ರಾಹುಲ್ ಗಾಂಧಿಯನ್ನು ಸೋಲಿಸಿದ್ದೇಕೆ: ಅಮೇಥಿ ವ್ಯಕ್ತಿ ಬಿಚ್ಚಿಟ್ಟ ಸತ್ಯ
Recommended Video
ಅಮೇಥಿ, ಮೇ 29: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲಿಗೆ ಕಾರಣವೇನು? ರಾಜಕೀಯ ಪಂಡಿತರು ಈಗಾಗಲೇ ಇದಕ್ಕೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ. ಆದರೆ ಅಸಲೀ ಕಾರಣ ಗೊತ್ತಾಗುವುದು ಅಲ್ಲಿನ ಜನರನ್ನು ಮಾತನಾಡಿಸಿದಾಗಲೇ!
ಅಮೇಥಿಯ ವ್ಯಕ್ತಿಯೊಬ್ಬರು 'ದಿ ಹಿಂದು' ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡುತ್ತ ತಾವು ರಾಹುಲ್ ಗಾಂಧಿ ಅವರನ್ನು ಸೋಲಿಸುವ ನಿರ್ಧಾರಕ್ಕೆ ಬಂದಿದ್ದೇಕೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ನಮ್ಮನ್ನು ರಾಹುಲ್ ಗಾಂಧಿ ಅವರು 'ಟೇಕನ್ ಫಾರ್ ಗ್ರ್ಯಾಂಟೆಡ್' ಎಂಬಂತೆ ನೋಡಿದ್ದರು. ನಾವ್ಯಾರೂ ಮೂರ್ಖರಲ್ಲ ಎಂಬುದನ್ನು ತೋರಿಸಿಕೊಡಬೇಕಿತ್ತು ಎಂದು ರಾಮ್ ಪ್ರಕಾಶ್ ಸೋಂಕರ್ ಎಂಬುವವರು ಹೇಳಿದ್ದಾರೆ.
ವಿವಿಐಪಿ ಸಂಸ್ಕೃತಿಯಿಂದ ವೋಟು ಪಡೆಯುವುದಕ್ಕಾಗುವುದಿಲ್ಲ ಎಂಬುದನ್ನು ನಾವು ಅಮೇಥಿಯ ಜನರು ತೋರಿಸಿಕೊಟ್ಟಿದ್ದೇವೆ ಎಂದು ಸೋಂಕರ್ ಹೇಳಿದರು.
ರಾಹುಲ್ ಸೋಲಿಗೆ ಸೋಂಕರ್ ಎಂಬ ಅಮೇಥಿಯ ಒಬ್ಬ ಸಾಮಾನ್ಯ ವ್ಯಕ್ತಿ ನೀಡಿದ ಕಾರಣಗಳು ಮತದಾರರನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ನೋಡುವ ಎಲ್ಲಾ ರಾಜಕಾರಣಿಗಳಿಗೂ ಛಾಟಿ ಏಟು. ಸೋಂಕರ್ ಮಾತಿನ ಸಾರಾಂಶ ಇಲ್ಲಿದೆ....

ವರ್ಷಕ್ಕೊಮ್ಮೆ ಬಂದು ಕೈಬೀಸಿ ಹೋದರೆ ಮುಗಿಯಿತೇ?
"ರಾಹುಲ್ ಗಾಂಧಿ ಅವರು ನಮ್ಮನ್ನು(ಅಮೇಥಿಯ ಜನರು) ಮೂರ್ಖರು ಎಂದುಕೊಂಡಿದ್ದರು ಅನ್ನಿಸುತ್ತೆ. ಒಮ್ಮೆ ಬಂದು ಕೈ ಬೀಸಿ ಹೋದರೆ ನಾವು ಅವರಿಗೆ ಮತಹಾಕಿಬಿಡುತ್ತೇವೆ ಎಂದುಕೊಂಡಿದ್ದರು. ಆದರೆ ಅವರು ನಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದನ್ನು ನಾವು ಯೋಚಿಸುವುದಕ್ಕೆ ಆರಂಭಿಸಿದ್ದೆವು!"

ವಿವಿಐಪಿ ಸಂಸ್ಕೃತಿ
"2014 ರಲ್ಲಿ ಗೆದ್ದ ನಂತರವೂ ರಾಹುಲ್ ಗಾಂಧಿ ಅಪರೂಪಕ್ಕೊಮ್ಮೆ ಅಮೇಥಿಗೆ ಬಂದರೂ ಅನುಸರಿಸುತ್ತಿದ್ದುದು ವಿವಿಐಪಿ ಸಂಸ್ಕೃತಿ. ಕೆಲವು ಆಯ್ದ ಖ್ಯಾತನಾಮರನ್ನು ಮಾತ್ರ ರಾಹುಲ್ ಗಾಂಧಿ ಭೇಟಿ ಮಾಡಿ ಹೋಗುತ್ತಿದ್ದರು. ಜನ ಸಾಮಾನ್ಯರಿಗೆ ಬೇಕಿದ್ದುದು ತಮ್ಮ ಅಹವಾಲು ಕೇಳುವ ಸಂಸದ"

ಸೋತರೂ ಕ್ಷೇತ್ರಕ್ಕೆ ಬರುತ್ತಿದ್ದ ಸ್ಮೃತಿ ಇರಾನಿ
"ರಾಹುಲ್ ಗಾಂಧಿ ಗೆದ್ದ ಮೇಲೆ ಅಮೇಥಿಗೆ ಬಂದಿದ್ದೇ ಕಡಿಮೆ. ಆದರೆ ಸ್ಮೃತಿ ಇರಾನಿ ಅವರು ಸೋತರೂ ಎಷ್ಟೋ ಬಾರಿ ಅಮೇಥಿಗೆ ಬಂದು ಇಲ್ಲಿನ ಜನರ ನಾಡಿಮಿಡಿತ ಅರಿವ ಯತ್ನ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಅಮೇಥಿಯ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ. ತಮ್ಮನ್ನು ಸೋಲಿಸಿದ ಜನರ ಮೇಲೂ ವಿಶ್ವಾಸ ಇರಿಸಿಕೊಂಡು, ನಮ್ಮ ಸೇವೆ ಮಾಡಿದ ಅವರ ನಡೆ ನಮ್ಮಲ್ಲಿ ಅವರ ಮೇಲಿನ ಗೌರವವನ್ನು ಹೆಚ್ಚಿಸಿತ್ತು"

ಬಿಜೆಪಿಯತ್ತ ವಾಲಿದ ಮತದಾರ
"2017 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲೇ ಅಮೇಥಿಯ ಜನರು ಕಾಂಗ್ರೆಸ್ ವಿರುದ್ಧ ವಾಲುತ್ತಿದ್ದರು. ಅಮೇಥಿ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ 2017 ರಲ್ಲೇ ರಾಜಕೀಯ ಚಿತ್ರಣ ಬದಲಾಗಿತ್ತು. ಮತದಾರ ಕಾಂಗ್ರೆಸ್ ತೊರೆಯವ ಸೂಚನೆಯನ್ನು ಆಗಲೇ ನೀಡಿದ್ದ. ಆದರೆ ಅದನ್ನು ರಾಹುಲ್ ಗಾಂಧಿಯಾಗಲೀ, ಸ್ಥಳೀಯ ಕಾಂಗ್ರೆಸ್ ಮುಖಂಡರಾಗಲೀ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರ ಪರಿಣಾಮವೇ ಲೋಕಸಭೆ ಚುನಾವಣೆ ಫಲಿತಾಂಶ"
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications