ಅಖಿಲೇಶ್ ಯಾದವ್ ಬಳಿಕ ಯುಪಿ ಸಿಎಂ ವಿರುದ್ಧ ಪ್ರಿಯಾಂಕಾ ಗಂಭೀರ ಆರೋಪ
ಪ್ರಯಾಗ್‌ರಾಜ್ ಡಿಸೆಂಬರ್ 21: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಫೋನ್ ಕದ್ದಾಲಿಕೆ ಆರೋಪ ಪ್ರತ್ಯಾರೋಪ ಮಾಡಲಾಗುತ್ತಿದೆ. ತಮ್ಮ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. ಈ ವೇಳೆ ಅವರು ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮಾಡಿರುವ ಫೋನ್ ಕದ್ದಾಲಿಕೆ ಆರೋಪಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಸರ್ಕಾರಕ್ಕೆ ಬೇರೆ ಕೆಲಸವಿಲ್ಲವೆಂದು ಇದನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಹರಿಹಾಯ್ದಿದ್ದಾರೆ.
ಮಂಗಳವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪಿಎಂ ಮೋದಿಯವರ 'ನಾರಿ ಶಕ್ತಿ' ಕುರಿತು ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಯ್ ಬರೇಲಿಯಲ್ಲಿ (Rae Bareli) ನಾನು ನಡೆಸಿದ ಲಡ್ಕಿ ಹೂಂ ಲಡ್ ಸಕ್ತಿ ಹೂಂ ಶಕ್ತಿ ಸಂವಾದದ (Ladki Hoon Lad Sakti Hoon Shakti Samvaad )ಬಳಿಕ ಪ್ರಧಾನಿ ಮೋದಿ ಮಹಿಳೆಯರ ಸಶಕ್ತೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. "ಮಹಿಳೆಯರು ಎಚ್ಚೆತ್ತುಕೊಂಡಿದ್ದಾರೆ. ಈ ದೇಶದ ಶಕ್ತಿಯ ಮುಂದೆ ಪ್ರಧಾನಿ ತಲೆಬಾಗಿದ್ದಾರೆ. ಇದು ಉತ್ತರ ಪ್ರದೇಶದ ಮಹಿಳೆಯರ ಗೆಲುವು, ನನಗೆ ತುಂಬಾ ಸಂತೋಷವಾಗಿದೆ" ಎಂದು ಅವರು ಹೇಳಿದರು. ಕಳೆದ ಐದು ವರ್ಷದಲ್ಲಿ ಅವರು ಮಹಿಳೆಯರಿಗಾಗಿ ಯೋಜನೆಗಳನ್ನು ತರಬಹುದಿತ್ತು. ಆದರೆ ಈಗ ಚುನಾವಣೆ ಬೆನ್ನಲ್ಲೇ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ.
ಈ ಮೊದಲು ಭಾನುವಾರ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ಸರ್ಕಾರದ ಕೆಲಸವೇನು? ವಿಕಾಸ ಮಾಡುವುದು, ಜನರ ಸಮಸ್ಯೆಗಳನ್ನು ದೂರ ಮಾಡುವುದು, ಅತ್ಯಾಚಾರಗಳನ್ನು ನಿಲ್ಲಿಸುವುದು. ಆದರೆ ಸರ್ಕಾರ ಈ ಎಲ್ಲಾ ಕೆಲಸಗಳನ್ನು ಬಿಟ್ಟು, ಪ್ರತಿಪಕ್ಷಗಳ ಫೋನ್ ಕದ್ದಾಲಿಕೆ ಮಾಡುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ಫೋನ್ ಕದ್ದಾಲಿಕೆ' ಮಾಡಿದ್ದಾರೆ ಎಂದು ಆರೋಪಿಸಿದರು.
''ನಮ್ಮೆಲ್ಲ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನಮ್ಮ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ, ಪಕ್ಷದ ಕಚೇರಿಯಲ್ಲಿನ ಎಲ್ಲಾ ಫೋನ್‌ಗಳ ಕರೆಗಳನ್ನು ಕದ್ದು ಆಲಿಸಲಾಗುತ್ತಿದೆ. ಸಂಜೆಯ ವೇಳೆ ಸಿಎಂ ಅವರೇ ಕೆಲವು ಧ್ವನಿಮುದ್ರಿಕೆಗಳನ್ನು ಕೇಳುತ್ತಿದ್ದಾರೆ. ನಮ್ಮನ್ನು ಸಂಪರ್ಕಿಸಿದರೆ ನಿಮ್ಮ ಕರೆಯನ್ನು ಕದ್ದಾಲಿಸಲಾಗುತ್ತದೆ ಎಂದು ತಿಳಿಯಿರಿ. ಯೋಗಿ ಅವರು ತಮ್ಮ ಮಾತು ಕೇಳುತ್ತಾರೆ' ಎಂದು ಆರೋಪಿಸಿದರು.

ಅಖಿಲೇಶ್ ಯಾದವ್ ಆಪ್ತರ ಮನೆ ಮೇಲೆ ಐಟಿ ದಾಳಿಯಾಗಿದೆ. ಅದರ ಬೆನ್ನಲ್ಲೇ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದ ಅಖಿಲೇಶ್ ಯಾದವ್, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಗೆ ಸೋಲುವ ಭಯ ಶುರುವಾಗಿದೆ. ಹೀಗಾಗಿ ಕೇಂದ್ರ ತನಿಖಾ ದಳಗಳ ಪ್ರಯೋಗ ಮಾಡಲು ಪ್ರಾರಂಭ ಮಾಡಿದೆ ಎಂದಿದ್ದರು. ಮತ್ತೆ ಈ ಬಗ್ಗೆ ಲಖನೌನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲೇಶ್ ಯಾದವ್, ನಮ್ಮೆಲ್ಲ ಫೋನ್ಗಳೂ ಕದ್ದಾಲಿಕೆ ಆಗುತ್ತಿವೆ. ಸಮಾಜವಾದಿ ಪಕ್ಷದ ಕಚೇರಿಯಲ್ಲಿರುವ ಫೋನ್ಗಳೂ, ನನ್ನೊಂದಿಗೆ ಇರುವ ಜನರ ಫೋನ್ಗಳನ್ನೆಲ್ಲ ಟ್ಯಾಪ್ ಮಾಡಲಾಗಿದೆ. ಹೀಗೆ ರೆಕಾರ್ಡ್ ಆದ ಧ್ವನಿಮುದ್ರಿಕೆಗಳನ್ನು ಯೋಗಿ ಆದಿತ್ಯನಾಥ್ ಪ್ರತಿದಿನ ಸಂಜೆ ಕೇಳುತ್ತಾರೆ. ಇದೊಂದು ಅನುಪಯುಕ್ತ ಸರ್ಕಾರ, ಯೂಸ್ಲೆಸ್ ಮುಖ್ಯಮಂತ್ರಿ ಎಂದು ಹೇಳಿದ್ದರು.
Recommended Video
ಅಖಿಲೇಶ್ ಯಾದವ್ ಆರೋಪಕ್ಕೆ ಉತ್ತರಿಸಿದ ಯುಪಿ ಸಿಎಂ, "ಬಹುಶಃ ಅಖಿಲೇಶ್ ಅವರು ಅಧಿಕಾರದಲ್ಲಿದ್ದಾಗ ಇದೇ ರೀತಿ ಮಾಡಿದ್ದಾರೆ. ಆದ್ದರಿಂದ ಅವರು ಈಗ ಇತರರ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications