ಯುಪಿ ಆಡಳಿತ ಪುನರ್ ರಚನೆ: 3 ಜಿಲ್ಲಾ ಮ್ಯಾಜಿಸ್ಟ್ರೇಟ್ - 6 ಐಎಎಸ್ ಅಧಿಕಾರಿಗಳ ವರ್ಗಾವಣೆ
ಲಕ್ನೋ ಏಪ್ರಿಲ್ 17: ಉತ್ತರ ಪ್ರದೇಶದ ಆಡಳಿತ ಪುನರ್ ರಚನೆಯಲ್ಲಿ ಯೋಗಿ ಸರ್ಕಾರ ಶನಿವಾರ ಸಂಜೆ ಅಜಂಗಢ್, ಸೀತಾಪುರ್ ಮತ್ತು ಹಾಪುರ್‌ನಲ್ಲಿ ಹೊಸ ಜಿಲ್ಲಾಧಿಕಾರಿಗಳ ಜೊತೆಗೆ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಅಜಂಗಢ ಡಿಎಂ ಅಮೃತ್ ತ್ರಿಪಾಠಿ ಅವರನ್ನು ತೆಗೆದುಹಾಕಲಾಗಿದೆ ಮತ್ತು ವೇಟಿಂಗ್ ಲಿಸ್ಟ್‌ನಲ್ಲಿ ಇರಿಸಲಾಗಿದೆ. ಅಮೃತ್ ತ್ರಿಪಾಠಿ 2008ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಇನ್ನೂ ಸೀತಾಪುರ ಡಿಎಂ ವಿಶಾಲ್ ಭಾರದ್ವಾಜ್ ಅವರನ್ನು ಅಜಂಗಢದ ಹೊಸ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಡಲಾಗಿದೆ. ವಿಶಾಲ್ ಭಾರದ್ವಾಜ್ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇದಲ್ಲದೇ, ಹಾಪುರ್‌ನ ಡಿಎಂ, 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅನುಜ್ ಸಿಂಗ್ ಅವರನ್ನು ಸೀತಾಪುರದ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಹೆಚ್ಚುವರಿ ಆಯುಕ್ತ ಮೀರತ್ ಮೇಧಾ ರೂಪಮ್ (2014 ಬ್ಯಾಚ್) ಅವರನ್ನು ಹಾಪುರ್‌ನ ಹೊಸ ಡಿಎಂ ಮಾಡಲಾಗಿದೆ.
ಘಾಜಿಯಾಬಾದ್ ಸಿಡಿಒ ಅಸ್ಮಿತಾ ಲಾಲ್ (2015 ಬ್ಯಾಚ್) ಅವರಿಗೆ ಯುಪಿಸಿಡಿಎ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. ಬಿಜ್ನೋರ್ ಜಂಟಿ ಮ್ಯಾಜಿಸ್ಟ್ರೇಟ್ ವಿಕ್ರಮಾದಿತ್ಯ ಸಿಂಗ್ ಮಲಿಕ್ (2018 ರ ಬ್ಯಾಚ್) ಅವರನ್ನು ಸಿಡಿಒ ಗಾಜಿಯಾಬಾದ್ ಹುದ್ದೆಗೆ ವರ್ಗಾಯಿಸಲಾಗಿದೆ. ಇದಕ್ಕೂ ಮುನ್ನ ಶುಕ್ರವಾರ ಸರ್ಕಾರ ಹತ್ತಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಉತ್ತರ ಪ್ರದೇಶದಲ್ಲಿ ವಿಧಾನಪರಿಷತ್ ಚುನಾವಣೆಯ ನಂತರ ಸರ್ಕಾರದಿಂದ ಆಡಳಿತವನ್ನು ಪುನರ್ ರಚನೆ ಮಾಡಲಾಗುತ್ತಿದೆ. ಯುಪಿ ಸರ್ಕಾರವು ಇದುವರೆಗೆ 9 ಜಿಲ್ಲೆಗಳ ಡಿಎಂ ಅನ್ನು ಬದಲಾಯಿಸಿದೆ. ಉತ್ತಮ ಕಾನೂನು ಮತ್ತು ಸುವ್ಯವಸ್ಥೆಗಾಗಿ ಹತ್ತಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಡಿಜಿಪಿ ಕೇಂದ್ರ ಕಚೇರಿಯಿಂದ ಪಿಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಇನ್ನೂ ಬರಬೇಕಿದೆ.












Click it and Unblock the Notifications