India
  • search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾವೈರಸ್ ಲಸಿಕೆಗೆ ಹೆದರಿ ಮನೆಯ ಡ್ರಮ್ ಹಿಂದೆ ಅಡಗಿ ಕುಳಿತ ಅಜ್ಜಿ!

|
Google Oneindia Kannada News

ಲಕ್ನೋ, ಜೂನ್ 03: ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಭಯಪಟ್ಟ ವೃದ್ಧೆಯೊಬ್ಬರು ಮನೆಯಲ್ಲೇ ಇರಿಸಿದ ಡ್ರಮ್ ಹಿಂಭಾಗದಲ್ಲಿ ಬಚ್ಚಿಟ್ಟುಕೊಂಡಿರುವ ಘಟನೆ ಉತ್ತರ ಪ್ರದೇಶ ಏತುವಃ ಜಿಲ್ಲೆಯ ಚಂದಾಂಪುರ್ ಗ್ರಾಮದಲ್ಲಿ ನಡೆದಿದೆ.

ಶಾಸಕಿ ಸರಿತಾ ಭದೌರಿಯಾ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯು ಚಂದಾಂಪುರ್ ಗ್ರಾಮದ ಮನೆ ಮನೆಗೆ ತೆರಳಿ ಕೊವಿಡ್-19 ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಯನ್ನು ಕಂಡ 80 ವರ್ಷದ ಹಾರ್ ದೇವಿ ಮೊದಲು ಮನೆ ಬಾಗಿಲಿನ ಹಿಂಭಾಗದಲ್ಲಿ ಬಚ್ಚಿಟ್ಟುಕೊಂಡರು, ಸಿಬ್ಬಂದಿಯು ಮನೆಯೊಳಗೆ ಆಗಮಿಸುತ್ತಿದ್ದಂತೆ ಮನೆಯಲ್ಲಿ ಇಟ್ಟಿದ್ದ ಡ್ರಮ್ ಹಿಂದೆ ಅವಚಿಕೊಂಡಿರುವ ಘಟನೆ ನಡೆದಿದೆ.

ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ: ಕೊರೊನಾ ಲಸಿಕೆ ಪಡೆಯದಿದ್ದರೆ ಸಂಬಳವಿಲ್ಲ!ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ: ಕೊರೊನಾ ಲಸಿಕೆ ಪಡೆಯದಿದ್ದರೆ ಸಂಬಳವಿಲ್ಲ!

ಕೊರೊನಾವೈರಸ್ ಲಸಿಕೆ ನೀಡುವ ಸಿಬ್ಬಂದಿಯನ್ನು ಕಂಡು ವೃದ್ಧೆ ಅವಚಿಕೊಳ್ಳುವ ದೃಶ್ಯ ಸದ್ದು ಮಾಡುತ್ತಿದೆ. ಅಜ್ಜಿ ಕೊವಿಡ್-19 ಲಸಿಕೆ ನೀಡುವವರು ಬಂದಿದ್ದಾರೆ, ನೀವು ಎಲ್ಲಿದ್ದೀರಾ ಎಂದು ಕೂಗುತ್ತಾರೆ. ಆದರೆ ವೃದ್ಧೆ ಹೊರ ಬರುವುದಕ್ಕೆ ನಿರಾಕರಿಸುತ್ತಿರುವ ವಿಡಿಯೋ ಎಂಬ ಸಂಭಾಷಣೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

"ನಾವು ಕೊರೊನಾವೈರಸ್ ಲಸಿಕೆ ನೀಡಲು ಬಂದಿಲ್ಲ"

ಅಜ್ಜಿ ನೀವು ಹೊರಗೆ ಬನ್ನಿ. ನಾವೊಬ್ಬ ವೈದ್ಯರಾಗಿದ್ದರೂ ಇಲ್ಲಿ ಕೊರೊನಾವೈರಸ್ ಲಸಿಕೆ ನೀಡುವುದಕ್ಕೆ ಬಂದಿಲ್ಲ. ನಿಮ್ಮ ಜೊತೆಗೆ ಮಾತನಾಡುವುದಕ್ಕೆ ಬಂದಿದ್ದೇನೆ. ನಿಮ್ಮ ಶಾಸಕರೂ ಬಂದಿದ್ದಾರೆ, ಹೊರಗೆ ಬಂದು ಮಾತನಾಡಿ ಎಂದು ವೈದ್ಯರೊಬ್ಬರು ಅಜ್ಜಿಯನ್ನು ಕರೆದಿದ್ದಾರೆ. ತದನಂತರದಲ್ಲಿ ಹೊರಗೆ ಬಂದ ವೃದ್ಧೆ ಶಾಸಕಿ ಸರಿತಾ ಭದೌರಿಯಾ ಜೊತೆಗೆ ಮಾತನಾಡುತ್ತಾರೆ.

ಕೊರೊನಾವೈರಸ್ ಲಸಿಕೆ ಬಗ್ಗೆ ಜನರಲ್ಲಿ ತೊಲಗದ ಭಯ:

"ಕೊವಿಡ್-19 ಲಸಿಕೆ ಪಡೆಯುವುದಕ್ಕೆ ಇಂದಿಗೂ ಹಲವರಿಗೆ ಭಯವಿದೆ. ನಮ್ಮೊಂದಿಗೆ ಸಾಕಷ್ಟು ಅಧಿಕಾರಿಗಳಿದ್ದು, ಗ್ರಾಮೀಣ ಭಾಗದಲ್ಲಿ ಜನರಿಗೆ ಲಸಿಕೆ ವಿತರಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತೇವೆ. ನಮ್ಮನ್ನು ಕಂಡಾಕ್ಷಣ ವೃದ್ಧೆಯು ಮೊದಲು ಬಾಗಿಲ ಸಂದಿ, ನಂತರ ಮನೆಯಲ್ಲಿಟ್ಟಿದ್ದ ಡ್ರಮ್ ಹಿಂದೆ ಭಯದಿಂದ ಬಚ್ಚಿಟ್ಟುಕೊಂಡಿದ್ದರು" ಎಂದು ಶಾಸಕಿ ಸರಿತಾ ಭದೌರಿಯಾ ಘಟನೆ ಬಗ್ಗೆ ವಿವರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಲಸಿಕೆ ವಿತರಣೆ ಪ್ರಮಾಣ:

ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಹಿಂದೆ ಬಿದ್ದಿದೆ. 23 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಶೇ.2ರಷ್ಟು ಫಲಾನುಭವಿಗಳಿಗೆ ಮಾತ್ರ ಕೊವಿಡ್-19 ಲಸಿಕೆ ನೀಡಲಾಗಿದೆ. ಕಳೆದ ಮೂರು ತಿಂಗಳಿನಲ್ಲಿ 1.8 ಡೋಸ್ ಲಸಿಕೆಯನ್ನು ಕಳುಹಿಸಿ ಕೊಡಲಾಗಿದ್ದು, 35 ಲಕ್ಷ ಜನರಿಗೆ ಲಸಿಕೆ ವಿತರಿಸಲಾಗಿದೆ.

English summary
UP: 80 years-Old Women goes to Hiding Behind Drum In Afraid Of Coronavirus Vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X