ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಮಾರ್ಗ ಮಧ್ಯೆ ತಡೆದ ಅಧಿಕಾರಿಗಳು

ಲಕ್ನೋ, ಜುಲೈ 19: ಸಂತ್ರಸ್ತರ ಕುಟುಂಬವೊಂದನ್ನು ಭೇಟಿಯಾಗಲು ಉತ್ತರ ಪ್ರದೇಶದ ಸೋನ್ ಭದ್ರಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಅಧಿಕಾರಿಗಳಲು ತಡೆದು ಗೆಸ್ಟ್ ಹೌಸ್ ವೊಂದರಲ್ಲಿ ಇರಿಸಿದ ಘಟನೆ ನಡೆದಿದೆ.

ಜುಲೈ 17 ರಂದು ಉತ್ತರ ಪ್ರದೇಶದ ಪೂರ್ವಭಾಗದಲ್ಲಿರುವ ಸೋನ್ ಭದ್ರ ಜಿಲ್ಲೆಯ ಉಭ ಎಂಬ ಹಳ್ಳಿಯಲ್ಲಿ ಜಮೀನಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಒಟ್ಟು 10 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಸಂತ್ರಸ್ತರ ಕುಟುಂಸ್ಥರನ್ನು ಭೇಟಿಯಾಗಿ, ಆಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿಬಿಜೆಪಿ ಸರ್ಕಾರವನ್ನು ತೆಗಳಿ, ಘಟನೆ ನಡೆದ ಸ್ಥಳದಿಂದ ಕದಲಲು ನಿರಾಕರಿಸಿದ ಪ್ರಿಯಾಂಕಾ ಗಾಂಧಿ ಅವರನ್ನು ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಗೆಸ್ಟ್ ಹೌಸ್ ವೊಂದಕ್ಕೆ ಕರೆದೊಯ್ದು ಇರಿಸಲಾಯಿತು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ "ನಿರ್ದಯವಾಗಿ ಕೊಲೆಯಾದವರ ಕುಟುಂಬಸ್ಥರನ್ನು ನೋಡಲು ನಾನು ತೆರಳಿದ್ದೆ. ನನ್ನ ಮಗನ ವಯಸ್ಸಿನ ಒಬ್ಬ ಹುಡುಗ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರನ್ನು ನಾನು ಹೋಗುವುದನ್ನು ತಡೆಯುವುದು ಯಾವ ಕಾನೂನು? ಹೇಳಿ" ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.

Priyanka Gandhi Vadra stopped in Uttar Pradesh

"ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಎಲ್ಲಿಗೆ ಕರೆದುಕೊಂಡು ಹೋದರೂ ನಾನು ಹೋಗುತ್ತೇನೆ. ನಾನು ಶಾಂತಿಯಿಂದ ಇಲ್ಲಿ ಕುಳಿತಿದ್ದೇನೆ. ಆದರೆ ನಮ್ಮನ್ನು ತಡೆಯಲು ನೀಡಿದ ಆದೇಶವನ್ನುಹ ನನಗೆ ದಯವಿಟ್ಟು ತೋರಿಸಿ" ಎಂದು ಪ್ರಿಯಾಂಕಾ ಕೇಳಿದ್ದಾರೆ.

ಭೂವಿವಾದಕ್ಕೆ ಸಂಬಂಧಿಸಿದಂತೆ ಹಳ್ಳಿಯ ಮುಖಂಡ ಮತ್ತು ಹಳ್ಳಿಯ ಇತರ ಜನರ ನಡುವೆ ನಡೆದ ಕಲಹದಲ್ಲಿ, ಮುಖಂಡನ ಬೆಂಬಲಿಗರು ಗುಂಡು ಹಾರಿಸಿದ ಪರಿಣಾಮ ಹತ್ತು ಜನ ಹಳ್ಳಿಗರು ಮೃತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+