ಯೋಗಿ ಆದಿತ್ಯನಾಥ್‌ಗೆ ಕಪ್ಪು ಬಾವುಟ ತೋರಿಸಿದ ಮಹಿಳೆಗೆ ಎಸ್‌ಪಿ ಟಿಕೆಟ್
ಲಕ್ನೋ ಫೆಬ್ರವರಿ 3: ಉತ್ತರಪ್ರದೇಶ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇತ್ತ ಉಳಿದ ಹಂತದ ಚುನಾವಣೆಗೆ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿವೆ. ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ಪ್ರಬಲ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿವೆ. ಈ ನಡುವೆ ಯೋಗಿ ಆದಿತ್ಯನಾಥ್‌ಗೆ ಕಪ್ಪು ಬಾವುಟ ತೋರಿಸಿದ 25 ವರ್ಷದ ಪೂಜಾ ಶುಕ್ಲಾ ಅವರಿಗೆ ಸಮಾಜವಾದಿ ಪಕ್ಷ ಮಣೆ ಹಾಕಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕಪ್ಪು ಬಾವುಟ ಬೀಸಿ, ಇದು ಪ್ರಜಾಪ್ರಭುತ್ವದ ಪ್ರತಿಭಟನೆ ಎಂದು ಕರೆದಿದ್ದ ಪೂಜಾ ಅವರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿದೆ. ಇವರು ಉತ್ತರದಿಂದ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿದ್ದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಜೂನ್ 2017 ರಲ್ಲಿ ಶುಕ್ಲಾ ಅವರು ಇತರ 10 ಮಂದಿಯೊಂದಿಗೆ ಲಕ್ನೋ ವಿಶ್ವವಿದ್ಯಾಲಯದ ರಸ್ತೆಯಲ್ಲಿ ಆದಿತ್ಯನಾಥ್ ಅವರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ಕಪ್ಪು ಬಾವುಟಗಳನ್ನು ಬೀಸಿದಾಗ ಜನಮನ ಸೆಳೆದರು.

ಮರುದಿನ ಶುಕ್ಲಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಪ್ರತಿಭಟನೆಗೆ ಪ್ರಜಾಸತ್ತಾತ್ಮಕ ವಿಧಾನಗಳನ್ನು ಬಳಸಿದರೂ ಅವರನ್ನು ಬಂಧಿಸಲಾಯಿತು. ನಾವು ಬಂಧನಕ್ಕೊಳಗಾಗುತ್ತೇವೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ. 20 ದಿನಗಳ ನಂತರ ಜೈಲಿನಿಂದ ಹೊರಬಿಡಲಾಯಿತು. ಪೂಜಾ ಶುಕ್ಲಾ ಅವರು ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾದೆವು. ಪಕ್ಷದ ವಿದ್ಯಾರ್ಥಿ ವಿಭಾಗವಾದ ಸಮಾಜವಾದಿ ಛತ್ರ ಸಭಾದಲ್ಲಿ ಅವರು ಕಾರ್ಯನಿರ್ವಹಿಸಿದರು.
ನೀವು ಎಸ್‌ಪಿಯನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ, ಪೂಜಾ ಅವರು, "ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯ ಹೋರಾಟ ಮತ್ತು ಅಖಿಲೇಶ್ ಯಾದವ್ ಅವರ ನೀತಿಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಇದಲ್ಲದೆ ನಾನು ಎಸ್‌ಪಿಯ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹತ್ತಿರವಾಗಿದ್ದೇನೆ. ಬಿಜೆಪಿ ಮತ್ತು ಅದರ ಬೆಂಬಲಿಗರು ಅದನ್ನು ಉಲ್ಲಂಘಿಸಲು ಬಯಸುತ್ತಾರೆ'' ಎಂದು ಅವರು ಹೇಳಿದರು. ಲಕ್ನೋ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ವೇಳೆ ರಸ್ತೆ ತಡೆ ಮೂಲಕ ಮುಖ್ಯಮಂತ್ರಿಯನ್ನು ತಡೆದು ಪ್ರತಿಭಟನೆಗೆ ನಿರಾಕರಿಸಿದ್ದರಿಂದ, 2018 ರಲ್ಲಿ ಪೂಜಾ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
"ಶಿಕ್ಷಣದ ಹೆಸರಿನಲ್ಲಿ ಯುವಕರು ಅದರಲ್ಲೂ ವಿದ್ಯಾರ್ಥಿಗಳನ್ನು ರಾಜಕೀಯದಿಂದ ದೂರ ಇಡಲಾಗಿದೆ ಎಂದು ನನಗೆ ಅನಿಸುತ್ತದೆ. ಇದು ಬದಲಾಗಬೇಕು. ರಾಜಕೀಯ ಅರಿವು ಹೊಂದಿರುವ ವಿದ್ಯಾರ್ಥಿ ಮಾತ್ರ ಉತ್ತಮ ನಾಯಕನನ್ನು ಆಯ್ಕೆ ಮಾಡಬಹುದು. ಯುವಜನರು ದೇಶದ ರಾಜಕೀಯವನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ'' ಎಂದರು. ನಂತರ ಶುಕ್ಲಾ ಅವರು ಜನವರಿ 2020 ರಲ್ಲಿ ಲಕ್ನೋದ ಕ್ಲಾಕ್ ಟವರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಗುಂಪಿನೊಂದಿಗೆ ಸೇರಿಕೊಂಡಿದ್ದರು.
ಎಸ್‌ಪಿ ಶುಕ್ಲಾಗೆ ಟಿಕೆಟ್ ನೀಡಿದರೆ, ಪ್ರತಿಭಟನೆಯ ಮತ್ತೊಂದು ಪರಿಚಿತ ಮುಖವಾದ ಸದಾಫ್ ಜಾಫರ್ ಅವರನ್ನು ಕಾಂಗ್ರೆಸ್ ಪಕ್ಷವು ಲಕ್ನೋ ಸೆಂಟ್ರಲ್‌ನಿಂದ ಕಣಕ್ಕಿಳಿಸಿದೆ. "ಅಧಿಕಾರಕ್ಕೆ ಬಂದಾಗಿನಿಂದ, ಬಿಜೆಪಿಯು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಕೃಷಿ ಕಾನೂನುಗಳಂತಹ ಪ್ರಜಾಸತ್ತಾತ್ಮಕವಲ್ಲದ ಕಾನೂನುಗಳನ್ನು ಜಾರಿಗೆ ತಂದಿದೆ. ಅಂತಹ ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಪ್ರಜಾಸತ್ತಾತ್ಮಕ ಪ್ರತಿಭಟನೆಗಳು ಏಕೈಕ ಮಾರ್ಗವಾಗಿದೆ. ಆದರೆ ಬಿಜೆಪಿ ಜನರ ಪ್ರತಿಭಟನೆಯ ಹಕ್ಕನ್ನು ನಿಗ್ರಹಿಸುವಂತ ಎಲ್ಲಾ ಕೆಲಸವನ್ನು ಮಾಡಿದೆ" ಎಂದು ಶುಕ್ಲಾ ಹೇಳಿದರು. "ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ ಮತ್ತು ಬಿಜೆಪಿ ಅಭ್ಯರ್ಥಿಯ ವಿರುದ್ಧ ಹೋರಾಡಲು ಸಂಪನ್ಮೂಲಗಳ ಕೊರತೆಯಿದೆ. ಆದರೆ, ಪಕ್ಷ ಮತ್ತು ಸ್ಥಳೀಯ ಜನರು, ವಿಶೇಷವಾಗಿ ಯುವಕರ ಬೆಂಬಲದೊಂದಿಗೆ ನಾನು ಕಣಕ್ಕಿಳಿದಿದ್ದೇನೆ. ನಾನು ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದು ನನಗೆ ನಂಬಿಕೆ ಇದೆ" ಎಂದು ಶುಕ್ಲಾ ಹೇಳಿದರು. ಲಕ್ನೋದಲ್ಲಿ ಫೆಬ್ರವರಿ 23 ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ.












Click it and Unblock the Notifications