ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಧರಣಿ

|
Google Oneindia Kannada News

ಲಕ್ನೋ,ಫೆಬ್ರವರಿ 03: ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಲಕ್ನೋ ಏರ್‌ಪೋರ್ಟ್‌ನಲ್ಲಿ ಧರಣಿ ಕುಳಿತಿರುವ ಘಟನೆ ಇಂದು ನಡೆದಿದೆ.

ಪ್ರಹ್ಲಾದ್ ಮೋದಿಯವರು ಸುಮಾರು 4 ಗಂಟೆಗೆ ಇಂಡಿಗೋ ವಿಮಾನದಲ್ಲಿ ಬಂದಿದ್ದರು. ಈ ಸಂದರ್ಭದಲ್ಲಿ ಬೆಂಬಲಿಗರು ಅವರತ್ತ ಬರುವುದನ್ನು ತಡೆದ ಪೊಲೀಸರ ಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರ ವಿರುದ್ಧ ವಿಮಾನ ನಿಲ್ದಾಣ ಆವರಣದಲ್ಲಿಯೇ ಧರಣಿ ನಡೆಸಿದ್ದರು ಎಂಬುದಾಗಿ ಲಕ್ನೋ ಚೌಧರಿ ಚರಣ್‌ಸಿಂಗ್ ವಿಮಾನ ನಿಲ್ದಾಣದ ಅಡಿಷನಲ್ ಜನರಲ್ ಮ್ಯಾನೇಜರ್ ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.

 PM Modis Brother Stages Dharna At Lucknow Airport

ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡುವುದು ಸಾಮಾನ್ಯ, ಅಸಮಾಧಾನ ಹೊರಹಾಕುವುದು ಕೂಡ ಅಸಹಜವೇನಲ್ಲ ಆದರೆ ದೇಶದ ಪ್ರಧಾನಿ ಸಹೋದರನೇ ವ್ಯವಸ್ಥೆ ವಿರುದ್ಧ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿತ್ತು.

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆಯುತ್ತಿದ್ದ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತೆರಳುತ್ತಿದ್ದರು. ಇಲ್ಲಿಗೆ ಬಂದು ನೋಡಿದ್ದಾಗ ನನ್ನನ್ನು ಕರೆದೊಯ್ಯಬೇಕಿದ್ದ ಬೆಂಬಲಿಗರನ್ನು ಪೊಲೀಸರು ತಡೆದಿದ್ದು ತಿಳಿದುಬಂದಿತ್ತು. ಅವರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದರು.

ಯಾಕಾಗಿ ಬೆಂಬಲಿಗರನ್ನು ಬಂಧಿಸಲಾಗಿದೆ ಎನ್ನುವ ವರದಿಯನ್ನು ನೀಡದಿದ್ದರೆ ಸುಪ್ರೀಂಕೋರ್ಟ್‌ಗೆ ತೆರಳುವುದಾಗಿ ತಿಳಿಸಿದ್ದಾರೆ.ಆದರೆ ಪೊಲೀಸ್ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದು ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.

English summary
Prime Minister Narendra Modi's brother Prahlad Modi staged a dharna at the Lucknow airport on Wednesday, alleging that police did not let his supporters reach there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X