ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಅಸ್ತಿ ಗಳಿಕೆ ಕೇಸ್ : ಮುಲಾಯಂ, ಅಖಿಲೇಶ್ ಗೆ ಕ್ಲೀನ್ ಚಿಟ್

|
Google Oneindia Kannada News

ನವದೆಹಲಿ, ಮೇ 21: ಆಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖಂಡರಾದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಅವರಿಗೆ ಸಿಬಿಐನಿಂದ ಕ್ಲೀನ್ ಚಿಟ್ ಸಿಕ್ಕಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಪ್ಪ-ಮಗ ನೆಮ್ಮದಿಯ ಸುದ್ದಿಯನ್ನು ಪಡೆದುಕೊಂಡಿದ್ದಾರೆ.

ಮುಲಾಯಂ ಹಾಗೂ ಅಖಿಲೇಶ್ ಅವರ ವಿರುದ್ಧದ ಆರೋಪ ಸಾಬೀತುಪಡಿಸಲು ಸೂಕ್ತ ಕಾರಣ, ದಾಖಲೆ, ಸಾಕ್ಷಿಗಳು ಸಿಕ್ಕಿಲ್ಲ, ಹೀಗಾಗಿ, ಆರೋಪಿಗಳ ವಿಚಾರಣೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟಿಗೆ ಸಿಬಿಐ ತಿಳಿಸಿದೆ.

ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ಆಸ್ತಿ ವಿವರಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ಆಸ್ತಿ ವಿವರ

ಆಗಸ್ಟ್ 07, 2013ರಲ್ಲೇ ಈ ಕೇಸಿನ ತನಿಖೆಯನ್ನು ಮುಗಿಸಿರುವುದಾಗಿ ಸಿಬಿಐ ಅಫಿಡವಿಟ್ ಸಲ್ಲಿಸಿತ್ತು. ಸದ್ಯ ಈ ಪ್ರಕರಣದಿಂದ ಖುಲಾಸೆ ಬಯಸಿ ಅಪ್ಪ-ಮಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಸಿಬಿಐನಿಂದ ಕ್ಲೀನ್ ಚಿಟ್ ಸಿಕ್ಕಿದೆ. ಮುಂದಿನ ವಿಚಾರಣೆಯನ್ನು ಜುಲೈಗೆ ಮುಂದೂಡಲಾಗಿದೆ.

Mulayam, Akhilesh Yadav get CBI clean chit in DA case

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ಜಸ್ಟೀಸ್ ದೀಪಕ್ ಗುಪ್ತ ಅವರಿದ್ದ ಸುಪ್ರೀಂಕೋರ್ಟಿನ ವಿಭಾಗೀಯ ಪೀಠವು, ವಕೀಲ ವಿಶ್ವನಾಥ್ ಚತುರ್ವೇದಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಏಪ್ರಿಲ್ ನಲ್ಲಿ ನಡೆಸಿ, ಸಿಬಿಐಗೆ ನೋಟಿಸ್ ನೀಡಿತ್ತು.

ನಮ್ಮವರೇ ಪಕ್ಷ ಮುಗಿಸಿಹಾಕುತ್ತಿದ್ದಾರೆ : ಮಗನ ಮೇಲೆ ಮುಲಾಯಂ ಆಕ್ರೋಶ ನಮ್ಮವರೇ ಪಕ್ಷ ಮುಗಿಸಿಹಾಕುತ್ತಿದ್ದಾರೆ : ಮಗನ ಮೇಲೆ ಮುಲಾಯಂ ಆಕ್ರೋಶ

1999 ರಿಂದ 2005ರ ಅವಧಿಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಮುಲಾಯಂ ಸಿಂಗ್ ಯಾದವ್ ಅವರು 100 ಕೋಟಿ ರು ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪ ಹೊರೆಸಲಾಗಿತ್ತು

English summary
The Central Bureau of Investigation (CBI) has informed the Supreme Court that it gave a clean chit to Samajwadi Party leaders Mulayam Singh Yadav and Akhilesh in connection with a disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X