ಯುಪಿ ಚುನಾವಣಾ ಫಲಿತಾಂಶ: ಯೋಗಿ ಸರ್ಕಾರದ ಡಿಸಿಎಂ ಸೇರಿದಂತೆ 11 ಸಚಿವರು ಪರಾಭವ
ಲಕ್ನೋ, ಮಾರ್ಚ್ 11: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 255 ಸ್ಥಾನಗಳನ್ನು ಪಡೆದಿದ್ದರೆ, ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಇನ್ನೂ ಬಿಎಸ್‌ಪಿ ಕೂಡ ಒಂದೇ ಒಂದು ಸ್ಥಾನ ಪಡೆದುಕೊಂಡಿದ್ದು ಭಾರೀ ಮುಖಭಂಗವನ್ನು ಎದುರಿಸಿದೆ. ಯುಪಿಯ 403 ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202.
ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ (ಮಾರ್ಚ್ 10, 2022) ತನ್ನ ಆರಂಭಿಕ ಹೋಳಿ ಭರವಸೆಯನ್ನು ಉಳಿಸಿಕೊಂಡಿದ್ದು, ಬಿಜೆಪಿಯು 37 ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೆ ಮರು ಆಯ್ಕೆಯಾದ ಮೊದಲ ಪಕ್ಷವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೋಡಿಯ ಪರಿಣಾಮಕಾರಿ ಪ್ರಚಾರ ಮತ್ತು ತಳಮಟ್ಟದ ಸಂಘಟನೆಯಿಂದಾಗಿ ಕೇಸರಿ ಪಕ್ಷವು 255 ಸ್ಥಾನಗಳನ್ನು ಗೆದ್ದಿದೆ. ಇದು ಯುಪಿ ವಿಧಾನಸಭೆಯ 403 ಸದಸ್ಯ ಬಲದ ಬಹುಮತ ಪಡೆಯಲು ಬೇಕಾದ 202ಕ್ಕಿಂತ 53 ಸ್ಥಾನಗಳು ಹೆಚ್ಚು.

ಆದಾಗ್ಯೂ, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ 11 ಸಚಿವರು 2022ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ವಿಫಲರಾಗಿದ್ದಾರೆ.
* ಕೇಶವ್ ಪ್ರಸಾದ್ ಮೌರ್ಯ
ಕೇಶವ್ ಪ್ರಸಾದ್ ಮೌರ್ಯ ಅವರು ಸಿರತು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳಿಂದ ಸೋತಿದ್ದಾರೆ. ಪಲ್ಲವಿ ಪಟೇಲ್ ಅವರು ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾದ ಅಪ್ನಾ ದಳ (ಕೆ) ಉಪಾಧ್ಯಕ್ಷರಾಗಿದ್ದಾರೆ.
* ಸುರೇಶ್ ರಾಣಾ
ಕಬ್ಬು ಸಚಿವ ಸುರೇಶ್ ರಾಣಾ ಅವರು ಶಾಮ್ಲಿ ಜಿಲ್ಲೆಯ ಠಾಣಾ ಭವನದಲ್ಲಿ ಆರ್‌ಎಲ್‌ಡಿಯ ಅಶ್ರಫ್ ಅಲಿ ಖಾನ್ ವಿರುದ್ಧ 10,000 ಮತಗಳಿಂದ ಸೋತಿದ್ದಾರೆ.
* ಛತ್ರಪಾಲ್ ಸಿಂಗ್ ಗಂಗ್ವಾರ್
ಬರೇಲಿ ಜಿಲ್ಲೆಯ ಬಹೇರಿ ಕ್ಷೇತ್ರದಲ್ಲಿ ಛತ್ರಪಾಲ್ ಸಿಂಗ್ ಗಂಗ್ವಾರ್ ಅವರನ್ನು ಸಮಾಜವಾದಿ ಪಕ್ಷದ ಅತೌರ್ ರೆಹಮಾನ್ 3,355 ಮತಗಳಿಂದ ಸೋಲಿಸಿದ್ದಾರೆ.
* ರಾಜೇಂದ್ರ ಪ್ರತಾಪ್ ಸಿಂಗ್
ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಮೋತಿ ಸಿಂಗ್ ಅವರು ಪ್ರತಾಪ್‌ಗಢದ ಪಟ್ಟಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ರಾಮ್ ಸಿಂಗ್ ವಿರುದ್ಧ 22,051 ಮತಗಳಿಂದ ಸೋಲು ಅನುಭವಿಸಿದ್ದಾರೆ.
* ಚಂದ್ರಿಕಾ ಪ್ರಸಾದ್ ಉಪಾಧ್ಯಾಯ
ಯೋಗಿ ಆದಿತ್ಯನಾಥ್ ಸರ್ಕಾರದ ಮತ್ತೊಬ್ಬ ಸಚಿವ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಅವರು ಚಿತ್ರಕೂಟದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಅನಿಲ್ ಕುಮಾರ್ ವಿರುದ್ಧ 20,876 ಮತಗಳಿಂದ ಸೋತಿದ್ದಾರೆ.
* ಆನಂದ್ ಸ್ವರೂಪ್ ಶುಕ್ಲಾ
ಆನಂದ್ ಸ್ವರೂಪ್ ಶುಕ್ಲಾ ಅವರು ಬಲ್ಲಿಯಾ ಜಿಲ್ಲೆಯ ಬರಿಯಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಜೈಪ್ರಕಾಶ್ ಅಂಚಲ್ ವಿರುದ್ಧ 12,951 ಮತಗಳಿಂದ ಸೋತಿದ್ದಾರೆ. ಶುಕ್ಲಾ ಕಳೆದ ಬಾರಿ ಬಲ್ಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಹಾಲಿ ಶಾಸಕ ಸುರೇಂದ್ರ ಸಿಂಗ್ ಬದಲಿಗೆ ಬರಿಯಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.
* ಉಪೇಂದ್ರ ತಿವಾರಿ
ರಾಜ್ಯದ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಬಲ್ಲಿಯಾದ ಫೆಫ್ನಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಗ್ರಾಮ್ ಸಿಂಗ್ ವಿರುದ್ಧ 19,354 ಮತಗಳ ಅಂತರದಿಂದ ಸೋತಿದ್ದಾರೆ.
* ರಣವೇಂದ್ರ ಸಿಂಗ್ ಧುನ್ನಿ
ಫತೇಪುರ್ ಜಿಲ್ಲೆಯ ಹುಸೇನ್ ಗಂಜ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಉಷಾ ಮೌರ್ಯ ವಿರುದ್ಧ ರಣವೇಂದ್ರ ಸಿಂಗ್ ಧುನ್ನಿ ಅವರು 25,181 ಮತಗಳಿಂದ ಸೋತಿದ್ದಾರೆ.
* ಲಖನ್ ಸಿಂಗ್ ರಜಪೂತ್
ಔರೈಯಾ ಜಿಲ್ಲೆಯ ದಿಬಿಯಾಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪ್ರದೀಪ್ ಕುಮಾರ್ ಯಾದವ್ ವಿರುದ್ಧ ಲಖನ್ ಸಿಂಗ್ ರಜಪೂತ್ ಅವರು ಕೇವಲ 473 ಮತಗಳಿಂದ ಸೋಲು ಅನುಭವಿಸಿದರು.
* ಸತೀಶ್ ಚಂದ್ರ ದ್ವಿವೇದಿ
ರಾಜ್ಯದ ಮೂಲ ಶಿಕ್ಷಣ ಸಚಿವ ಸತೀಶ್ ಚಂದ್ರ ದ್ವಿವೇದಿ ಅವರನ್ನು ಎಸ್‌ಪಿ ಅಭ್ಯರ್ಥಿ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ಸಿದ್ಧಾರ್ಥನಗರ ಜಿಲ್ಲೆಯ ಇಟ್ವಾ ಕ್ಷೇತ್ರದಲ್ಲಿ 1,662 ಮತಗಳಿಂದ ಸೋಲಿಸಿದರು.
ಸಂಗೀತಾ ಬಲವಂತ
ಸಂಗೀತಾ ಬಲ್ವಂತ್ ಅವರನ್ನು ಎಸ್‌ಪಿಯ ಜೈ ಕಿಶನ್ ಅವರು ಗಾಜಿಪುರ ಕ್ಷೇತ್ರದಲ್ಲಿ 1,692 ಮತಗಳಿಂದ ಸೋಲಿಸಿದರು.












Click it and Unblock the Notifications