ಯುಪಿ ಟಿಕೆಟ್‌ಗಾಗಿ ಲಂಚ: 'ಕೈ' ಬಿಟ್ಟ ಪ್ರಿಯಾಂಕಾ ನಡೆ ಬಿಜೆಪಿ ಕಡೆಗೆ

ಲಕ್ನೋ ಜನವರಿ 20: ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡಲು ಲಂಚ ಕೇಳಲಾಗಿತ್ತು ಎಂದು ಕಾಂಗ್ರೆಸ್ ಮೇಲೆ ಗಂಭೀರ ಆರೋಪ ಮಾಡಿದ ಪ್ರಿಯಾಂಕಾ ಮೌರ್ಯ ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ. ಯುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು 'ಲಡ್ಕಿ ಹೂ, ಲಡ್ ಸಕ್ತಿ ಹೂ' ಅಭಿಯಾನದ ಪೋಸ್ಟರ್ ಗರ್ಲ್ ದೂರಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ 'ಲಡ್ಕಿ ಹೂ, ಲಾಡ್ ಸಕ್ತಿ ಹೂ (ನಾನು ಹುಡುಗಿ, ನಾನು ಹೋರಾಡಬಲ್ಲೆ)' ಅಭಿಯಾನದ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯ ಕೆಲ ದಿನಗಳ ಹಿಂದೆ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸದ್ಯಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಸ್ಪರ್ಧಿಸುವ ಆಶೆಯದೊಂದಿಗೆ ಕಾಂಗ್ರೆಸ್ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಟಿಕೆಟ್ ರಾಜಕೀಯ: ಪ್ರಿಯಾಂಕಾ ಗಾಂಧಿ ವಿರುದ್ಧ ಪ್ರಿಯಾಂಕಾ ಗರಂ
ಮೌರ್ಯ ಅವರು ಬುಧವಾರ ಲಕ್ನೋದ ಬಿಜೆಪಿ ಕಚೇರಿಯಲ್ಲಿ ಹಾಜರಿದ್ದರು. ಭೇಟಿಯ ವೇಳೆ ಪಕ್ಷ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಬಹುಶಃ ಹೌದು, ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಅಲ್ಲಿ ಟಿಕೆಟ್ ಹಂಚಿಕೆ ಪೂರ್ವ ಯೋಜಿತವಾಗಿತ್ತು. ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಆದರೆ ನಾನು ಅರ್ಹ ಅಭ್ಯರ್ಥಿ," ಎಂದು ಆಕೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

Up Assembly Polls: Congress’ ‘Ladki Hun, Lad Sakti Hun’ Face Likely to Join BJP
"ಲಡ್ಕಿ ಹು, ಲಾಡ್ ಸಕ್ತಿ ಹೂ" ಘೋಷಣೆ ಮಾಡಿದೆ ಆದರೆ ಕಾಂಗ್ರೆಸ್ ನನಗೆ ಹೋರಾಡಲು ಅವಕಾಶವನ್ನು ನೀಡಲಿಲ್ಲ," ಎಂದು ಅವರು ಹೇಳಿದರು. ಜನವರಿ 15 ರಂದು ಕಾಂಗ್ರೆಸ್ ತನ್ನ 150 ಅಭ್ಯರ್ಥಿಗಳ ಮೊದಲ ಪಟ್ಟಿ 50 ಮಹಿಳೆಯರನ್ನು ಒಳಗೊಂಡಿತ್ತು. ಆದರೆ ಈ ವೇಳೆ ಮೌರ್ಯ ಅವರು ಟಿಕೆಟ್‌ಗಾಗಿ ತಮಗೆ ಹಣ ನೀಡುವಂತೆ ಪಕ್ಷದ ಕಾರ್ಯಕರ್ತರೊಬ್ಬರು ಕೇಳಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ ಅವರು ಪಕ್ಷವನ್ನು "ಮಹಿಳಾ ವಿರೋಧಿ ಮತ್ತು ಒಬಿಸಿ ವಿರೋಧಿ" ಎಂದೂ ಕರೆದಿದ್ದಾರೆ. ಪ್ರಸ್ತುತ, ಮೌರ್ಯ ಅವರು ಉತ್ತರ ಪ್ರದೇಶದ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷರಾಗಿದ್ದಾರೆ.


ಲಂಚ ಆರೋಪ ಮಾಡಿದ್ದ ಪ್ರಿಯಾಂಕಾ

ಪ್ರಿಯಾಂಕಾ ಗಾಂಧಿ ಅವರ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರಿಗೆ ಲಂಚ ನೀಡಲು ಸಾಧ್ಯವಿಲ್ಲ ಎಂದು ಮೌರ್ಯ ಟ್ವೀಟ್ ಮಾಡಿದ್ದಾರೆ. ತನಗೆ ಟಿಕೆಟ್ ನೀಡುವ ಬದಲು ತಿಂಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಆರೋಪಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ತನಗೆ ಕರೆ ಬಂದಿತ್ತು, ಅದರಲ್ಲಿ ಕರೆ ಮಾಡಿದವರು ಟಿಕೆಟ್‌ಗೆ ಪ್ರತಿಯಾಗಿ ಹಣ ಕೇಳಿದರು, ನಿರಾಕರಿಸಿದ್ದಕ್ಕೆ ಟಿಕೆಟ್ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ನನಗೆ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ನನಗೆ ಬೇಸರವಾಗಿದೆ.

'ಲಡ್ಕಿ ಹೂ, ಲಡ್ ಸಕ್ತಿ ಹೂ'ಎಂಬ ಪ್ರಚಾರಕ್ಕೆ ನನ್ನ ಮುಖವನ್ನೇ ಬಳಸಿಕೊಂಡರು. ನನಗೆ ಲ್ಯಾಂಡ್‌ಲೈನ್ ಕರೆ ಬಂದಿತು ಮತ್ತು ಕರೆ ಮಾಡಿದವರು ನನ್ನ ಟಿಕೆಟ್‌ಗೆ ಹಣಕ್ಕಾಗಿ ಬೇಡಿಕೆಯಿಟ್ಟರು, ಆದರೆ ನಾನು ನಿರಾಕರಿಸಿದೆ. ನನಗೆ ಕೊಟ್ಟ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದೆ, ಆದರೆ ನಾಮನಿರ್ದೇಶನಗಳನ್ನು ಮೊದಲೇ ನಿರ್ಧರಿಸಿ ಒಂದು ತಿಂಗಳ ಹಿಂದಷ್ಟೇ ಸೇರಿರುವ ವ್ಯಕ್ತಿಗೆ ನೀಡಲಾಯಿತು. ಇಂಥದ್ದೆಲ್ಲ ಇಲ್ಲಿ ನಡೆಯುತ್ತಿದೆ ಎಂಬುದನ್ನು ನಾನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಈ ಮೂಲಕ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.

ಇದಾದ ನಂತರ, ಪ್ರಿಯಾಂಕಾ ಗಾಂಧಿಯವರ ಕಾರ್ಯದರ್ಶಿ ಸಂದೀಪ್ ಸಿಂಗ್ ಲಂಚಕ್ಕೆ ಬೇಡಿಕೆಯಿಟ್ಟರು ಎಂದು ಮೌರ್ಯ ಆರೋಪಿಸಿದ್ದಾರೆ. ಪ್ರಿಯಾಂಕಾ ಮೌರ್ಯ ಅವರು ಲಕ್ನೋದ ಸರೋಜಿನಿ ನಗರದಿಂದ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು ಆದರೆ ರುದ್ರ ದಮನ್ ಸಿಂಗ್ ಅವರಿಗೆ ಸ್ಥಾನವನ್ನು ನೀಡಲಾಯಿತು. ಟಿಕೆಟ್ ಹಂಚಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿಷಯವನ್ನು ಯಾರೂ ಪ್ರಸ್ತಾಪಿಸಲು ಬಯಸುವುದಿಲ್ಲ ಎಂದು ಹೇಳಿದ ಅವರು ಕಾಂಗ್ರೆಸ್‌ನಲ್ಲಿನ ಜಾತೀಯತೆಯಿಂದಾಗಿ ಶಾಸಕ ನರೇಶ್ ಸೈನಿ ಪಕ್ಷವನ್ನು ತೊರೆಯಬೇಕಾಯಿತು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್ ತನ್ನ 'ಲಡ್ಕಿ ಹೂ ಲಾಡ್ ಸಕ್ತಿ ಹೂ' ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ಮ್ಯಾರಥಾನ್ ರ್‍ಯಾಲಿಗಳನ್ನು ನಡೆಸುತ್ತಿದ್ದು, ಚುನಾವಣೆಗೆ ಒಳಪಟ್ಟಿರುವ ರಾಜ್ಯದ ಮಹಿಳಾ ಮತದಾರರನ್ನು ತಲುಪುತ್ತಿದೆ. ಆದಾಗ್ಯೂ, ದೇಶದಲ್ಲಿ ಕೋವಿಡ್ -19 ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಭೌತಿಕ ರ್‍ಯಾಲಿಗಳನ್ನು ನಿಷೇಧಿಸಿರುವ ಕಾರಣ ಮ್ಯಾರಥಾನ್ ರ್ಯಾಲಿಗಳನ್ನು ಈಗ ಸ್ಥಗಿತಗೊಳಿಸಲಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+