ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ನಾಮಪತ್ರ ಸಲ್ಲಿಕೆಯ ನಂತರ ಭಾವುಕರಾಗಿ ಅಪ್ಪನನ್ನು ನೆನೆದ ಪ್ರಿಯಾಂಕಾ

|
Google Oneindia Kannada News

ಅಮೇಥಿ, ಏಪ್ರಿಲ್ 10: "ಇದು ನಮ್ಮ ತಂದೆಯ ಕರ್ಮಭೂಮಿ, ನಮಗೆ ಪವಿತ್ರ ಭೂಮಿ..." ಹಾಗೆಂದು ಭಾವುಕರಾಗಿ ನುಡಿದರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ.

ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ನಂತರ ಅವರಿಗೆ ಶುಭಹಾರೈಸಿದ ಸಹೋದರಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದರು. ತಮ್ಮ ತಂದೆ ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಂಡರು.

Priyanka Gandhi remembers her father Rajiv Gandhi in Amethi

ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದಲೇ ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದರು. ಅವರ ಮರಣದ ನಂತರ ಅವರ ಪುತ್ರ ರಾಹುಲ್ ಗಾಂಧಿ ಅವರೇ, ಕಳೆದ 15 ವರ್ಷಗಳಿಂದ ಈ ಕ್ಷೇತ್ರದಲ್ಲೇ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಾರೆ.

"ಕೆಲವು ಸಂಬಂಧಗಳು ಹೃದಯದಿಂದ ಹುಟ್ಟುತ್ತವೆ. ಇಂದು ನನ್ನ ಸಹೋದರ ಅಮೇಥಿಯಿಂದ ನಾಮಪತ್ರ ಸಲ್ಲಿಸುವಾಗ ನಮ್ಮ ಕುಟುಂಬದ ಎಲ್ಲರೂ ಹಾಜರಿದ್ದೆವು. ಈ ಸಂದರ್ಭದಲ್ಲಿ ತಂದೆಯವರ ನೆನಪಾಯಿತು. ಅಮೇಥಿ ಅವರ ಕರ್ಮಭೂಮಿ, ನಮಗೆ ಇದು ಪವಿತ್ರಭೂಮಿ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ಬಾರಿ ಅಮೇಥಿಯೊಂದಿಗೆ ಕೇರಳದ ವಯನಾಡು ಕ್ಷೇತ್ರದಿಂದಲೂ ರಾಹುಲ್ ಗಾಂಧಿ ಅವರು ಸ್ಪರ್ಧಿಸುತ್ತಿದ್ದು, ಬುಧವಾರ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಪರಿವಾರದ ಎಲ್ಲರೂ ಭಾಗಿಯಾಗಿದ್ದರು.

English summary
Congress leader Priyanka Gandhi remembers her father Rajiv Gandhi, after her brother filed his nomination in Amethi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X