ಲಖನೌನಲ್ಲಿ ಮಗ ಅನೂಪ್ ಎಸ್ಪಿಯಾದರೆ, ಅಪ್ಪ ಜನಾರ್ದನ್ ಕಾನ್ಸ್ ಟೇಬಲ್

ಲಖನೌ, ಅಕ್ಟೋಬರ್ 29: "ನನ್ನ ಮಗನೇ ನನಗೆ ಹಿರಿಯ ಅಧಿಕಾರಿಯಾಗಿ ಬಂದಿರುವುದು ಹೆಮ್ಮೆಯ ವಿಷಯ. ಇದು ನನ್ನ ಪಾಲಿಗೆ ಗೌರವ. ಆತನ ಕೆಳಗೆ ಕೆಲಸ ಮಾಡುವುದು ಬಹಳ ಸಂತಸದ ವಿಷಯ" ಎಂದಿದ್ದಾರೆ ಪೊಲೀಸ್ ಕಾನ್ಸ್ ಟೇಬಲ್ ಜನಾರ್ದನ್ ಸಿಂಗ್.

ವಿಷಯ ಏನೆಂದರೆ. ಭಾನುವಾರವಷ್ಟೇ ಲಖನೌಗೆ ಎಸ್ ಪಿ(ಉತ್ತರ) ಆಗಿ ಅನೂಪ್ ಸಿಂಗ್ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಅನೂಪ್ ಸಿಂಗ್ ರ ತಂದೆ ಜನಾರ್ದನ್ ಸಿಂಗ್. ಅವರು ಈಗ ತಮ್ಮ ಮಗನ ನಾಯಕತ್ವದಲ್ಲೇ ಕೆಲಸ ಮಾಡಬೇಕು.

ಈ ಬಗ್ಗೆ ನಿಮಗೆ ಏನನ್ನಿಸುತ್ತದೆ ಅಂತ ಕೇಳಿದರೆ, ಇದಕ್ಕಿಂತ ಖುಷಿಯಾದ ಸಂಗತಿ ಏನಿದೆ? ಪೊಲೀಸ್ ಅಧಿಕಾರಿಯಾಗಿ ಆತ ನನಗಿಂತ ಗಟ್ಟಿ. ಅಧಿಕಾರಿಯಾದ ಅವನಿಗೆ ಸೆಲ್ಯೂಟ್ ಮಾಡುವುದರಲ್ಲಿ ಯಾವ ಮುಜುಗರವೂ ಇಲ್ಲ ಎನ್ನುತ್ತಾರೆ ಜನಾರ್ದನ್ ಸಿಂಗ್.

Lucknow police constables son becomes his boss as top cop

ಜನಾರ್ದನ್ ಸಿಂಗ್ ಲಖನೌನ ವಿಭೂತಿ ಖಾಂಡ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅನೂಪ್ ಸಿಂಗ್ ಅವರನ್ನು ಉನ್ನಾವೋದಿಂದ ಲಖನೌಗೆ ವರ್ಗಾವಣೆ ಮಾಡಲಾಗಿದೆ. "ನನ್ನ ಅಪ್ಪನಿಂದ ಬಹಳ ಕಲಿತಿದ್ದೀನಿ. ಅವರ ಜತೆ ಸೇರಿ ಕೆಲಸ ಮಾಡೂವುದು ಸಂತೋಷದ ವಿಷಯ. ವೃತ್ತಿ ಸಂಬಂಧವು ವೈಯಕ್ತಿಕ ಬದುಕಿನ ಮೇಲೆ ಯಾವ ಪರಿಣಾಮವೂ ಬೀರಲ್ಲ" ಎಂದಿದ್ದಾರೆ ಅನೂಪ್.

Lucknow police constables son becomes his boss as top cop

ಕಾನ್ಸ್ ಟೇಬಲ್ ಜನಾರ್ದನ್ ಸಿಂಗ್ ಹಾಗೂ ಕಾಂಚನ್ ಅವರ ಒಬ್ಬನೇ ಮಗ ಅನೂಪ್ ಸಿಂಗ್. ತಮ್ಮ ಮಗನ ಬಗ್ಗೆ ಇಡೀ ಕುಟುಂಬಕ್ಕೆ ಸಂತೋಷ ಹಾಗೂ ಹೆಮ್ಮೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+