'ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ'

ಲಕ್ನೋ, ಜನವರಿ 22: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ಸ್ ಬಳಕೆ ಮಾಡುವಂತೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಯಾವತಿ ಮಂಗಳವಾರ(ಜನವರಿ 22) ದಂದು ಆಗ್ರಹಿಸಿದ್ದಾರೆ..

ಯುಎಸ್ ಮೂಲದ ಭಾರತೀಯ ಸೈಬರ್ ತಜ್ಞರೊಬ್ಬರು, 2014ರ ಲೋಕಸಭೆ ಸಂದರ್ಭದಲ್ಲಿ ಇವಿಎಂಗಳು ಹ್ಯಾಕ್ ಆಗಿತ್ತು. ಇದರಿಂದ ಬಿಜೆಪಿಗೆ ಲಾಭವಾಯಿತು ಎಂದು ಲಂಡನ್ನಿನಲ್ಲಿ ನಡೆದ ಹ್ಯಾಕಥಾನ್ ನಲ್ಲಿ ಹೇಳಿದ ಬಳಿಕ ಇವಿಎಂ ವಿರೋಧಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿಯ ಕುತಂತ್ರಕ್ಕೆ ಮತ್ತೊಮ್ಮೆ ಬಲಿಯಾಗುವುದು ಬೇಡ, ಈ ಬಾರಿ ಬ್ಯಾಲೆಟ್ ಪೇಪರ್ ಗಳನ್ನು ಬಳಸಿ ಎಂದು ಚುನಾವಣಾ ಆಯೋಗಕ್ಕೆ ಮಾಯಾವತಿ ಮನವಿ ಮಾಡಿದ್ದಾರೆ.

ಬ್ಯಾಲೆಟ್ ಪೇಪರ್ಸ್ ಕೂಡಾ ಮೂರು ಸ್ತರದ ಸುರಕ್ಷತೆಯನ್ನು ಒದಗಿಸಬಲ್ಲದು ಹಾಗೂ ಅದನ್ನು ಪರೀಕ್ಷಿಸಬಹುದು. ಆದರೆ, ಇವಿಎಂಗಳ ಮೇಲೆ ಕಾಣದ ಕೈಗಳ ಕೈವಾಡ ಬಯಲಿಗೆ ಬರುವುದು ತಡವಾಗುತ್ತದೆ. ಸಾರ್ವಜನಿಕರಿಗೆ ತಮ್ಮ ಅಮೂಲ್ಯ ಹಕ್ಕು ವ್ಯರ್ಥವಾಗದಂತೆ, ಅನ್ಯರಿಗೆ ಮತ ಬದಲಾಗದಂತೆ ತಡೆಯಬೇಕಿದೆ ಎಂದು ಮಯಾವತಿ ಹೇಳಿದರು.

Mayawati demands ballot papers for LS polls

ಸೈಯದ್ ಸುಜಾ ಹೆಸರಿನ ಹ್ಯಾಕರ್ ರೊಬ್ಬರು ಇವಿಎಂ ಹ್ಯಾಕ್ ಮಾಡಬಹುದು, 2014ರ ಇವಿಎಂ ಹ್ಯಾಕ್ ಬಗ್ಗೆ ತಿಳಿದಿದ್ದವರನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ. ರಿಲಯನ್ಸ್ ಜಿಯೋ ಹಾಗೂ ಬಿಜೆಪಿ ನಡುವಿನ ಮೈತ್ರಿಯಿಂದ ಚುನಾವಣೆ ಫಲಿತಾಂಶ ಬದಲಾಗಿದ್ದನ್ನು ವಿವರಿಸಿದ್ದಾರೆ. ಹೀಗಾಗಿ, ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲಿಸಲಿ ಎಂದಿದ್ದಾರೆ.

ಆದರೆ, 2014ರಲ್ಲಿ ಜಿಯೋ ಅಸ್ತಿತ್ವದಲ್ಲೆ ಇರಲಿಲ್ಲ, ಹ್ಯಾಕರ್ ಹೇಳಿದ್ದೆಲ್ಲ ಸತ್ಯಕ್ಕೆ ದೂರವಾಗಿದ್ದು, ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+