ಕೆಲವೇ ಗಂಟೆಗಳಲ್ಲಿ ಸಿಎಂ ಅಭ್ಯರ್ಥಿ ನಿಲುವು ಬದಲು: ಪ್ರಿಯಾಂಕಾರನ್ನು ಗೇಲಿ ಮಾಡಿದ ಮಾಯಾವತಿ

ಲಕ್ನೋ ಜನವರಿ 23: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಇಂದು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಿಎಂ ಅಭ್ಯರ್ಥಿ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕಿ ಫ್ಲಿಪ್‌ಫ್ಲಾಪ್ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಬದಲಾಗಿ ಬಿಎಸ್‌ಪಿಗೆ ಮತ ನೀಡುವಂತೆ ಒತ್ತಾಯಿಸಿದರು.

ಯುಪಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಕೆಲವೇ ಗಂಟೆಗಳಲ್ಲಿ ಅವರ ಮುಖ್ಯಮಂತ್ರಿ ಅಭ್ಯರ್ಥಿಯ ನಿಲುವು ಬದಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಮತ ಹಾಕಿ ತಮ್ಮ ಮತವನ್ನು ಹಾಳು ಮಾಡಿಕೊಳ್ಳದಿರುವುದು ಒಳ್ಳೆಯದು. ಬಿಎಸ್‌ಪಿಗೆ ಏಕಪಕ್ಷೀಯವಾಗಿ ಮತ ನೀಡಿ ಎಂದು ಮಾಯಾವತಿ ಹಿಂದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಯುಪಿಯಲ್ಲಿ ಕಾಂಗ್ರೆಸ್‌ನಂತಹ ಪಕ್ಷಗಳು ಜನರ ದೃಷ್ಟಿಯಲ್ಲಿ ಮತ ಕಡಿತದ ಪಕ್ಷಗಳಾಗಿವೆ ಎಂದು ಅವರು ಎರಡನೇ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದ ಯುವಜನರಿಗೆ ಉದ್ಯೋಗ ಸೃಷ್ಟಿ ಯೋಜನೆಯ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ, ಮುಂಬರುವ ಚುನಾವಣೆಯಲ್ಲಿ ತಾವೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್ ಅವರನ್ನು ಹೆಸರಿಸಿದೆ. ಸಮಾಜವಾದಿ ಪಕ್ಷಕ್ಕೆ ಅಖಿಲೇಶ್ ಯಾದವ್ ನೇತೃತ್ವವಿದೆ. ಆದರೆ ಕಾಂಗ್ರೆಸ್‌ಗೆ ಯಾರು ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು.

On Priyanka Gandhi Vadra’s Chief Minister Teaser, Mayawati’s Call-Out

ಅದಾಗ್ಯೂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಊಹಾಪೋಹಗಳ ಕುರಿತು ಎನ್‌ಡಿಟಿವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಿಮಗೆ ಎಲ್ಲಾ ಕಡೆ ನನ್ನ ಮುಖ ಕಾಣಿಸುತ್ತಿದೆ. ಕಾಣಿಸುತ್ತಿಲ್ಲವೇ?' ಎಂದು ಸುದ್ದಿಗಾರರಿಗೆ ಪ್ರಿಯಾಂಕಾ ಮರುಪ್ರಶ್ನೆ ಹಾಕಿದ್ದರು. ಚುನಾವಣಾ ರಾಜಕಾರಣದಿಂದ ದೂರವೇ ಇರುವ ಅವರು, ಈಗ ಅಖಾಡಕ್ಕೆ ಧುಮುಕಲು ಸಿದ್ಧರಿದ್ದಾರೆಯೇ ಎಂಬ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂದು ಅವರನ್ನು ಒತ್ತಿ ಪ್ರಶ್ನಿಸಿದಾಗ ಕೂಡ, 'ನೀವು ನನ್ನ ಮುಖ ನೋಡಬಹುದು, ಕಾಣಿಸುತ್ತಿಲ್ಲವೇ?' ಎಂದು ಪುನಃ ಉಚ್ಚರಿಸಿದ್ದರು.

ಆದರೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಹೇಳಿಕೆಯನ್ನು ಶನಿವಾರ ಹಿಂತೆಗೆದುಕೊಂಡರು. ತಾವು ಶುಕ್ರವಾರ ನೀಡಿದ ಹೇಳಿಕೆಯು ಉತ್ಪ್ರೇಕ್ಷೆಯ ಹೇಳಿಕೆ ಆಗಿತ್ತು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟನೆ ನೀಡಿದರು. ಇದರಿಂದ ಕಿಡಿಕಾರಿದ ಮಾಯಾವತಿ ಯುಪಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಕೆಲವೇ ಗಂಟೆಗಳಲ್ಲಿ ಅವರ ಮುಖ್ಯಮಂತ್ರಿ ಅಭ್ಯರ್ಥಿಯ ನಿಲುವು ಬದಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಮತ ಹಾಕಿ ತಮ್ಮ ಮತವನ್ನು ಹಾಳು ಮಾಡಿಕೊಳ್ಳದಿರುವುದು ಒಳ್ಳೆಯದು ಎಂದಿದ್ದಾರೆ.

ಅಖಿಲೇಶ್ ಯಾದವ್ ಮತ್ತು ಯೋಗಿ ಆದಿತ್ಯನಾಥ್ ಇಬ್ಬರೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿಯಾದ ಬಳಿಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಇಬ್ಬರೂ ಕಣಕ್ಕಿಳಿಯುತ್ತಿದ್ದಾರೆ. 2017ರಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಜತೆಗೂಡಿ ಚುನಾವಣೆ ಎದುರಿಸಿದ್ದವು. 2014ರಲ್ಲಿ 227 ಸೀಟುಗಳಲ್ಲಿ ಗೆದ್ದಿದ್ದ ಎಸ್‌ಪಿ ಕೇವಲ 47 ಸೀಟುಗಳಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಗೆಲುವು ಕಂಡಿತ್ತು.

Recommended Video

      Anushka ಜೊತೆ ಮದುವೆಯಾಗಿ ಕ್ರಿಕೆಟ್ ಬದುಕು ಹಾಳುಮಾಡಿಕೊಂಡ Virat Kohli | Oneindia Kannada

      ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಫೆಬ್ರವರಿ 10 ರಂದು 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+