• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೋಮ್ ಕ್ವಾರಂಟೈನ್‌ನಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಕುಟುಂಬ

|

ಲಕ್ನೋ, ಮೇ 18: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಕುಟುಂಬದವರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮುಂಬೈನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಮಾಡಿದ್ದ ಕಾರಣ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ.

ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಇತ್ತೀಚೆಗೆ ಲಾಕ್‌ಡೌನ್ ನಡುವೆ ಮುಂಬೈಯಿಂದ ಉತ್ತರ ಪ್ರದೇಶದ ಮುಜಫರ್ನಗರದಲ್ಲಿರುವ ತಮ್ಮ ಹುಟ್ಟೂರಿಗೆ ಪ್ರಯಾಣ ಮಾಡಿದ್ದರು. ಹೀಗಾಗಿ, ಸರ್ಕಾರದ ಮಾರ್ಗಸೂಚಿಯಂತೆ ಇವರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

Breaking: ಒಂದೇ ದಿನ 5242 ಕೇಸ್ ಪತ್ತೆ, ಒಟ್ಟು 3029 ಮಂದಿ ಸಾವು

ಈದ್ ಹಬ್ಬವನ್ನು ಆಚರಿಸಲು ನವಾಜುದ್ದೀನ್ ಮೇ 11 ರಂದು ತಮ್ಮ ಹುಟ್ಟೂರಿಗೆ ಬಂದಿದ್ದರು. ಮುಂಬೈನಿಂದ ಉತ್ತರ ಪ್ರದೇಶಕ್ಕೆ ಬರಲು ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಅವರ ತಾಯಿ, ಸಹೋದರ ಮತ್ತು ಅತ್ತಿಗೆ ಕೂಡ ಅವರೊಂದಿಗೆ ಪ್ರಯಾಣ ಮಾಡಿದರು. ಸದ್ಯ, ಎಲ್ಲರನ್ನು ಮೇ 25 ರವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಿದೆ.

ಮುಂಬೈ ಬಿಡುವ ಮುನ್ನ ಹಾಗೂ ಉತ್ತರ ಪ್ರದೇಶ ತಲುಪಿದ ಮೇಲೆ ವೈದ್ಯರು ನವಾಜುದ್ದೀನ್ ಹಾಗೂ ಕುಟುಂಬ ಸದಸ್ಯರಿಗೆ ಕೊರೊನಾ ಪರೀಕ್ಷೆ ನಡೆಸಿದ್ದಾರೆ. ಎಲ್ಲರಿಗೂ ಕೊರೊನಾ ವೈರಸ್‌ ನೆಗೆಟಿವ್ ಎಂದು ದೃಢವಾಗಿದೆ.

ಮುಂಬೈನಲ್ಲಿ ಕೊರೊನಾ ವೈರಸ್‌ ಕೇಸ್‌ಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಲ್ಲಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 30706ಕ್ಕೆ ಏರಿಕೆ ಕಂಡಿದೆ. 1135 ಮಂದಿ ಮರಣ ಹೊಂದಿದ್ದಾರೆ.

English summary
Bollywood actor Nawazuddin Siddiqui and his family members in 14 days home quarantine. After they travelled to Uttara Pradesh from Mumbai amid the coronavirus lockdown
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X