• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಸೇರಿದ ಬಿಜೆಪಿ ರೆಬೆಲ್ ಸಂಸದೆ ಸಾವಿತ್ರಿಬಾಯಿ ಫುಲೆ

|

ನವದೆಹಲಿ, ಮಾರ್ಚ್ 03: ಪ್ರಧಾನಿ ಮೋದಿ ಅವರು 2014ರ ನಂತರ ಅಮೇಥಿಯಲ್ಲಿ ಚುನಾವಣಾ ಸಮಾವೇಶಕ್ಕೂ ಮುನ್ನ ಬಿಜೆಪಿ ಹಾಲಿ ಸಂಸದೆಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.

ಬಿಜೆಪಿಯ ರೆಬಲ್ ಸಂಸದೆ ಸಾವಿತ್ರಿಬಾಯಿ ಫುಲೆ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಬಹ್ರಾಚ್ ಸಂಸದೆ, ಸಾವಿತ್ರಿಬಾಯಿ ಹಾಗೂ ಸಮಾಜವಾದಿ ಪಕ್ಷದ ಮಾಜಿ ಮುಖಂಡ ರಾಕೇಶ್ ಸಾಚನ್ ಅವರು ಶನಿವಾರದಂದು ಕಾಂಗ್ರೆಸ್ ಪಕ್ಷ ಸೇರಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಜ್ಯೋತಿರಾದಿತ್ಯಾ ಸಿಂದಿಯಾ ಅವರು ಉಪಸ್ಥಿತರಿದ್ದರು.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್: ಸಂಸದೆ ರಾಜೀನಾಮೆ

ಕಳೆದ ವರ್ಷ ಡಾ. ಬಿಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ದಿನದಂದು ಬಿಜೆಪಿ ಸದಸ್ಯತ್ವವನ್ನು ಸಾವಿತ್ರಿಬಾಯಿ ಅವರು ತೊರೆದಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಾನ್ ಜಾತಿ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಾವಿತ್ರಿಬಾಯಿ ಖಂಡಿಸಿದ್ದರು.

ಪರಿಶಿಷ್ಟ ಜಾತಿಯ ನಾಯಕಿಯಾಗಿರುವ ಸಾವಿತ್ರಿಬಾಯಿ ಅವರು ಮೊದಲಿಗೆ ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದ ಜತೆ ಗುರುತಿಸಿಕೊಂಡಿದ್ದರು. 2000ರಲ್ಲಿ ಬಿಜೆಪಿ ಸೇರಿ, 2002, 2007 ಹಾಗೂ 2012 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2012ರಲ್ಲಿ ಗೆಲುವು ಸಾಧಿಸಿದ್ದರು. ಸಾಚನ್ ಅವರು ಫತೇಪುರ್ ಕ್ಷೇತ್ರದ ಸಂಸದರಾಗಿದ್ದು, ಎರಡು ಬಾರಿ ಶಾಸಕರಾಗಿದ್ದರು.

English summary
Former BJP member and Bahraich MP Savitribai Phule on Saturday joined Congress along with ex-SP leader Rakesh Sachan. The two joined the party in presence of Rahul Gandhi, Priyanka Gandhi Vadra and Jyotiraditya Scindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X