಹ ಬೆಳವಣಿಗೆಯನ್ನು ಸಾಧಿಸುತ್ತಿದೆ. ಇದು ಬಿಜೆಪಿಗೆ ಕಠಿಣ ಸ್ಪರ್ಧೆ ನೀಡುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
2017ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ನಿಜವಾದ 23.6% ಮತಗಳಿಗೆ ಹೋಲಿಸಿದರೆ ಎಸ್‌ಪಿ ಮೈತ್ರಿಕೂಟವು 33.5% ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಮತ ಹಂಚಿಕೆಯಾದರೂ ಬಿಜೆಪಿ ಬಹುತೇಕ ಮತಗಳ ಪಾಲನ್ನು ಉಳಿಸಿಕೊಂಡಿದೆ. ಸಮೀಕ್ಷೆಯ ಪ್ರಕಾರ, 2017 ರಲ್ಲಿ ಬಿಜೆಪಿ 41.4% ರಷ್ಟು ಮತಗಳನ್ನು ಪಡೆದುಕೊಂಡಿತ್ತು. 2022 ರಲ್ಲಿ 40.7% ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಇನ್ನೂ ಮಯಾವತಿಯವರ BSP 2017 UP ಅಸೆಂಬ್ಲಿ ಚುನಾವಣೆಯಲ್ಲಿ 22.2% ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಆದರೀಗ 2022 UP ಅಸೆಂಬ್ಲಿ ಚುನಾವಣೆಯಲ್ಲಿ 12.9% ಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ.

ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ "ಲಡ್ಕಿ ಹೂ, ಲಾಡ್ ಸಕ್ತಿ ಹೂ" ನಂತಹ ಮಹಿಳಾ ಬೆಂಬಲ ಘೋಷಣೆಗಳು, ಕಲ್ಯಾಣ ಯೋಜನೆಗಳ ಅಸಂಖ್ಯಾತ ಭರವಸೆಗಳು ಉತ್ತರ ಪ್ರದೇಶದ ಮತದಾರರನ್ನು ಮೆಚ್ಚಿಸಲು ವಿಫಲವಾಗಿವೆ. 1985 ರ ನಂತರ ರಾಜ್ಯದಲ್ಲಿ ಯಾವುದೇ ಪಕ್ಷವು ಸತತ ಎರಡು ವಿಧಾನಸಭಾ ಚುನಾವಣೆಗಳನ್ನು ಗೆಲ್ಲದಿರುವದನ್ನು ಮುರಿಯಲು ಉತ್ತರ ಪ್ರದೇಶದಲ್ಲಿ ಬಿಜೆಪಿ ಗುರಿಯನ್ನು ಹೊಂದಿದೆ. ರಾಜ್ಯದ 403 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಯೋಚಿಸುತ್ತಿದೆ. ಇದರ ಮೇಲೆ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಪ್ರಮುಖ ಪ್ರಭಾವ ಬೀರುತ್ತವೆ.
ಯುಪಿಯಲ್ಲಿ ಆಡಳಿತ ಪಕ್ಷದ ಪ್ರಚಾರವನ್ನು ಮುನ್ನಡೆಸುತ್ತಿರುವ ಕೇಂದ್ರ ಸಚಿವ ಅಮಿತ್ ಶಾ, ಕೆಲವು ವಾರಗಳ ಹಿಂದೆ ರ್ಯಾಲಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗ ಬಿಜೆಪಿಯ ಕೇಂದ್ರ ನಾಯಕತ್ವದ ಪರವಾಗಿಲ್ಲ ಎಂಬ ಊಹಾಪೋಹಗಳಿಗೆ ತೆರೆ ಎಳೆದರು. 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ 312 ಸ್ಥಾನಗಳನ್ನು ಗೆದ್ದು ಭರ್ಜರಿ ಗೆಲುವು ದಾಖಲಿಸಿತ್ತು ಮತ್ತು ಮಿತ್ರಪಕ್ಷಗಳು ಗೆದ್ದಿದ್ದನ್ನು ಸಹ ಎಣಿಸಿದರೆ 325 ಸ್ಥಾನಗಳನ್ನು ಗಳಿಸಿತ್ತು.

Recommended Video
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 49 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿತ್ತು. ಮಾಯಾವತಿಯವರ ಬಹುಜನ ಸಮಾಜ ಪಕ್ಷ 19 ಸ್ಥಾನಗಳನ್ನು ಗಳಿಸಿದರೆ, ಅಪ್ನಾ ದಳ (ಸೋನೆಲಾಲ್) ಒಂಬತ್ತು, ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಎಸ್‌ಪಿ 2017ರಲ್ಲಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿತ್ತು. ಈ ಬಾರಿ ಕಾಂಗ್ರೆಸ್ ಉತ್ತಮ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆಯುವುದು ಸುಲಭವಲ್ಲ. ಹೀಗಾಗಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ನೇರ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಇತರ ನಾಲ್ಕು ರಾಜ್ಯಗಳ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.












Click it and Unblock the Notifications